Ranji Trophy 2022: 8 ವಿಕೆಟ್ ಕಬಳಿಸಿದ ಉತ್ತರಾಖಂಡ ಮಾರಕ ವೇಗಿ; ಹಿಮಾಚಲ ಪ್ರದೇಶ 49ಕ್ಕೆ ಆಲೌಟ್

ಉತ್ತರಾಖಂಡ ವೇಗದ ಬೌಲರ್ ದೀಪಕ್ ಧಾಪೋಲಾ ಅವರು ಡೆಹ್ರಾಡೂನ್‌ನಲ್ಲಿ ನಡೆದ ತಮ್ಮ 2022-23ರ ರಣಜಿ ಟ್ರೋಫಿ ಗ್ರೂಪ್ ಎ ಪಂದ್ಯದ ಮೊದಲ ದಿನ ಉಸಿರುಗಟ್ಟಿಸುವ ಬೌಲಿಂಗ್ ಮಾಡಿದರು.
ಮಂಗಳವಾರದ ಪಂದ್ಯದಲ್ಲಿ ಪ್ರವಾಸಿ ಹಿಮಾಚಲ ಪ್ರದೇಶ 16.3 ಓವರ್‌ಗಳಲ್ಲಿ 49 ರನ್‌ಗಳಿಗೆ ಸರ್ವಪತನ ಕಂಡಾಗ ಧಾಪೋಲಾ ಎಂಟು ವಿಕೆಟ್‌ಗಳನ್ನು ಕಬಳಿಸಿದರು.
32ರ ಹರೆಯದ ದೀಪಕ್ ಧಾಪೋಲಾ ಅವರು ಮೂವರು ಆಟಗಾರರನ್ನು ಸೊನ್ನೆಗೆ ಔಟ್ ಮಾಡಿದರು ಮತ್ತು ಹಿಮಾಚಲ ಪ್ರದೇಶದ ಬ್ಯಾಟಿಂಗ್ ಬಲವನ್ನು ಛಿದ್ರಪಡಿಸಿದರು. ಧಾಪೋಲಾ ಅವರ ಮಾರಕ ಬೌಲಿಂಗ್‌ಗೆ ಹಿಮಾಚಲ ತತ್ತರಿಸಿತು. ದೀಪಕ್ ಧಾಪೋಲಾ 8.3 ಓವರ್‌ಗಳಲ್ಲಿ 35 ರನ್ ನೀಡಿ 8 ವಿಕೆಟ್‌ಗಳೊಂದಿಗೆ ಮಿಂಚಿದರು.
ನಂತರ ಬ್ಯಾಟಿಂಗ್ ಇನ್ನಿಂಗ್ಸ್ ಆರಂಬಿಸಿದ ಉತ್ತರಾಖಂಡ ಮೊದಲ ದಿನದಾಟದ ಅಂತ್ಯಕ್ಕೆ ಆರು ವಿಕೆಟ್ ನಷ್ಟಕ್ಕೆ 295 ರನ್ ಗಳಿಸಿ 246 ರನ್‌ಗಳ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿದೆ. ಆದಿತ್ಯ ತಾರೆ (ಅಜೇಯ 91 ರನ್) ಮತ್ತು ಅಭಯ್ ನೇಗಿ (ಅಜೇಯ 48 ರನ್) ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಮೊದಲ ದಿನದ ಪ್ರಮುಖ ಅಂಶವೆಂದರೆ ವಿವೇಕ್ ಧಾಪೋಲಾ ಅವರ ಬಿಗಿ ಬೌಲಿಂಗ್ ದಾಳಿ. 2018ರಲ್ಲಿ ಪ್ರಥಮ ದರ್ಜೆಗೆ ಪದಾರ್ಪಣೆ ಮಾಡಿದ ಮತ್ತು ಕೇವಲ 15ನೇ ಪಂದ್ಯವನ್ನು ಆಡುತ್ತಿರುವ ಈ ವೇಗಿ ಒಂದು ಇನಿಂಗ್ಸ್‌ನಲ್ಲಿ 50 ರನ್‌ಗೆ 7 ವಿಕೆಟ್ ಪಡೆದ ಹಿಂದಿನ ಅತ್ಯುತ್ತಮ ಬೌಲಿಂಗ್ ದಾಖಲೆಯನ್ನು ತಾವೇ ಮುರಿದರು.
2018-19ರ ರಣಜಿ ಟ್ರೋಫಿಯ ಗುಂಪು ಹಂತದಲ್ಲಿ ಏಳು ಪಂದ್ಯಗಳಲ್ಲಿ 44 ರನ್‌ಗಳೊಂದಿಗೆ ಮತ್ತು ಎಂಟು ಪಂದ್ಯಗಳಲ್ಲಿ 45 ವಿಕೆಟ್‌ಗಳೊಂದಿಗೆ ಪಂದ್ಯಾವಳಿಯನ್ನು ಮುಗಿಸಿದ ವಿವೇಕ್ ಧಾಪೋಲಾ ತಮ್ಮ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳನ್ನು ಸುಧಾರಿಸಲು ಪ್ರಯತ್ನಿಸುತ್ತಿದ್ದಾರೆ.
ಹಿಮಾಚಲ ಪ್ರದೇಶ ಪರ ಅಂಕಿತ್ ಕಲ್ಸಿ 26 ರನ್ ಗಳಿಸಿ ಎರಡಂಕಿ ಮೊತ್ತ ಗಳಿಸಿದ ಏಕೈಕ ಬ್ಯಾಟರ್ ಎನಿಸಿದರು. ನಾಲ್ವರು ಬ್ಯಾಟರ್‌ಗಳು ತಮ್ಮ ಖಾತೆಯನ್ನು ತೆರೆಯದೆ ಡ್ರೆಸ್ಸಿಂಗ್ ಕೋಣೆಗೆ ಹಿಂತಿರುಗಿದರು.
ನಂತರ ಉತ್ತರಾಖಂಡ ಇನ್ನಿಂಗ್ಸ್ ಆರಂಭಿಸಿದ ಪ್ರಿಯಾಂಶು ಖಂಡೂರಿ (36) ಮತ್ತು ನಾಯಕ ಜೀವನ್‌ಜೋತ್ ಸಿಂಗ್ (45) ಆತಿಥೇಯರಿಗೆ ಉತ್ತಮ ಆರಂಭವನ್ನು ಒದಗಿಸಿದರು. ಆದಿತ್ಯ ತಾರೆ ಅವರ ಅಜೇಯ 91 ರನ್‌ಗಳು ದೊಡ್ಡ ಮೊತ್ತದ ಮುನ್ಸೂಚನೆ ನೀಡಿದೆ.
ಸಂಕ್ಷಿಪ್ತ ಸ್ಕೋರ್‌ಗಳು:
ಹಿಮಾಚಲ ಪ್ರದೇಶ 16.3 ಓವರ್‌ಗಳಲ್ಲಿ 49 (ದೀಪಕ್ ಧಾಪೋಲಾ 8/35, ಅಭಯ್ ನೇಗಿ 2/5)
ಉತ್ತರಾಖಂಡ 65 ಓವರ್‌ಗಳಲ್ಲಿ 6 ವಿಕೆಟ್‌ಗೆ 295 (ಜೀವನ್‌ಜೋತ್ ಸಿಂಗ್ 45, ಆದಿತ್ಯ ತಾರೆ 91 ನಾಟೌಟ್, ಅಭಯ್ ನೇಗಿ 48 ನಾಟೌಟ್, ರಿಷಿ ಧವನ್ 52/3)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications