Ranji Trophy 2022-23: ಹೊರಬಿದ್ದ ಮುಂಬೈ; ಕರ್ನಾಟಕ ಸೇರಿ ಕ್ವಾರ್ಟರ್ ಫೈನಲ್ ತಲುಪಿದ ಅಗ್ರ 8 ತಂಡಗಳು

ಅಜಿಂಕ್ಯ ರಹಾನೆ ನಾಯಕತ್ವದ ಮುಂಬೈ ತಂಡ ರಣಜಿ ಟ್ರೋಫಿ 2022-23ರ 7ನೇ ಸುತ್ತಿನ ಅಂತಿಮ ದಿನದಂದು ಮಹಾರಾಷ್ಟ್ರ ವಿರುದ್ಧ ಡ್ರಾ ಸಾಧಿಸಿದ್ದರಿಂದ ಕ್ವಾರ್ಟರ್-ಫೈನಲ್‌ಗೆ ಅರ್ಹತೆ ಪಡೆಯಲು ವಿಫಲವಾಗಿದೆ.
ಬಿ ಗುಂಪಿನಲ್ಲಿ ನಾಲ್ಕು ತಂಡಗಳು ಕ್ವಾರ್ಟರ್-ಫೈನಲ್‌ಗೆ ಅರ್ಹತೆ ಪಡೆಯಲು 2 ತಂಡಗಳು ಪೈಪೋಟಿ ನಡೆಸುತ್ತಿದ್ದವು. ಆದರೆ, ಮುಂಬೈ ಮತ್ತು ಮಹಾರಾಷ್ಟ್ರ ಈ ಬಾರಿಯ ರಣಜಿ ಋತುವಿನಿಂದ ಲೀಗ್ ಹಂತದಲ್ಲಿಯೇ ಹೊರಬಿದ್ದಿವೆ.
ಮುಂಬೈ ಮತ್ತು ಮಹಾರಾಷ್ಟ್ರ ಎರಡೂ ತಂಡಗಳು ಕ್ವಾರ್ಟರ್-ಫೈನಲ್ ಸ್ಥಾನವನ್ನು ತಲುಪಲು ಅಬ್ಬರದ ಆಟವಾಡಿದವು. ಅಂತಿಮವಾಗಿ ಡ್ರಾನಲ್ಲಿ ಕೊನೆಗೊಂಡಿದ್ದರಿಂದ ಗುಂಪು ಹಂತದಿಂದ ಹೊರಬಿದ್ದವು.
ಅಂತಿಮ ಇನ್ನಿಂಗ್ಸ್‌ನಲ್ಲಿ 253 ರನ್‌ಗಳನ್ನು ಬೆನ್ನಟ್ಟಿದ ಮುಂಬೈ ದಿನದಾಟವನ್ನು 195/6ಕ್ಕೆ ಮುಗಿಸಿತು. ಎರಡೂ ತಂಡಗಳು ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ ತಲಾ 384 ರನ್ ಗಳಿಸಿದ್ದರಿಂದ, ಯಾವುದೇ ಬೋನಸ್ ಅಂಕಗಳನ್ನು ತೆಗೆದುಕೊಳ್ಳಲಾಗಲಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ಮುಂಬೈ ತಂಡದ ಪ್ರಸಾದ್ ಪವಾರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಇನ್ನು ರವೀಂದ್ರ ಜಡೇಜಾ ನಾಯಕತ್ವದ ಸೌರಾಷ್ಟ್ರ ತಂಡವು ಅಂತಿಮ ಗುಂಪು ಹಂತದ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಸೋತಿತು. ಬಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ಕಾರಣ ಕ್ವಾರ್ಟರ್-ಫೈನಲ್‌ಗೆ ಅರ್ಹತೆ ಗಿಟ್ಟಿಸಿತು. ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜಾ ತಮಿಳುನಾಡು ವಿರುದ್ಧ ಬೌಲಿಂಗ್‌ನಲ್ಲಿ ಪ್ರಚಂಡ ಪ್ರದರ್ಶನ ನೀಡಿದರೂ, ಬ್ಯಾಟಿಂಗ್‌ನಲ್ಲಿ ವಿಫಲರಾದರು.
ರಣಜಿ ಟ್ರೋಫಿ 2022-23ರಲ್ಲಿ ರಣಜಿ ಕ್ವಾರ್ಟರ್-ಫೈನಲ್‌ಗೆ ಅರ್ಹತೆ ಪಡೆದ ತಂಡಗಳೆಂದರೆ,
ಎ ಗುಂಪಿನಿಂದ ಬಂಗಾಳ, ಉತ್ತರಾಖಂಡ ತಂಡಗಳು
ಬಿ ಗುಂಪಿನಿಂದ ಆಂಧ್ರಪ್ರದೇಶ, ಸೌರಾಷ್ಟ್ರ ತಂಡಗಳು
ಸಿ ಗುಂಪಿನಿಂದ ಕರ್ನಾಟಕ, ಜಾರ್ಖಂಡ್
ಡಿ ಗುಂಪಿನಿಂದ ಮಧ್ಯಪ್ರದೇಶ, ಪಂಜಾಬ್ ತಂಡಗಳು
ರಣಜಿ ಟ್ರೋಫಿ 2022-23ರ ಕ್ವಾರ್ಟರ್-ಫೈನಲ್ ಮುಖಾಮುಖಿ
ಬಂಗಾಳ (ಎ1) vs ಜಾರ್ಖಂಡ್ (ಸಿ2)
ಸೌರಾಷ್ಟ್ರ (ಬಿ1) vs ಪಂಜಾಬ್ (ಡಿ2)
ಕರ್ನಾಟಕ (ಸಿ1) vs ಉತ್ತರಾಖಂಡ (ಎ2)
ಮಧ್ಯಪ್ರದೇಶ (ಡಿ1) vs ಆಂಧ್ರಪ್ರದೇಶ (ಬಿ2)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications