ರಣಜಿ ಟ್ರೋಫಿ: ಕ್ವಾ. ಫೈನಲ್‌ನಲ್ಲಿ ಕರ್ನಾಟಕ vs ಉತ್ತರಾಖಂಡ್ ಸೆಣೆಸಾಟ: 2ನೇ ದಿನದ Live score

ರಣಜಿ ಟೂರ್ನಿಯ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಕರ್ನಾಟಕ ಹಾಗೂ ಉತ್ತರಾಖಂಡ್ ತಂಡಗಳು ಸೆಣೆಸಾಡುತ್ತಿವೆ. ಈ ಪಂದ್ಯದ ಮೊದಲ ದಿನದಾಟದಲ್ಲಿ ಕರ್ನಾಟಕ ಸಂಪೂರ್ಣ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದ್ದು ಎರಡನೇ ದಿನವೂ ಅಂಥಾದ್ದೇ ಪ್ರದರ್ಶನದ ನಿರೀಕ್ಷೆಯಲ್ಲಿದೆ. ಮೊದಲ ದಿನ ಆರಂಭದಲ್ಲಿ ಬೌಲಿಂಗ್‌ನಲ್ಲಿ ಅಬ್ಬರಿಸಿದ ಕರ್ನಾಟಕ ಬಳಿಕ ಬ್ಯಾಟಿಂಗ್‌ನಲ್ಲಿಯೂ ಉತ್ತಮ ಪ್ರದ್ಶನ ನೀಡುವಲ್ಲಿ ಯಶಸ್ವಿಯಾಗಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿದ ಮಯಾಂಕ್ ಅಗರ್ವಾಲ್ ನಾಯಕತ್ವದ ಕರ್ನಾಟಕ ಪ್ರವಾಸಿ ಉತ್ತರಾಖಂಡ ತಂಡದ ವಿರುದ್ಧ ಬೌಲಿಂಗ್‌ನಲ್ಲಿ ಸಂಪೂರ್ಣ ಹಿಡಿತ ಸಾಧಿಸಿತು. 55.4 ಓವರ್‌ಗಳಲ್ಲಿ ಕೇವಲ 116 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ ಪಂದ್ಯವನ್ನು ಸಂಪೂರ್ಣವಾಗಿ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕರ್ನಾಟಕದ ಪರವಾಗಿ ವೇಗಿ ಮುರಳೀಧರ ವೆಂಕಟೇಶ್ 5 ವಿಕೆಟ್‌ಗಳನ್ನು ಪಡೆದು ತಂಡದ ಮೇಲುಗೈಗೆ ಪ್ರಮುಖ ಕಾರಣವಾಗಿದ್ದಾರೆ.
ಬಳಿಕ ಬ್ಯಾಟಿಂಗ್ ನಡೆಸಿರುವ ಕರ್ನಾಟಕ ತಂಡದ ಪರವಾಗಿ ಆರಂಭಿಕರಾದ ಆರ್ ಸಮರ್ಥ್ ಹಾಗೂ ಮಯಾಂಕ್ ಅಗರ್ವಾಲ್ ಅದ್ಭುತ ಜೊತೆಯಾಟವನ್ನು ನೀಡಿದ್ದು ಮೊದಲ ದಿನದಾಟದಲ್ಲಿಯೇ ತಂಡ ಮುನ್ನಡೆ ಸಾಧಿಸುವಂತಾಗಿದೆ. ಮಯಾಂಕ್ ಹಾಗೂ ಸಮರ್ಥ್ ಇಬ್ಬರು ಕೂಡ ಮೊದಲ ದಿನದಾಟದಲ್ಲಿ ಅಜೇಯ ಅರ್ಧ ಶತಕ ಸಿಡಿಸಿದ್ದು 2ನೇ ದಿನ ಆಟ ಮುಂದುವರಿಸಿದ್ದಾರೆ.
Live ಸ್ಕೋರ್‌ಕಾರ್ಡ್ ಹೀಗಿದೆ:
ಕರ್ನಾಟಕ ಆಡುವ ಬಳಗ ಹೀಗಿದೆ: ರವಿಕುಮಾರ್ ಸಮರ್ಥ್, ಮಯಾಂಕ್ ಅಗರ್ವಾಲ್ (ನಾಯಕ), ದೇವದತ್ ಪಡಿಕ್ಕಲ್, ನಿಕಿನ್ ಜೋಸ್, ಮನೀಶ್ ಪಾಂಡೆ, ಮುರಳೀಧರ ವೆಂಕಟೇಶ್, ಶರತ್ ಬಿಆರ್ (ವಿಕೆಟ್ ಕೀಪರ್), ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್, ವಿಜಯ್ ಕುಮಾರ್ ವೈಶಾಕ್, ವಿಧ್ವತ್ ಕಾವೇರಪ್ಪ
ಬೆಂಚ್: ಶುಭಾಂಗ್ ಹೆಗ್ಡೆ, ವಾಸುಕಿ ಕೌಶಿಕ್, ರೋನಿತ್ ಮೋರೆ, ಶ್ರೀನಿವಾಸ್ ಶರತ್, ಕೃಷ್ಣಮೂರ್ತಿ ಸಿದ್ಧಾರ್ಥ್, ವಿಶಾಲ್ ಓನಾಟ್
ಉತ್ತರಾಖಂಡ್ ಆಡುವ ಬಳಗ: ಆದಿತ್ಯ ತಾರೆ (ವಿಕೆಟ್ ಕೀಪರ್), ಜಿವಾನ್‌ಜೋತ್ ಸಿಂಗ್ (ನಾಯಕ), ಕುನಾಲ್ ಚಂದೇಲಾ, ಅಖಿಲ್ ರಾವತ್, ಅವನೀಶ್ ಸುಧಾ, ಅಭಯ್ ನೇಗಿ, ಸ್ವಪ್ನಿಲ್ ಸಿಂಗ್,
ದಿಕ್ಷಾಂಶು ನೇಗಿ, ಮಯಾಂಕ್ ಮಿಶ್ರಾ, ದೀಪಕ್ ಧಾಪೋಲಾ, ನಿಖಿಲ್ ಕೊಹ್ಲಿ
ಬೆಂಚ್: ಪ್ರಿಯಾಂಶು ಖಂಡೂರಿ, ಆರ್ಯನ್ ಶರ್ಮಾ, ಅಗ್ರಿಮ್ ತಿವಾರಿ, ರಾಜನ್ ಕುಮಾರ್, ಆಕಾಶ್ ಮಧ್ವಲ್, ಹಿಮಾಂಶು ಬಿಷ್ತ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications