108ರನ್ ಟಾರ್ಗೆಟ್ ಬೆನ್ನತ್ತಿದ ಮಧ್ಯಪ್ರದೇಶ
ಮುಂಬೈ ತಂಡವು ನಾಲ್ಕನೇ ದಿನದಾಟದಂತ್ಯಕ್ಕೆ ಎರಡು ವಿಕೆಟ್ ನಷ್ಟಕ್ಕೆ 113ರನ್ ಕಲೆಹಾಕಿದ್ದು, ಲೀಡ್ ಪಡೆಯಲು 49ರನ್‌ಗಳ ಹಿನ್ನಡೆಯಲ್ಲಿತ್ತು. ಅಂತಿಮ ದಿನದಾಟದಲ್ಲಿ ಮಧ್ಯ 269ರನ್‌ಗಳಿಗೆ ಆಲೌಟ್ ಆಗುವ ಮೂಲಕ ಮಧ್ಯಪ್ರದೇಶ ತಂಡಕ್ಕೆ 108ರನ್‌ಗಳ ಗುರಿ ನೀಡಿತ್ತು.
ಈ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿದ ಮಧ್ಯಪ್ರದೇಶ ತಂಡವು ಆರು ವಿಕೆಟ್‌ಗಳ ಗೆಲುವನ್ನು ಸಾಧಿಸಿದ್ದು ಚೊಚ್ಚಲ ಟ್ರೋಫಿ ಮೇಲೆ ಕೈ ಇಟ್ಟಿದೆ. ಮಧ್ಯಪ್ರದೇಶ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ಹಿಮಾಂಶು ಮತ್ರಿ 37, ಯಶ್ ದುಬೆ 1, ಶುಭಂ ಎಸ್. ಶರ್ಮ 30, ಪಾರ್ಥ್ ಸಹನಿ 5, ರಜತ್ ಪಾಟೀದಾರ್ ಅಜೇಯ 30, ಆದಿತ್ಯ ಶ್ರೀವಾಸ್ತವ ಅಜೇಯ 1ರನ್‌ಗಳೊಂದಿಗೆ ತಂಡಕ್ಕೆ ಗೆಲುವು ತಂದುಕೊಂಡಿದ್ದಾರೆ.
23 ವರ್ಷಗಳ ಬಳಿಕ ಕೋಚ್ ಚಂದ್ರಕಾಂತ್ ಪಂಡಿತ್ ಕನಸು ನನಸು
ಮಧ್ಯಪ್ರದೇಶದ ಕೋಚ್ ಚಂದ್ರಕಾಂತ್ ಪಂಡಿತ್ ತಮ್ಮ ಭಾವನೆಗಳನ್ನು ನಿಯಂತ್ರಿಸಲು ಕಷ್ಟಪಡುತ್ತಿದ್ದರು. ಇದಕ್ಕೆ ಕಾರಣ ಮುಂಬೈನಂತಹ ಬಲಿಷ್ಠ ತಂಡವನ್ನ ಫೈನಲ್‌ನಲ್ಲಿ ಮಣಿಸಿ ಮಧ್ಯಪ್ರದೇಶ ಚಾಂಪಿಯನ್ ಆಗಿರುವುದು. ಇದಕ್ಕೂ ವಿಶೇಷ ವಿಚಾರವೇನೆಂದ್ರೆ ಚಂದ್ರಕಾಂತ್ ಪಂಡಿತ್‌ಗೆ ಆಗದೇ ಇರುವುದನ್ನ ಯುವ ಮಧ್ಯಪ್ರದೇಶ ತಂಡವು ಮಾಡಿ ತೋರಿಸಿದೆ.
1988-89ರಲ್ಲಿ ಮಧ್ಯಪ್ರದೇಶತ ತಂಡಕ್ಕೆ ನಾಯಕನಾಗಿ ಸ್ಪರ್ಧಿಸಿದ್ದ ಚಂದ್ರಕಾಂತ್ ಏಕೈಕ ರಣಜಿ ಟ್ರೋಫಿ ಫೈನಲ್‌ನಲ್ಲಿ ಸೋತಿದ್ದರು. ಅದು ಕೂಡ ಚಿನ್ನಸ್ವಾಮಿ ಮೈದಾನದಲ್ಲಿ ಮುಗ್ಗರಿಸಿದ್ದ ತಂಡವು, ಅಲ್ಲಿಯೇ ಸ್ಮರಣೀಯ ಗೆಲುವಿಗೆ ಕಾರಣವಾಗಿದೆ.
"ಇದೊಂದು ಅದ್ಭುತವಾದ ನೆನಪು. ನಾನು 23 ವರ್ಷಗಳ ಹಿಂದೆ ಇದೇ ಮೈದಾನದಲ್ಲಿ ಅದನ್ನು ಬಿಟ್ಟುಬಿಟ್ಟೆ(ರಣಜಿ ಟ್ರೋಫಿ). ದೇವರ ಆಶೀರ್ವಾದದಿಂದ ನಾವು ಇಲ್ಲಿಗೆ ಮರಳಿದ್ದೇವೆ ಮತ್ತು ಈ ಟ್ರೋಫಿಯನ್ನು ಗೆದ್ದಿರುವುದು ಅದ್ಭುತವಾಗಿದೆ. ನಾನು ನಾಯಕನಾಗಿದ್ದಾಗ ಇದನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ ಎಂದು ನಾನು ಸ್ವಲ್ಪ ಭಾವುಕನಾಗಿದ್ದೇನೆ. ಅದೇ ಮೈದಾನದಲ್ಲಿ ಟ್ರೋಫಿ ಗೆದ್ದಿದ್ದೇವೆ. ಅದೂ ಕುಡ 23 ವರ್ಷಗಳ ನಂತರ. ಕೆಲವರು ಹೇಳುವ ಪ್ರಕಾರ 'ತಂದೆ ಮಾಡಲು ಸಾಧ್ಯವಾಗದಿದ್ದನ್ನ ಇದೀಗ ಮಗ ಮಾಡಿ ತೋರಿಸಿದ್ದಾನೆ'' ಆದಿತ್ಯ ಶ್ರೀವಾಸ್ತವ್ ಅದ್ಭುತವಾದ ಸಾಧನೆ ಮಾಡಿದ್ದಾರೆ" ಎಂದು ಭಾರತದ ಮಾಜಿ ಕ್ರಿಕೆಟಿಗ ಚಂದ್ರಕಾಂತ್ ಪಂಡಿತ್ ಭಾನುವಾರ ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದರು.
ಮಿಥಾಲಿ ರಾಜ್ ಅನೇಕ ಕ್ರೀಡಾಪಟುಗಳಿಗೆ ಸ್ಫೂರ್ತಿ ಎಂದು ಶುಭ ಹಾರೈಸಿದ ಪ್ರಧಾನಿ ಮೋದಿ

ದೇಶೀಯ ಕ್ರಿಕೆಟ್‌ನಲ್ಲಿ ಸ್ಟಾರ್ ಕೋಚ್ ಆಗಿರುವ ಚಂದ್ರಕಾಂತ್ ಪಂಡಿತ್
ಸದ್ಯ ಕಳೆದೊಂದು ದಶಕದಿಂದ ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಕೋಚ್ ಅಂದ್ರೆ ಚಂದ್ರಕಾಂತ್ ಪಂಡಿತ್ ಅಲ್ಲದೆ ಮತ್ಯಾರು ಅಲ್ಲ. ಮಾರ್ಚ್ 2020 ರಲ್ಲಿ ಮಧ್ಯಪ್ರದೇಶದ ಕೋಚ್ ಹುದ್ದೆಯನ್ನು ವಹಿಸಿಕೊಂಡ ನಂತರ, ಚಂದ್ರಕಾಂತ್ ಪಂಡಿತ್ ಅವರು ನಡೆಯುತ್ತಿರುವ ಋತುವಿನಲ್ಲಿ ಸಾಕಷ್ಟು ಆತ್ಮವಿಶ್ವಾಸ ಮತ್ತು ಸ್ಪಷ್ಟತೆಯೊಂದಿಗೆ ತನ್ನ ಕೆಲಸವನ್ನು ಮುಂದುವರೆಸಿದರು.
ಯುವ ಪಡೆಯನ್ನ ಕಟ್ಟಿದ ಚಂದ್ರಕಾಂತ್ ತಂಡಕ್ಕೆ ನೀಡಿದ್ದ ಮಾರ್ಗದರ್ಶನದಿಂದಲೇ ಇದೀಗ ಚೊಚ್ಚಲ ಟ್ರೋಫಿಯನ್ನ ಮಧ್ಯಪ್ರದೇಶ ಮುಡಿಗೇರಿಸಿಕೊಂಡಿದೆ. ಈ ಮೂಲಕ ಕಳೆದ ಏಳು ವರ್ಷಗಳಲ್ಲಿ ಚಂದ್ರಕಾಂತ್ ಮಾರ್ಗದರ್ಶನದಲ್ಲಿ ತಂಡವು 4 ರಣಜಿ ಟ್ರೋಫಿಯನ್ನ ಗೆದ್ದು ಬೀಗಿದೆ.
ಅವರು 2015-16 ರಲ್ಲಿ ಮುಂಬೈನ ಕೋಚ್ ಆಗಿದ್ದರು ಆಗ ಮುಂಬೈ ತಂಡವು ಟ್ರೋಫಿಯನ್ನು ಗೆದ್ದಿತು. ನಂತರ ಚಂದ್ರ ಕಾಂತ್ ಪಂಡಿತ್ ಅವರು ವಿಧರ್ಭ ಕೋಚ್ ಆಗಿದ್ದು, 2017-18 ಮತ್ತು 2018-19 ರಲ್ಲಿ ವಿದರ್ಭ ತಂಡವು ರಣಜಿ ಟ್ರೋಫಿ ಮುಡಿಗೇರಿಸಿಕೊಂಡಿದೆ. ಈ ಸಾಲಿಗೆ ಈಗ ಮಧ್ಯಪ್ರದೇಶ ಸೇರಿದೆ.
1983ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್‌ರಿಂದ ಕಿಚ್ಚ ಸುದೀಪ್‌ಗೆ ವಿಶೇಷ ಗಿಫ್ಟ್!

ಮಧ್ಯಪ್ರದೇಶ ಕೋಚ್ ಆಗಲು ಇತರೆ ಆಫರ್ ತ್ಯಜಿಸಿದ್ದ ಚಂದ್ರಕಾಂತ್
2020ರಲ್ಲಿ ಮಧ್ಯಪ್ರದೇಶದ ಕೋಚ್ ಹುದ್ದೆಗೆ ಆಹ್ವಾನ ಬಂದಾಗ ಚಂದ್ರಕಾಂತ್ ಇತರೆ ಅನೇಕ ರಾಜ್ಯಗಳ ಕ್ರಿಕೆಟ್ ಬೋರ್ಡ್ ತಮ್ಮ ಕ್ರಿಕೆಟ್ ತಂಡದ ಕೋಚ್ ಆಗುವಂತೆ ಆಫರ್ ನೀಡಿದ್ದರು. ಆದ್ರೆ ಅವೆಲ್ಲವನ್ನ ಸಾರಾಸಗಟಾಗಿ ತಳ್ಳಿಹಾಕಿದ ಪಂಡಿತ್, ತಾನೇ ಪ್ರತಿನಿಧಿಸಿದ ಮಧ್ಯಪ್ರದೇಶ ತಂಡದ ಕೋಚ್ ಆಗಲು ಒಪ್ಪಿಕೊಂಡರು.
"ಯಾವುದೇ ನಿರ್ದಿಷ್ಟ ಕಾರಣವಿಲ್ಲ ಆದರೆ ತಂಡಗಳು ಉತ್ತಮವಾಗಿ ಕಾರ್ಯನಿರ್ವಹಿಸದ ಸವಾಲಿನ ಕೆಲಸವನ್ನು ನಾನು ಹುಡುಕುತ್ತೇನೆ. ಆ ನಿರ್ದಿಷ್ಟ ರಾಜ್ಯವನ್ನು ಅಭಿವೃದ್ಧಿಪಡಿಸಲು ಯುವಕರು ಸಹ ಇರಬೇಕು. ನಾನು ಮಧ್ಯಪ್ರದೇಶಕ್ಕಾಗಿ ಆಡುತ್ತಿದ್ದೆ ಮತ್ತು ಆರು ವರ್ಷಗಳ ಕಾಲ ಆ ತಂಡದ ಪರ ಆಡಿದ್ದೇನೆ.
"ನನಗೆ ಆ ತಂಡದ ಸಂಸ್ಕೃತಿ ತಿಳಿದಿತ್ತು ಮತ್ತು ಮಾರ್ಚ್ (2020) ನಲ್ಲಿ ನನಗೆ ಆಫರ್ ಬಂದಾಗ ನಾನು ಹಿಂಜರಿಯಲಿಲ್ಲ. ಒಂದೆರಡು ಆಫರ್‌ಗಳು ಇದ್ದವು ಆದರೆ ನಾನು ಮಧ್ಯಪ್ರದೇಶವನ್ನು ಆಯ್ಕೆ ಮಾಡಿದ್ದೇನೆ. ಏಕೆಂದರೆ ನಾನು 23 ವರ್ಷಗಳ ಹಿಂದೆ ಬಿಟ್ಟಿರುವುದನ್ನು, ದೇವರು ಇಷ್ಟಪಟ್ಟು ನನ್ನನ್ನು ಅದೇ ಸ್ಥಿತಿಗೆ ಮರಳಿ ತಂದನು. ಕೆಲವೊಮ್ಮೆ ಪ್ರತಿಭೆ ಇರುತ್ತದೆ ಆದರೆ ನೀವು ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು, ನಾನು ಅವರನ್ನು(ಮಧ್ಯಪ್ರದೇಶ) ಬೆಳೆಸಲು ಪ್ರಯತ್ನಿಸುತ್ತೇನೆ," ಪಂಡಿತ್ ಹೇಳಿದ್ದಾರೆ.


Click it and Unblock the Notifications
