For Quick Alerts
ALLOW NOTIFICATIONS  
For Daily Alerts
 

Ranji Trophy 2023: ರಣಜಿ ಟ್ರೋಫಿಯಲ್ಲಿ ಈ ಸಾಧನೆಗೈದ ಮೊದಲ ಸೌರಾಷ್ಟ್ರ ಬೌಲರ್ ಜಯದೇವ್ ಉನಾದ್ಕತ್

Ranji Trophy 2023: Jaydev Unadkat Becomes First Saurashtra Bowler To Take 300 Wickets In Ranji Trophy

ಗುರುವಾರ, ಫೆಬ್ರವರಿ 16ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಆರಂಭವಾಗಿರುವ ಸೌರಾಷ್ಟ್ರ ಮತ್ತು ಬಂಗಾಳ ನಡುವಿನ 2022-23ರ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಆತಿಥೇಯ ಬಂಗಾಳ ತಂಡ ಸಾಧಾರಣ ಮೊತ್ತ ಕಲೆಹಾಕಿದೆ. ಇನ್ನು ಪ್ರವಾಸಿ ಸೌರಾಸ್ಟ್ರ ಬೌಲರ್‌ಗಳು ಬಿಗಿ ಬೌಲಿಂಗ್ ಪ್ರದರ್ಶನ ನೀಡಿ ಮಿಂಚಿದರು.

ಇದೇ ವೇಳೆ ಸೌರಾಷ್ಟ್ರ ತಂಡದ ನಾಯಕ ಜಯದೇವ್ ಉನಾದ್ಕತ್ ಈ ಪಂದ್ಯದಲ್ಲಿ 300 ರಣಜಿ ವಿಕೆಟ್‌ಗಳನ್ನು ಪೂರೈಸಿದ ಸಾಧನೆ ಮಾಡಿದರು.

2010ರಲ್ಲಿ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ ಜಯದೇವ್ ಉನಾದ್ಕತ್, ಬಂಗಾಳದ ಮುಖೇಶ್ ಕುಮಾರ್ ಅವರನ್ನು ಔಟ್ ಮಾಡುವ ಮೂಲಕ ತಮ್ಮ 77ನೇ ರಣಜಿ ಪಂದ್ಯದಲ್ಲಿ 300 ರಣಜಿ ವಿಕೆಟ್‌ಗಳ ಹೆಗ್ಗುರುತನ್ನು ತಲುಪಿದರು. 31 ವರ್ಷದ ಜಯದೇವ್ ಉನದ್ಕತ್ ದೇಶಿಯ ರೆಡ್ ಬಾಲ್ ಟೂರ್ನಿಯಲ್ಲಿ ಈ ಸಾಧನೆ ಮಾಡಿದ ಮೊದಲ ಸೌರಾಷ್ಟ್ರ ಬೌಲರ್ ಎನಿಸಿದರು.

ಪ್ರಸಕ್ತ ರಣಜಿ ಋತುವಿನಲ್ಲಿ 7 ಇನ್ನಿಂಗ್ಸ್‌ಗಳಿಂದ 20 ವಿಕೆಟ್‌

ಪ್ರಸಕ್ತ ರಣಜಿ ಋತುವಿನಲ್ಲಿ 7 ಇನ್ನಿಂಗ್ಸ್‌ಗಳಿಂದ 20 ವಿಕೆಟ್‌

ರಣಜಿ ಟ್ರೋಫಿ ಫೈನಲ್‌ ಪಂದ್ಯದಲ್ಲಿ ಸೌರಾಷ್ಟ್ರ ತಂಡವನ್ನು ಮುನ್ನಡೆಸಲು, ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಭಾರತ ತಂಡದಿಂದ ಜಯದೇವ್ ಉನದ್ಕತ್ ಅವರನ್ನು ಬಿಡುಗಡೆ ಮಾಡಲಾಗಿತ್ತು. ಪ್ರಸಕ್ತ ರಣಜಿ ಋತುವಿನಲ್ಲಿ 7 ಇನ್ನಿಂಗ್ಸ್‌ಗಳಿಂದ 20 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಇದಕ್ಕೂ ಮುನ್ನ ಒಂದೇ ರಣಜಿ ಟ್ರೋಫಿ ಋತುವಿನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವೇಗಿ ಎಂಬ ದಾಖಲೆ ಜಯದೇವ್ ಉನದ್ಕತ್ ಹೆಸರಿನಲ್ಲಿದೆ. 2019-20ರ ರಣಜಿ ಋತುವಿನಲ್ಲಿ ಸೌರಾಷ್ಟ್ರ ತಂಡ ಚಾಂಪಿಯನ್ ಆದಾಗ ಜಯದೇವ್ ಉನಾದ್ಕತ್ 10 ಪಂದ್ಯಗಳಿಂದ 67 ವಿಕೆಟ್‌ಗಳನ್ನು ಪಡೆದಿದ್ದರು.

ದೆಹಲಿ ವಿರುದ್ಧ 39 ರನ್‌ಗಳಿಗೆ 8 ವಿಕೆಟ್ ಪಡೆದ ಉನಾದ್ಕತ್

ದೆಹಲಿ ವಿರುದ್ಧ 39 ರನ್‌ಗಳಿಗೆ 8 ವಿಕೆಟ್ ಪಡೆದ ಉನಾದ್ಕತ್

ಪ್ರಸಕ್ತ ಸಾಲಿನ ಪಂದ್ಯಾವಳಿಯ ರಾಜ್‌ಕೋಟ್‌ನಲ್ಲಿ ನಡೆದ ದೆಹಲಿ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಜಯದೇವ್ ಉನಾದ್ಕತ್ ಮೊದಲ ಓವರ್‌ನಲ್ಲಿಯೇ ಹ್ಯಾಟ್ರಿಕ್ ಸಾಧನೆ ಮಾಡಿದರು ಮತ್ತು ಅದೇ ಇನ್ನಿಂಗ್ಸ್‌ನಲ್ಲಿ ತಮ್ಮ ವೃತ್ತಿಜೀವನದ ಅತ್ಯುತ್ತಮ ಪ್ರಥಮ ದರ್ಜೆ ಬೌಲಿಂಗ್ ಪ್ರದರ್ಶನ 39 ರನ್‌ಗಳಿಗೆ 8 ವಿಕೆಟ್ ಪಡೆದರು.

ಸೌರಾಷ್ಟ್ರ ರಣಜಿ ತಂಡದ ನಾಯಕ ಜಯದೇವ್ ಉನಾದ್ಕತ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಈವರೆಗೆ 173 ಇನ್ನಿಂಗ್ಸ್‌ಗಳಿಂದ 23ರ ಸರಾಸರಿ ಮತ್ತು 21 ಬಾರಿ 5 ವಿಕೆಟ್‌ಗಳ ಸಾಧನೆಯೊಂದಿಗೆ 376 ವಿಕೆಟ್‌ಗಳನ್ನು ಪಡೆದಿದ್ದಾರೆ.

ಸೌರಾಷ್ಟ್ರ ಮಾರಕ ಬೌಲಿಂಗ್‌ಗೆ ತತ್ತರಿಸಿದ ಬಂಗಾಳ

ಸೌರಾಷ್ಟ್ರ ಮಾರಕ ಬೌಲಿಂಗ್‌ಗೆ ತತ್ತರಿಸಿದ ಬಂಗಾಳ

ಟಾಸ್ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡ ಸೌರಾಷ್ಟ್ರ ನಾಯಕ ಜಯದೇವ್ ಉನಾದ್ಕತ್ ತಮ್ಮ ನಿರ್ಧಾರವನ್ನು ಸಮರ್ಥಿಸುವ ರೀತಿ ಬೌಲಿಂಗ್ ಮಾಡಿದರು. ಇನ್ನು ಪಶ್ಚಿಮ ಬಂಗಾಳ ಕ್ರೀಡಾ ಸಚಿವ ಮನೋಜ್ ತಿವಾರಿ ನಾಯಕತ್ವದ ಆತಿಥೇಯ ಬಂಗಾಳ ತಂಡ 54.1 ಓವರ್‌ಗಳಲ್ಲಿ 174 ರನ್ ಗಳಿಸಿ ಸರ್ವಪತನ ಕಂಡಿದೆ.

ಶಹಬಾಜ್ ಅಹ್ಮದ್ 112 ಎಸೆತಗಳಲ್ಲಿ 69 ರನ್ ಗಳಿಸಿದರೆ, ಅಭಿಷೇಕ್ ಪೋರೆಲ್ 98 ಎಸೆತಗಳಲ್ಲಿ 50 ರನ್ ಬಾರಿಸಿ ಬಂಗಾಳ ತಂಡವನ್ನು 150ರ ಗಡಿ ದಾಟಿಸಿದರು. ಇವರಿಬ್ಬರು 7ನೇ ವಿಕೆಟ್ ಜೊತೆಯಾಟಕ್ಕೆ 99 ರನ್‌ಗಳ ಜೊತೆಯಾಟ ನೀಡಿದರು.

ಸೌರಾಷ್ಟ್ರ ಪರ ಬೌಲಿಂಗ್‌ನಲ್ಲಿ ನಾಯಕ ಜಯದೇವ್ ಉನಾದ್ಕತ್ 44 ರನ್ ನೀಡಿ 3 ವಿಕೆಟ್ ಪಡೆದರೆ, ಚೇತನ್ ಸಕಾರಿಯಾ 33 ರನ್ ನೀಡಿ 3 ವಿಕೆಟ್ ಪಡೆದರು. ಉಳಿದಂತೆ ಚಿರಾಗ್ ಜಾನಿ ಮತ್ತು ಧರ್ಮೇಂದ್ರಸಿನ್ಹ್ ಜಡೇಜಾ ತಲಾ ಎರಡು ವಿಕೆಟ್ ಕಬಳಿಸಿದರು.

Story first published: Thursday, February 16, 2023, 17:13 [IST]
Other articles published on Feb 16, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+