For Quick Alerts
ALLOW NOTIFICATIONS  
For Daily Alerts
 

ರಾಬಿನ್ ಉತ್ತಪ್ಪ ಶತಕದ ನೆರವಿನಿಂದ ಸುಸ್ಥಿತಿಯಲ್ಲಿ ಕರ್ನಾಟಕ

By Mahesh

ಜೈಪುರ, ನ.01: ರಾಬಿನ್ ಉತ್ತಪ್ಪ ಅವರ ಆಕರ್ಷಕ ಶತಕದ ನೆರವಿನಿಂದ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ಸುಸ್ಥಿತಿಯಲ್ಲಿದೆ. ಕರ್ನಾಟಕದ ಎರಡನೇ ಇನ್ನಿಂಗ್ಸ್ ನಲ್ಲಿ 318/5 ಡಿಕ್ಲೇರ್ ಮಾಡಿಕೊಂಡಿದ್ದು, 358ರನ್ ಟಾರ್ಗೆಟ್ ಬೆನ್ನು ಹತ್ತಿದ ರಾಜಸ್ಥಾನ ತಂಡ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 8 ಓವರ್ ಗಳಲ್ಲಿ 31/2 ಸ್ಕೋರ್ ಮಾಡಿದೆ.

ಪ್ರಸಕ್ತ ರಣಜಿ ಋತುವಿನಲ್ಲಿ ಲಯಕ್ಕೆ ಮರಳಿದ ರಾಬಿನ್ ಉತ್ತಪ್ಪ ಅವರು ಎರಡನೇ ಇನ್ನಿಂಗ್ಸ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದಾರೆ. 128 ಎಸೆತಗಳಲ್ಲಿ 160ರನ್ (25X4, 4X6) ಗಳಿಸಿದರು. ಆರಂಭಿಕ ಆಟಗಾರ ಅಭಿಶೇಕ್ ರೆಡ್ಡಿ ಅವರು 69ರನ್ (7x4,1x6) ಅವರು ಉತ್ತಮ ಆರಂಭ ಒದಗಿಸಿದರು. ಮಾಯಾಂಕ್ ಅಗರವಾಲ್ 8 ರನ್ ಹಾಗೂ ಆರ್ ಸಮರ್ಥ್ 6 ರನ್ ಗಳಿಸಿ ಔಟಾದರು.

ಉಳಿದಂತೆ ಸ್ಟುವರ್ಟ್ ಬಿನ್ನಿ 29 ಹಾಗೂ ಸಿಎಂ ಗೌತಮ್ ಅವರು 32ರನ್ ಗಳಿಸಿ ರಾಬಿನ್ ಉತ್ತಪ್ಪಗೆ ಉತ್ತಮ ಸಾಥ್ ನೀಡಿದರು. ಕರ್ನಾಟಕದ ಎರಡನೇ ಇನ್ನಿಂಗ್ಸ್ ನಲ್ಲಿ 318/5 ಡಿಕ್ಲೇರ್ ಮಾಡಿಕೊಂಡು ರಾಜಸ್ಥಾನ ತಂಡ 358ರನ್ ಟಾರ್ಗೆಟ್ ನೀಡಿದೆ.

Karnataka vs Rajasthan

ಕಳೆದ ಎರಡು ಸೀಸನ್ ಸೇರಿ 34 ಪಂದ್ಯಗಳಲ್ಲಿ ಸೋಲನ್ನೇ ಕಾಣದಿರುವ ವಿನಯ್ ಕುಮಾರ್ ಪಡೆ, ಹ್ಯಾಟ್ರಿಕ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಈ ಸೀಸನ್ ನಲ್ಲಿ ದುರ್ಬಲ ತಂಡಗಳೆದುರು ಜಯ ಕಾಣದೆ ಮುಗ್ಗರಿಸಿದ್ದು, ರಾಜಸ್ಥಾನ ವಿರುದ್ಧ ಗೆಲ್ಲಬೇಕಾದ ಒತ್ತಡದಲ್ಲಿದೆ.

ಸಂಕ್ಷಿಪ್ತ ಸ್ಕೋರ್ ಕಾರ್ಡ್:
ಕರ್ನಾಟಕ
ಮೊದಲ ಇನ್ನಿಂಗ್ಸ್ : 281 ಆಲೌಟ್, 94 ಓವರ್ಸ್
(ಮಾಯಾಂಕ್ ಆಗರವಾಲ್ 66, ಆರ್ ಸಮರ್ಥ್ 65, ಶ್ರೇಯಸ್ ಗೋಪಾಲ್ 48ರನ್) (ಎವಿ ಚೌಧರಿ 77ಕ್ಕೆ 5, ಡಿಎಲ್ ಚಾಹಾರ್ ಹಾಗೂ ಎಬಿ ಸಿಂಗ್ ತಲಾ 2 ವಿಕೆಟ್)
ಎರಡನೇ ಇನ್ನಿಂಗ್ಸ್ : 318/5, 63 ಓವರ್ಸ್
(ಅಭಿಶೇಕ್ ರೆಡ್ಡಿ 69, ರಾಬಿನ್ ಉತ್ತಪ್ಪ 160, ಸಿಎಂ ಗೌತಮ್ ಅಜೇಯ 36) (ರಜತ್ ಭಾಟಿಯಾ 44ಕ್ಕೆ2)

ರಾಜಸ್ಥಾನ
ಮೊದಲ ಇನ್ನಿಂಗ್ಸ್ : 242 ರನ್ ಆಲೌಟ್, 91.4 ಓವರ್ಸ್
(ರಜತ್ ಭಾಟಿಯಾ 99 (14X4), ಪಿಆರ್ ಯಾದವ್, ಯಾಗ್ನಿಕ್ 21) (ವಿನಯ್ ಕುಮಾರ್ 42ಕ್ಕೆ3, ಅರವಿಂದ್ ಶ್ರೀನಾಥ್ 42ಕ್ಕೆ3, ಡೇವಿಡ್ ಮಥಾಯಿಸ್ 41ಕ್ಕೆ2)
ಎರಡನೇ ಇನ್ನಿಂಗ್ಸ್ ಮೂರನೇ ದಿನದ ಅಂತ್ಯಕ್ಕೆ 42/3. 7 ವಿಕೆಟ್ ಉಳಿದಿದ್ದು 316ರನ್ ಗಳಿಸಬೇಕಿದೆ.

ಕರ್ನಾಟಕ: ವಿನಯ್ ಕುಮಾರ್(ನಾಯಕ), ಸಿಎಂ ಗೌತಮ್​ಉಪನಾಯಕ, ವಿ.ಕೀ.), ಆರ್ ಸಮರ್ಥ್, ರಾಬಿನ್ ಉತ್ತಪ್ಪ, ಜೆ ಸುಚಿತ್, ಶ್ರೇಯಸ್ ಗೋಪಾಲ್, ಉದಿತ್ ಪಟೇಲ್, ಎಸ್ ಅರವಿಂದ್, ಮಯಾಂಕ್ ಅಗರ್ವಾಲ್, ಸ್ಟುವರ್ಟ್ ಬಿನ್ನಿ, ಡೇವಿಡ್ ಮಥಾಯಿಸ್, ಅಭಿಷೇಕ್ ರೆಡ್ಡಿ, ಮಿರ್ ಕೌನೇನ್ ಅಬ್ಬಾಸ್, ಪ್ರಸಿದ್ಧ್ ಕೃಷ್ಣ.

ರಾಜಸ್ಥಾನ: ಅಶೋಕ್ ಮನೇರಿಯಾ, ವಿನೀತ್ ಸೆಕ್ಸೆನಾ, ಪ್ರಣಯ್ ಶರ್ಮ, ಅಜಯ್ ಸಿಂಗ್, ರಾಜೇಶ್ ಬಿಷ್ಣೊಯಿ, ದೀಪಕ್ ಚಾಹರ್, ಅಂಕೀತ್ ಚೌಧರಿ, ಅರ್ಜಿತ್ ಗುಪ್ತಾ, ಮಧುರ್ ಖಾತ್ರಿ, ಅಂಕಿತ್ ಲಾಂಭ, ಮಂಜೀತ್ ಸಿಂಗ್, ಪುನೀತ್ ಯಾದವ್, ಸೂರ್ಯಪ್ರಕಾಶ್ ಸುವಾಲ್ಕಾ, ದಿಶಾಂತ್ ಯಾಗ್ನಿಕ್. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+