ರಣಜಿ: ರಾಜಸ್ಥಾನ ವಿರುದ್ಧ ಕರ್ನಾಟಕಕ್ಕೆ ಭರ್ಜರಿ ಜಯ
ಜೈಪುರ, ನ. 02: ರಾಬಿನ್ ಉತ್ತಪ್ಪ ಅವರ ಆಕರ್ಷಕ ಶತಕದ ನೆರವಿನಿಂದ ರಾಜಸ್ಥಾನ ತಂಡವನ್ನು ಕರ್ನಾಟಕ ತಂಡ ಪ್ರಸಕ್ತ ರಣಜಿ ಋತುವಿನ ಮೊದಲ ಗೆಲುವು ದಾಖಲಿಸಿದೆ. 358 ರನ್ ಟಾರ್ಗೆಟ್ ಬೆನ್ನು ಹತ್ತಿದ ರಾಜಸ್ಥಾನ ತಂಡ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ ನಾಲ್ಕನೇ ದಿನದಂದು 82.2 ಓವರ್ ಗಳಲ್ಲಿ 265 ಸ್ಕೋರಿಗೆ ಆಲೌಟ್ ಆಗಿದೆ. ಈ ಮೂಲಕ ವಿನಯ್ ಕುಮಾರ್ ಪಡೆ 92ರನ್ ಗಳ ಜಯ ದಾಖಲಿಸಿದೆ.
ನಾಲ್ಕನೇ ದಿನದಂದು 38/3 ಸ್ಕೋರ್ ನಿಂದ ಆಟ ಆರಂಭಿಸಿದ ರಾಜಸ್ಥಾನ ತಂಡ 265ಸ್ಕೋರಿಗೆ ಆಲೌಟ್ ಆಗಿದೆ. ಕರ್ನಾಟಕ ಪರ ಡೇವಿಡ್ ಮಥಾಯಿಸ್ 13 ಓವರ್ ಗಳಲ್ಲಿ 53ಕ್ಕೆ3 ವಿಕೆಟ್ ಪಡೆದು ರಾಜಸ್ಥಾನಕ್ಕೆ ಮುಳುವಾದರು.

ರಾಜಸ್ಥಾನ ಪರ ಆರಂಭಿಕ ಆಟಗಾರ ಪಿ ಶರ್ಮ ಅವರು 114ರನ್ (17x4, 1x6) ಗಳಿಸಿದ್ದು ವ್ಯರ್ಥವಾಯಿತು. ಯಾಗ್ನಿಕ್ 71 ಗಳಿಸಿ ಅಜೇಯರಾಗಿ ಉಳಿದಿದ್ದು ಬಿಟ್ಟರೆ ಮಿಕ್ಕವರು ರನ್ ಚೇಸ್ ನಲ್ಲಿ ಹೆಚ್ಚಿನ ಆಸಕ್ತಿಅ ತೋರಿದಂತೆ ಕಾಣಲಿಲ್ಲ.
ಸಂಕ್ಷಿಪ್ತ ಸ್ಕೋರ್ ಕಾರ್ಡ್:
ಕರ್ನಾಟಕ
ಮೊದಲ ಇನ್ನಿಂಗ್ಸ್ : 281 ಆಲೌಟ್, 94 ಓವರ್ಸ್
(ಮಾಯಾಂಕ್ ಆಗರವಾಲ್ 66, ಆರ್ ಸಮರ್ಥ್ 65, ಶ್ರೇಯಸ್ ಗೋಪಾಲ್ 48ರನ್) (ಎವಿ ಚೌಧರಿ 77ಕ್ಕೆ 5, ಡಿಎಲ್ ಚಾಹಾರ್ ಹಾಗೂ ಎಬಿ ಸಿಂಗ್ ತಲಾ 2 ವಿಕೆಟ್)
ಎರಡನೇ ಇನ್ನಿಂಗ್ಸ್ : 318/5, 63 ಓವರ್ಸ್
(ಅಭಿಶೇಕ್ ರೆಡ್ಡಿ 69, ರಾಬಿನ್ ಉತ್ತಪ್ಪ 160, ಸಿಎಂ ಗೌತಮ್ ಅಜೇಯ 36) (ರಜತ್ ಭಾಟಿಯಾ 44ಕ್ಕೆ2)
ರಾಜಸ್ಥಾನ
ಮೊದಲ ಇನ್ನಿಂಗ್ಸ್ : 242 ರನ್ ಆಲೌಟ್, 91.4 ಓವರ್ಸ್
(ರಜತ್ ಭಾಟಿಯಾ 99 (14X4), ಪಿಆರ್ ಯಾದವ್, ಯಾಗ್ನಿಕ್ 21) (ವಿನಯ್ ಕುಮಾರ್ 42ಕ್ಕೆ3, ಅರವಿಂದ್ ಶ್ರೀನಾಥ್ 42ಕ್ಕೆ3, ಡೇವಿಡ್ ಮಥಾಯಿಸ್ 41ಕ್ಕೆ2)
ಎರಡನೇ ಇನ್ನಿಂಗ್ಸ್ : 82.2 ಓವರ್ಸ್ 265 ಆಲೌಟ್
(ಪಿ ಯಾದವ್ 114ರನ್, ಯಾಗ್ನಿಕ್ 71ರನ್, ಡೇವಿಡ್ ಮಥಾಯಿಸ್ 53ಕ್ಕೆ3, ಅರವಿಂದ್ ಶ್ರೀನಾಥ್, ಸ್ಟುವರ್ಟ್ ಬಿನ್ನಿ, ಶ್ರೇಯಸ್ ಗೋಪಾಲ್ ತಲಾ 2 ವಿಕೆಟ್)
ಫಲಿತಾಂಶ: ಕರ್ನಾಟಕಕ್ಕೆ 92 ರನ್ ಗಳ ಜಯ, 6 ಅಂಕ ಸಂಪಾದನೆ.
ಕರ್ನಾಟಕ: ವಿನಯ್ ಕುಮಾರ್(ನಾಯಕ), ಸಿಎಂ ಗೌತಮ್ಉಪನಾಯಕ, ವಿ.ಕೀ.), ಆರ್ ಸಮರ್ಥ್, ರಾಬಿನ್ ಉತ್ತಪ್ಪ, ಜೆ ಸುಚಿತ್, ಶ್ರೇಯಸ್ ಗೋಪಾಲ್, ಉದಿತ್ ಪಟೇಲ್, ಎಸ್ ಅರವಿಂದ್, ಮಯಾಂಕ್ ಅಗರ್ವಾಲ್, ಸ್ಟುವರ್ಟ್ ಬಿನ್ನಿ, ಡೇವಿಡ್ ಮಥಾಯಿಸ್, ಅಭಿಷೇಕ್ ರೆಡ್ಡಿ, ಮಿರ್ ಕೌನೇನ್ ಅಬ್ಬಾಸ್, ಪ್ರಸಿದ್ಧ್ ಕೃಷ್ಣ.
ರಾಜಸ್ಥಾನ: ಅಶೋಕ್ ಮನೇರಿಯಾ, ವಿನೀತ್ ಸೆಕ್ಸೆನಾ, ಪ್ರಣಯ್ ಶರ್ಮ, ಅಜಯ್ ಸಿಂಗ್, ರಾಜೇಶ್ ಬಿಷ್ಣೊಯಿ, ದೀಪಕ್ ಚಾಹರ್, ಅಂಕೀತ್ ಚೌಧರಿ, ಅರ್ಜಿತ್ ಗುಪ್ತಾ, ಮಧುರ್ ಖಾತ್ರಿ, ಅಂಕಿತ್ ಲಾಂಭ, ಮಂಜೀತ್ ಸಿಂಗ್, ಪುನೀತ್ ಯಾದವ್, ಸೂರ್ಯಪ್ರಕಾಶ್ ಸುವಾಲ್ಕಾ, ದಿಶಾಂತ್ ಯಾಗ್ನಿಕ್. (ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications