ರಣಜಿ ಕ್ರಿಕೆಟ್: IPL ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದ ಶ್ರೀಶಾಂತ್ ಭರ್ಜರಿ ಕಂಬ್ಯಾಕ್

ಐಪಿಎಲ್ ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದ ಕೇರಳದ ವೇಗಿ ಎಸ್. ಶ್ರೀಶಾಂತ್ ರಣಜಿ ಕ್ರಿಕೆಟ್‌ನಲ್ಲಿ ಕೇರಳ ಪರ ಉತ್ತಮ ಪ್ರದರ್ಶನ ನೀಡುವ ಮೂಲಕ ಮಿಂಚಿದ್ದಾರೆ. ಒಂಬತ್ತು ವರ್ಷಗಳ ನಂತರ ರಣಜಿ ಕ್ರಿಕೆಟ್ ಟೂರ್ನಿಗೆ ಮರಳಿದ ಶ್ರೀಶಾಂತ್ ಎರಡು ವಿಕೆಟ್ ಪಡೆಯುವ ಮೂಲಕ ಸಂಭ್ರಮಿಸಿದ್ದಾರೆ.
ಮೇಘಾಲಯ ವಿರುದ್ಧದ ಎಲೈಟ್ ಗುಂಪಿನ ಪಂದ್ಯದಲ್ಲಿ ಕೇರಳ ಪರ ಕಣಕ್ಕಿಳಿದಿದ್ದ ಶ್ರೀಶಾಂತ್ ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಪಡೆದು ಗಮನಸೆಳೆದಿದ್ದಾರೆ.
ಟಾಸ್ ಗೆದ್ದ ಕೇರಳ ನಾಯಕ ಸಚಿನ್ ಬೇಬಿ ಬೌಲಿಂಗ್ ಮೊದಲು ಆಯ್ಕೆ ಮಾಡಿಕೊಂಡರು. ಮೇಘಾಲಯ ತಂಡದ ನಾಯಕ ಪುನೀತ್ ಬಿಶ್ತ್ (93) ಅವರನ್ನು ಹೊರತುಪಡಿಸಿದರೆ ಕೇರಳದ ಬೌಲಿಂಗ್ ದಾಳಿಯ ವಿರುದ್ಧ ಮೇಘಾಲಯದ ಯಾವೊಬ್ಬ ಬ್ಯಾಟ್ಸ್‌ಮನ್ ಕೂಡ ನಿಲ್ಲಲು ಸಾಧ್ಯವಾಗಲಿಲ್ಲ. ಮೇಘಾಲಯ ಮೊದಲ ದಿನ ಕೇವಲ 148 ರನ್‌ಗಳಿಗೆ ಆಲೌಟ್ ಆಗಿತ್ತು. ಆರಂಭಿಕರಾದ ಕಿಶನ್ ಲಿಂಡೋ (26) ಮತ್ತು ಚಿರಾಗ್ ಖುರಾನಾ (15) ಎರಡಂಕಿ ಗಳಿಸಿದ ಇತರ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ.
ಇದಕ್ಕೆ ಉತ್ತರವಾಗಿ ಕೇರಳ ಅದ್ಭುತ ಆರಂಭ ಪಡೆದಿದೆ. ಕೇರಳ ಮೊದಲ ದಿನದಾಟದಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 205 ರನ್ ಗಳಿದೆ. ಕೇರಳ ಈಗ 57 ರನ್‌ಗಳ ಮುನ್ನಡೆ ಸಾಧಿಸಿದೆ. ರೋಹನ್ ಕುನ್ನುಮ್ಮಲ್ (107) ಶತಕ ಸಿಡಿಸಿ ಕೇರಳಕ್ಕೆ ಮುನ್ನಡೆ ತಂದುಕೊಟ್ಟರು. ಈತ 97 ಎಸೆತಗಳಲ್ಲಿ 17 ಬೌಂಡರಿ ಹಾಗೂ ಒಂದು ಸಿಕ್ಸರ್ ಬಾರಿಸಿದರು. ಪಿ ರಾಹುಲ್ ಅಜೇಯ 91 ಮತ್ತು ಜಲಜ್ ಸಕ್ಸೇನಾ ಅಜೇಯವಾಗಿ (4) ಕ್ರೀಸ್‌ನಲ್ಲಿದ್ದರು. ಈ ಮೂಲಕ ಕೇರಳ ಮೊದಲ ದಿನವೇ 57 ರನ್‌ಗಳ ಮುನ್ನಡೆ ಸಾಧಿಸಿದೆ.

ಎರಡು ವಿಕೆಟ್ ಪಡೆದ ಶ್ರೀ
11.4 ಓವರ್‌ಗಳಲ್ಲಿ ಶ್ರೀಶಾಂತ್ ಎರಡು ಮೇಡನ್ ಸೇರಿದಂತೆ ಕೇವಲ 40 ರನ್ ನೀಡಿ ಎರಡು ವಿಕೆಟ್ ಪಡೆದರು. ಅವರು ಬೌಲಿಂಗ್‌ನಲ್ಲಿ 3.40 ರ ಅತ್ಯುತ್ತಮ ಎಕಾನಮಿ ದರವನ್ನು ಕಾಯ್ದುಕೊಂಡಿದ್ದಾರೆ. ಮೇಘಾಲಯ ವಿರುದ್ಧ ಶ್ರೀಶಾಂತ್ ಕೊನೆಯ ಎರಡು ವಿಕೆಟ್ ಪಡೆದರು. ಆರ್ಯನ್ ಬೋರಾ ಅವರ ವಿಕೆಟ್ ಪಡೆದ ಬೆನ್ನಲ್ಲೇ ಶ್ರೀಶಾಂತ್ ಮುಂದಿನ ಎಸೆತದಲ್ಲಿ ಚೆಂಗಮ್ ಸಂಗ್ಮಾ ಅವರನ್ನ ಗೋಲ್ಡನ್ ಡಕೌಟ್ ಮಾಡಿದರು.

ಬಿಸಿಸಿಐ ವಿರುದ್ಧ ಕಾನೂನು ಹೋರಾಟದ ಜಯ
ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿ ನಂತರ ಖುಲಾಸೆಗೊಂಡಿದ್ದರೂ ಸಹ, ಬಿಸಿಸಿಐ ಶ್ರೀಶಾಂತ್ ಅವರ ನಿಷೇಧವನ್ನು ತೆಗೆದುಹಾಕಲು ನಿರಾಕರಿಸಿತು. ವರ್ಷಗಳ ಕಾನೂನು ಹೋರಾಟದ ನಂತರ ಅವರು ಅಂತಿಮವಾಗಿ ಪ್ರಕರಣವನ್ನು ಗೆದ್ದರು. ಕಳೆದ ವರ್ಷದ ರಣಜಿ ಟ್ರೋಫಿಯಲ್ಲಿ ಕೇರಳ ಪರ ಆಡಿದ ಶ್ರೀ ಪ್ರಥಮ ದರ್ಜೆ ಕ್ರಿಕೆಟ್‌ಗೆ ಮರಳಲು ಮುಂದಾಗಿದ್ದರು. ಅವರನ್ನು ಕೇರಳ ತಂಡಕ್ಕೆ ಸೇರಿಸಲಾಗಿತ್ತು. ಆದರೆ ಕೋವಿಡ್ ಮಹಾಮಾರಿಯಿಂದಾಗಿ ರಣಜಿ ಟ್ರೋಫಿಯನ್ನು ಕೈಬಿಟ್ಟ ನಂತರ ಅವರ ವಾಪಸಾತಿ ವಿಳಂಬವಾಯಿತು. ಅಂತಿಮವಾಗಿ, ಈ ಋತುವಿನ ರಣಜಿಯೊಂದಿಗೆ ಶ್ರೀ ಪುನರಾಗಮನ ಮಾಡಿದ್ದಾರೆ.

50 ಲಕ್ಷ ರೂಪಾಯಿ ಮೂಲ ಬೆಲೆ ಹೊಂದಿದ್ದ ಶ್ರೀಶಾಂತ್
ಶ್ರೀಶಾಂತ್ ಭಾರೀ ನಿರೀಕ್ಷೆಯೊಂದಿಗೆ ಐಪಿಎಲ್ ಮೆಗಾ ಹರಾಜಿಗೆ ನೋಂದಾಯಿಸಿಕೊಂಡಿದ್ದರು. ಅವರ ಮೂಲ ಬೆಲೆ 50 ಲಕ್ಷ ರೂ. ಆಗಿತ್ತು. ಎರಡು ಹೊಸ ತಂಡಗಳಾದ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ ಐಪಿಎಲ್‌ಗೆ ಸೇರಿಕೊಂಡಿದ್ದರಿಂದ ತಮಗೆ ಅವಕಾಶ ಸಿಗುವ ಸಾಧ್ಯತೆಯಿದೆ ಎಂದು ಶ್ರೀಶಾಂತ್ ಭರವಸೆ ವ್ಯಕ್ತಪಡಿಸಿದರು.
ಆದರೆ ಎರಡು ದಿನ ಬೆಂಗಳೂರಿನಲ್ಲಿ ನಡೆದ ಆಟಗಾರರ ಹರಾಜಿನಲ್ಲಿ ಅವರ ಹೆಸರು ಕೂಡ ಪ್ರಸ್ತಾಪವಾಗಿಲ್ಲ. ಹರಾಜುದಾರ ಖರೀದಿಸಲು ಬಯಸುವ ಆಟಗಾರರ ಪಟ್ಟಿಯನ್ನು ಒದಗಿಸಲು ಸಂಪೂರ್ಣ ಫ್ರಾಂಚೈಸಿಯನ್ನು ಕೇಳಿದರು. ಇದರ ಪ್ರಕಾರ 10 ತಂಡಗಳು ನೀಡಿರುವ ಆಟಗಾರರ ಪಟ್ಟಿಯಲ್ಲಿ ಶ್ರೀ ಸ್ಥಾನ ಪಡೆದಿಲ್ಲ. ಹೀಗಾಗಿ ಅವರ ಹೆಸರು ಹರಾಜಿನಲ್ಲಿ ಕಾಣಿಸಿಕೊಂಡಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications