For Quick Alerts
ALLOW NOTIFICATIONS  
For Daily Alerts
 

ರಣಜಿ ಟ್ರೋಫಿ 2022: ಚೊಚ್ಚಲ ಪಂದ್ಯದಲ್ಲೇ ಶತಕ ಬಾರಿಸಿದ ಅರ್ಜುನ್ ತೆಂಡೂಲ್ಕರ್‌ಗೆ ಸಹೋದರಿ ಪ್ರತಿಕ್ರಿಯೆ

Ranji Trophy 2022: Sara Tendulkar Reaction To Brother Arjun Tendulkars Century on Debut

ಭಾರತದ ಮಾಜಿ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ 2022ರ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಗೋವಾ ತಂಡದ ಪರವಾಗಿ ಆಡುತ್ತಿದ್ದಾರೆ.

ಬುಧವಾರ (ಡಿಸೆಂಬರ್ 14)ರಂದು ರಣಜಿ ಟ್ರೋಫಿ ಟೂರ್ನಿಗೆ ಪದಾರ್ಪಣೆ ಮಾಡಿರುವ ಅರ್ಜುನ್ ತಮ್ಮ ಚೊಚ್ಚಲ ಪಂದ್ಯದಲ್ಲಿಯೇ ರಾಜಸ್ಥಾನ ವಿರುದ್ಧ ಅಮೋಘ ಶತಕ ಬಾರಿಸಿ ಮಿಂಚಿದ್ದಾರೆ. 178 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದ ಅರ್ಜುನ್ ತೆಂಡೂಲ್ಕರ್, ತಾನು ಅಪ್ಪನಂತೆ ಕ್ರಿಕೆಟ್‌ಗೆ ಶತಕದೊಂದಿಗೆ ಕ್ರಿಕೆಟ್ ಲೋಕಕ್ಕೆ ಪದಾರ್ಪಣೆ ಮಾಡಿದ್ದಾರೆ.

ಇದೇ ವೇಳೆ ತನ್ನ ಕಿರಿಯ ಸಹೋದರ ಅರ್ಜುನ್ ತೆಂಡೂಲ್ಕರ್ ತನ್ನ ಮೊದಲ ಪ್ರಥಮ ದರ್ಜೆ ಪಂದ್ಯದಲ್ಲಿ ತನ್ನ ಚೊಚ್ಚಲ ರಣಜಿ ಟ್ರೋಫಿ ಶತಕವನ್ನು ಬಾರಿಸಿದಾಗ ಸಾರಾ ತೆಂಡೂಲ್ಕರ್ ತನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ.

ಅರ್ಜುನ್ ತಮ್ಮ ತಂದೆ ಸಚಿನ್ ತೆಂಡೂಲ್ಕರ್ ಅವರ ಸಾಧನೆಯನ್ನು ಪುನರಾವರ್ತಿಸಿದ್ದಾರೆ. ಸಚಿನ್ 1988ರಲ್ಲಿ ಮುಂಬೈ ತಂಡದ ಪರ ಗುಜರಾತ್‌ ವಿರುದ್ಧ ಆಡಿದ ಚೊಚ್ಚಲ ಪಂದ್ಯದಲ್ಲೇ ತಮ್ಮ ಚೊಚ್ಚಲ ಶತಕವನ್ನು ಸಿಡಿಸಿದ್ದರು. ಅವರ ಮಗ ಅರ್ಜುನ್ ಕೂಡ ಕೆಂಪು ಬಾಲ್‌ನಲ್ಲಿ ತಮ್ಮ ಮೊದಲ ಶತಕವನ್ನು ಸಾಧಿಸಿದ್ದು, ಒಂದು ಸುಂದರವಾದ ಮತ್ತು ಇತಿಹಾಸ ಮರುಕಳಿಸಿದ ಘಟನೆಯಾಗಿದೆ.

Ranji Trophy 2022: Sara Tendulkar Reaction To Brother Arjun Tendulkars Century on Debut

ಸಾರಾ ತೆಂಡೂಲ್ಕರ್ ಅವರು ತಮ್ಮ ಸಹೋದರ ಅರ್ಜುನ್‌ನ ಸಾಧನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಲು ಇನ್‌ಸ್ಟಾಗ್ರಾಮ್ ಸ್ಟೋರಿ ಪೋಸ್ಟ್ ಮಾಡಿದ್ದಾರೆ. ಪಂದ್ಯದ ಚಿತ್ರಗಳನ್ನು ಹಂಚಿಕೊಂಡು ಹೀಗೆ ಬರೆದಿದ್ದಾರೆ, ""ಇಂದು ನಾನು ಹೆಮ್ಮೆಯ ಸಹೋದರಿ ಮತ್ತು ಇದು ಕೇವಲ ಪ್ರಾರಂಭ ಮಾತ್ರ. ಲವ್ ಯು ಸಹೋದರ. ನಿನ್ನ ಎಲ್ಲಾ ಶ್ರಮ ಮತ್ತು ತಾಳ್ಮೆ ನಿಧಾನವಾಗಿ ಗೋಚರಿಸುತ್ತಿದೆ,'' ಎಂದಿದ್ದಾರೆ.

ಅರ್ಜುನ್ ತೆಂಡೂಲ್ಕರ್ 207 ಎಸೆತಗಳಲ್ಲಿ 120 ರನ್ ಗಳಿಸಿದರೆ, ಅವರ ಸಹ ಆಟಗಾರ ಸುಯಶ್ ಪ್ರಭುದೇಸಾಯಿ 416 ಎಸೆತಗಳಲ್ಲಿ 212 ರನ್ ಗಳಿಸಿ ದ್ವಿಶತಕ ಸಿಡಿಸಿದರು. ಅರ್ಜುನ್ ಅವರ ಇನ್ನಿಂಗ್ಸ್‌ನಲ್ಲಿ ಕ್ರಮವಾಗಿ 16 ಬೌಂಡರಿ ಹಾಗೂ 2 ಸಿಕ್ಸರ್‌ಗಳು ಸೇರಿದ್ದವು.

ಅರ್ಜುನ್ ಮತ್ತು ಪ್ರಭುದೇಸಾಯಿ ಬ್ಯಾಟಿಂಗ್‌ ನೆರವಿನಿಂದಾಗಿ ಗೋವಾ ತಂಡ 174 ಓವರ್‌ಗಳಲ್ಲಿ 547/9 ಡಿಕ್ಲೇರ್ ಮಾಡಿಕೊಂಡಿತು. ಆದರೆ, ಜೂನಿಯರ್ ತೆಂಡೂಲ್ಕರ್ ಬೌಲಿಂಗ್‌ನಲ್ಲಿ ದುಬಾರಿಯಾದ್ದು, 8 ಓವರ್‌ಗಳಲ್ಲಿ 59 ರನ್‌ಗಳನ್ನು ಬಿಟ್ಟುಕೊಟ್ಟರು.

ಇನ್ನು ಸಾರಾ ತೆಂಡೂಲ್ಕರ್‌ಗೆ ಸಂಬಂಧಿಸಿದಂತೆ ಹೇಳಬೇಕೆಂದರೆ, ಆಕೆ ಪ್ರಸ್ತುತ ಲಂಡನ್‌ನಲ್ಲಿದ್ದು, ಯೂನಿವರ್ಸಿಟಿ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯನ್ನು ಮಾಡುತ್ತಿದ್ದಾಳೆ. ಅದೇ ಕಾಲೇಜಿನಲ್ಲಿ ಈ ಮೊದಲು ವೈದ್ಯಕೀಯ ಪದವಿ ಪಡೆದಿದ್ದಾಳೆ.

ಸಾರಾ ಈ ವರ್ಷದ ಆರಂಭದಲ್ಲಿ ಮಾಡೆಲಿಂಗ್ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದರು. ಬಾಲಿವುಡ್ ಚೊಚ್ಚಲ ಚಿತ್ರ ಮಾಡುವ ವದಂತಿಗಳು ಹರಡಿದ್ದವು. ಆದರೆ ಅವರು ಲಂಡನ್‌ನಲ್ಲಿ ಹೊಸ ಕೋರ್ಸ್‌ಗೆ ಸೇರಿದಾಗ ಎಲ್ಲಾ ವದಂತಿಗಳಿಗೆ ಪೂರ್ಣವಿರಾಮ ನಿಡಿದರು.

Story first published: Friday, December 16, 2022, 8:43 [IST]
Other articles published on Dec 16, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+