Ranji Trophy 2023 Final: ಪ್ರಶಸ್ತಿಗಾಗಿ ಬಂಗಾಳ vs ಸೌರಾಷ್ಟ್ರ ಹಣಾಹಣಿ; ಬಂಗಾಳ ಕ್ರೀಡಾ ಸಚಿವನಿಗೆ ಮಹತ್ವದ ಪಂದ್ಯ

2022-23ರ ರಣಜಿ ಟ್ರೋಫಿ ಋತುವಿನ ಅಂತಿಮ ಪಂದ್ಯಕ್ಕೆ ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನ ಸಾಕ್ಷಿಯಾಗಲಿದೆ. ಗುರುವಾರ, ಫೆಬ್ರವರಿ 16ರಿಂದ ಆರಂಭವಾಗುವ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಬಂಗಾಳ ಹಾಗೂ ಸೌರಾಷ್ಟ್ರ ತಂಡಗಳು ಮುಖಾಮುಖಿಯಾಗಲಿವೆ.
ಪಶ್ಚಿಮ ಬಂಗಾಳ ಕ್ರೀಡಾ ಸಚಿವ ಮನೋಜ್ ತಿವಾರಿ ಅವರು ಆತಿಥೇಯ ಬಂಗಾಳ ಮುನ್ನಡೆಸುತ್ತಿದ್ದು, 33 ವರ್ಷಗಳ ನಂತರ ರಣಜಿ ಟ್ರೋಫಿ ಪ್ರಶಸ್ತಿ ಎತ್ತಿ ಹಿಡಿಯುವುದೇ ಎಂಬ ಮತ್ತೊಂದು ರೋಚಕತೆಗೆ ಸಾಕ್ಷಿಯಾಗಿದ್ದರೆ, ಇತ್ತ ದೇಶೀಯ ಕ್ರಿಕೆಟ್ ಸ್ಟಾರ್ ಬೌಲರ್ ಜಯದೇವ್ ಉನಾದ್ಕತ್ ಸೌರಾಷ್ಟ್ರ ತಂಡವನ್ನು ಮುನ್ನಡೆಸಲು ಮರಳಿರುವುದು ಫೈನಲ್ ಪಂದ್ಯದ ರೋಚಕತೆ ಹೆಚ್ಚಿಸಿದೆ.
ಬಂಗಾಳ ತಂಡವು ಕೇವಲ ಪ್ರಶಸ್ತಿಯನ್ನು ಗೆಲ್ಲುವ ಹುಮ್ಮಸ್ಸು ಮಾತ್ರವಲ್ಲದೆ, ಪ್ರತೀಕಾರ ತೀರಿಸಿಕೊಳ್ಳುವ ತವಕದಲ್ಲಿದೆ. 2020ರಲ್ಲಿ ಕೊನೆಯ ಬಾರಿಗೆ ಬಂಗಾಳ ತಂಡ ಫೈನಲ್‌ಗೆ ಪ್ರವೇಶಿಸಿದ್ದಾಗ ಸೌರಾಷ್ಟ್ರ ತಂಡವು ರಾಜ್‌ಕೋಟ್‌ನಲ್ಲಿ ಮೊದಲ ಇನ್ನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ರಣಜಿ ಟ್ರೋಫಿ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.

ಈ ಬಾರಿ ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಎರಡೂ ತಂಡಗಳು ಮತ್ತೊಮ್ಮೆ ರಣಜಿ ಫೈನಲ್‌ನಲ್ಲಿ ಸೆಣಸಾಡುತ್ತಿವೆ. ಬಂಗಾಳವು 1990ರಲ್ಲಿ ತಮ್ಮ ಕೊನೆಯ ರಣಜಿ ಟ್ರೋಫಿ ಎತ್ತಿ ಹಿಡಿದಿತ್ತು. ಅಲ್ಲಿಂದ ಈವರೆಗೆ ನಿರಾಸೆ ಅನುಭವಿಸುತ್ತಲೇ ಬಂದಿದೆ. ಆದರೆ, 2019-20 ಋತುವಿನಿಂದ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಮೂರು ಬಾರಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ ಮತ್ತು ಎರಡು ಬಾರಿ ಫೈನಲ್ ತಲುಪಿದ್ದಾರೆ.
ರಣಜಿ ಟ್ರೋಫಿ ಫೈನಲ್: ಬಂಗಾಳ vs ಸೌರಾಷ್ಟ್ರ ಪಂದ್ಯದ ವಿವರ
ಸ್ಥಳ ಮತ್ತು ದಿನಾಂಕ: ರಣಜಿ ಟ್ರೋಫಿ 2023ರ ಫೈನಲ್ ಪಂದ್ಯವು ಬಂಗಾಳ ಮತ್ತು ಸೌರಾಷ್ಟ್ರ ತಂಡಗಳ ನಡುವೆ ಗುರುವಾರ, ಫೆಬ್ರವರಿ 16ರಿಂದ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ.
ಪಂದ್ಯದ ಸಮಯ: ಬಂಗಾಳ ಮತ್ತು ಸೌರಾಷ್ಟ್ರ ತಂಡಗಳ ರಣಜಿ ಟ್ರೋಫಿ 2023ರ ಫೈನಲ್ ಪಂದ್ಯವು ಭಾರತೀಯ ಕಾಲಮಾನ ಬೆಳಿಗ್ಗೆ 9.30ಕ್ಕೆ ಆರಂಭವಾಗಲಿದೆ.
ಟಿವಿ ಮತ್ತು ಲೈವ್ ಸ್ಟ್ರೀಮಿಂಗ್ ವೀಕ್ಷಣೆ: ಬಂಗಾಳ ಮತ್ತು ಸೌರಾಷ್ಟ್ರ ರಣಜಿ ಟ್ರೋಫಿ 2023ರ ಫೈನಲ್ ಪಂದ್ಯವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ನೇರಪ್ರಸಾರವಾಗಲಿದ್ದರೆ, ಡಿಸ್ನಿ+ ಹಾಟ್ ಸ್ಟಾರ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಿ ವೀಕ್ಷಿಸಬಹುದು.

ಬಂಗಾಳ vs ಸೌರಾಷ್ಟ್ರ ರಣಜಿ ಟ್ರೋಫಿ ಫೈನಲ್ ಪಂದ್ಯದ ಸಂಭಾವ್ಯ ಆಡುವ 11ರ ಬಳಗ
ಬಂಗಾಳ: ಮನೋಜ್ ತಿವಾರಿ (ನಾಯಕ), ಅನುಸ್ತಪ್ ಮಜುಂದಾರ್, ಅಭಿಮನ್ಯು ಈಶ್ವರನ್, ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್), ಎಸ್ ಮೊಂಡಲ್, ವೃತ್ತಕ್ ಚಟರ್ಜಿ, ಶಹಬಾಜ್ ಅಹ್ಮದ್, ಇಶಾನ್ ಪೊರೆಲ್, ಮುಖೇಶ್ ಕುಮಾರ್, ಆಕಾಶ್ ದೀಪ್, ಅಭಿಷೇಕ್ ದಾಸ್
ಸೌರಾಷ್ಟ್ರ: ಜಯದೇವ್ ಉನದ್ಕತ್ (ನಾಯಕ), ಅರ್ಪಿತ್ ವಾಸವಾಡ, ಸ್ನೆಲ್ ಪಟೇಲ್, ಜಯ್ ಗೋಹಿಲ್, ನವನೀತ್ ವೋರಾ, ಚಿರಾಗ್ ಜಾನಿ, ಶೆಲ್ಡನ್ ಜಾಕ್ಸನ್, ಹಾರ್ವಿಕ್ ದೇಸಾಯಿ (ವಿಕೆಟ್ ಕೀಪರ್), ಧರ್ಮೇಂದ್ರಸಿನ್ಹ್ ಜಡೇಜಾ, ಚೇತನ್ ಸಕರಿಯಾ, ಪಾರ್ಥ್ ಭುತ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications