Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಣಜಿ ಟ್ರೋಫಿ: ಉತ್ತರಾಖಂಡ್ ವಿರುದ್ಧ ಗೆಲುವಿನ ಸನಿಹದಲ್ಲಿ ಕರ್ನಾಟಕ: Live ಸ್ಕೋರ್

Ranji Trophy 2022-23: Quarterfinals Karnataka vs Uttarakhand, day 4 Live score

ರಣಜಿ ಟ್ರೋಫಿಯ ಕ್ವಾರ್ಟರ್‌ಫೈನಲ್ ಮುಖಾಮುಖಿಯಲ್ಲಿ ಕರ್ನಾಟಕ ಹಾಗೂ ಉತ್ತರಾಖಂಡ್ ತಂಡಗಳು ಸೆಣೆಸಾಡುತ್ತಿದ್ದು ನಾಲ್ಕನೇ ದಿನದಾಟ ಕುತೂಹಲ ಕೆರಳಿಸಿದೆ. ಈ ಪಂದ್ಯವನ್ನು ಆರಂಭದಿಂದಲೂ ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಯಶಸ್ವಿಯಾಗಿರುವ ಕರ್ನಾಟಕ ಗೆಲುವಿನ ಸನಿಹದಲ್ಲಿದೆ. ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ ಗಳಿಸಿರುವ ಬೃಹತ್ ಮೊತ್ತಕ್ಕೆ ಪ್ರತಿಯಾಗಿ ಬ್ಯಾಟಿಂಗ್ ಆರಂಭಿಸಿರುವ ಉತ್ತರಾಖಂಡ್ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಈಗಾಗಲೇ 3 ವಿಕೆಟ್ ಕಳೆದುಕೊಂಡಿದೆ.

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮೂರನೇ ದಿನದಾಟದ ಅಂತ್ಯಕ್ಕೆ ಕರ್ನಾಟಕ ತಂಡದ ಗೆಲುವಿಗೆ ಕೇವಲ 7 ವಿಕೆಟ್‌ಗಳ ಅಗತ್ಯವಿತ್ತು. ಹೀಗಾಗಿ ನಾಲ್ಕನೇ ದಿನದಾಟದಲ್ಲಿ ಸಾಧ್ಯವಾದಷ್ಟು ಶೀಘ್ರವಾಗಿ ಉತ್ತರಾಖಂಡ್ ಆಟಗಾರರನ್ನು ಕಟ್ಟಿಹಾಕುವ ವಿಶ್ವಾಸಲ್ಲಿದ್ದಾರೆ ಕರ್ನಾಟಕದ ಬೌಲರ್‌ಗಳು.

Live score ಹೀಗಿದೆ:

1
9886-nonopta-55627

ಇನ್ನು ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಾಖಂಡ್ ತಂಡವನ್ನು ಕೇವಲ 116 ರನ್‌ಗಳಿಸುವಷ್ಟರಲ್ಲಿ ಆಲೌಟ್ ಮಾಡಲು ಕರ್ನಾಟಕ ಯಶಸ್ವಿಯಾಗಿತ್ತು. ಕರ್ನಾಟಕದ ಪರವಾಗಿ ವೇಗಿ ಮುರಳೀಧರ ವೆಂಕಟೇಶ್ 5 ವಿಕೆಟ್‌ಗಳನ್ನು ಪಡೆದು ತಂಡದ ಮೇಲುಗೈಗೆ ಪ್ರಮುಖ ಕಾರಣವಾದರು. ಅದಾದ ಬಳಿಕ ಬ್ಯಾಟಿಂಗ್‌ನಲ್ಲಿಯೂ ಕರ್ನಾಟಕ ಪರಾಕ್ರಮಗೈಯುವಲ್ಲಿ ಯಶಸ್ವಿಯಾಗಿದೆ.

ಇನ್ನು ಮೊದಲ ಇನ್ನಿಂಗ್ಸ್‌ನ ಬ್ಯಾಟಿಂಗ್‌ನಲ್ಲಿ ಮಧ್ಯಮ ಕ್ರಮಾಂಕದ ಆಟಗಾರ ಶ್ರೇಯಸ್ ಗೋಪಾಲ್ ಅಜೇಯ 161 ರನ್‌ಗಳನ್ನು ಗಳಿಸಿ ತಂಡದ ಬೃಹತ್ ಮೊತ್ತಕ್ಕೆ ಕಾಎರಣವಾದರು. ಉಳಿದಂತೆ ತಂಡದ ಗ್ರಕ್ರಮಾಂಕದ ಆಟಗಾರರು ಕೂಡ ಅದ್ಭುತ ಪ್ರದರ್ಶನ ನೀಡಿದ್ದಾರೆ . ಆರಂಭಿಕ ಆಟಗಾರರಾದ ಆರ್ ಸಮರ್ಥ್ ಹಾಗೂ ಮಯಾಂಕ್ ಅಗರ್ವಾಲ್ ಕ್ರಮವಾಗಿ 82 ಹಾಗೂ 83 ರನ್‌ಗಳನ್ನು ಗಳಿಸಿದ್ದರೆ ನಂತರ ಕಣಕ್ಕಿಳಿದ ದೇವದತ್ ಪಡಿಕ್ಕಲ್ ಹಾಗೂ ನಿಕಿನ್ ಜೋಸ್ 69 ರನ್ ಹಾಗೂ 62 ರನ್‌ಗಳನ್ನು ಗಳಿಸಿ ವಿಕೆಟ್ ಕಳೆದುಕೊಂಡರು. ಈ ಪರಾಕ್ರಮದಿಂದಾಗಿ ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ 606 ರನ್‌ಗಳಿಸಿ ಬೃಹತ್ ಮುನ್ನಡೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಕರ್ನಾಟಕ ಆಡುವ ಬಳಗ ಹೀಗಿದೆ: ರವಿಕುಮಾರ್ ಸಮರ್ಥ್, ಮಯಾಂಕ್ ಅಗರ್ವಾಲ್ (ನಾಯಕ), ದೇವದತ್ ಪಡಿಕ್ಕಲ್, ನಿಕಿನ್ ಜೋಸ್, ಮನೀಶ್ ಪಾಂಡೆ, ಮುರಳೀಧರ ವೆಂಕಟೇಶ್, ಶರತ್ ಬಿಆರ್ (ವಿಕೆಟ್ ಕೀಪರ್), ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್, ವಿಜಯ್ ಕುಮಾರ್ ವೈಶಾಕ್, ವಿಧ್ವತ್ ಕಾವೇರಪ್ಪ ಬೆಂಚ್: ಶುಭಾಂಗ್ ಹೆಗ್ಡೆ, ವಾಸುಕಿ ಕೌಶಿಕ್, ರೋನಿತ್ ಮೋರೆ, ಶ್ರೀನಿವಾಸ್ ಶರತ್, ಕೃಷ್ಣಮೂರ್ತಿ ಸಿದ್ಧಾರ್ಥ್, ವಿಶಾಲ್ ಓನಾಟ್

ಉತ್ತರಾಖಂಡ್ ಆಡುವ ಬಳಗ: ಆದಿತ್ಯ ತಾರೆ (ವಿಕೆಟ್ ಕೀಪರ್), ಜಿವಾನ್‌ಜೋತ್ ಸಿಂಗ್ (ನಾಯಕ), ಕುನಾಲ್ ಚಂದೇಲಾ, ಅಖಿಲ್ ರಾವತ್, ಅವನೀಶ್ ಸುಧಾ, ಅಭಯ್ ನೇಗಿ, ಸ್ವಪ್ನಿಲ್ ಸಿಂಗ್, ದಿಕ್ಷಾಂಶು ನೇಗಿ, ಮಯಾಂಕ್ ಮಿಶ್ರಾ, ದೀಪಕ್ ಧಾಪೋಲಾ, ನಿಖಿಲ್ ಕೊಹ್ಲಿ ಬೆಂಚ್: ಪ್ರಿಯಾಂಶು ಖಂಡೂರಿ, ಆರ್ಯನ್ ಶರ್ಮಾ, ಅಗ್ರಿಮ್ ತಿವಾರಿ, ರಾಜನ್ ಕುಮಾರ್, ಆಕಾಶ್ ಮಧ್ವಲ್, ಹಿಮಾಂಶು ಬಿಷ್ತ್

Story first published: Friday, February 3, 2023, 9:40 [IST]
Other articles published on Feb 3, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+