Ranji Trophy 2023: ಸೆಮಿಫೈನಲ್ ಪಂದ್ಯಗಳ ವೇಳಾಪಟ್ಟಿ, ಸ್ಥಳ, ಲೈವ್ ಸ್ಟ್ರೀಮಿಂಗ್; ಕರ್ನಾಟಕದ ಎದುರಾಳಿ ಯಾರು?

2022-23ನೇ ರಣಜಿ ಟ್ರೋಫಿ ಸೆಮಿಫೈನಲ್ ಹಂತವನ್ನು ತಲುಪಿದ್ದು, ನಾಲ್ಕು ತಂಡಗಳು ಈ ಋತುವಿನ ಫೈನಲ್ ಹಂತ ತಲುಪಲು ಪೈಪೋಟಿ ನಡೆಸಲು ಸಜ್ಜಾಗಿವೆ. ಇಲ್ಲಿ ಗೆದ್ದ ಎರಡು ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ.
2022-23ನೇ ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್‌ನಲ್ಲಿ ಗೆಲುವು ಹಾಗೂ ಮುನ್ನಡೆ ಫಲಿತಾಂಶಗಳ ಆಧಾರದ ಮೇಲೆ ಮಧ್ಯಪ್ರದೇಶ, ಕರ್ನಾಟಕ, ಪಶ್ಚಿಮ ಬಂಗಾಳ ಮತ್ತು ಸೌರಾಷ್ಟ್ರ ತಂಡಗಳು ಅಂತಿಮ ನಾಲ್ಕರ ಘಟ್ಟಕ್ಕೆ ಅರ್ಹತೆ ಪಡೆದಿವೆ.
ಸೆಮಿಫೈನಲ್ ಪಂದ್ಯಗಳು ಐದು ದಿನಗಳ ಅವಧಿಯಲ್ಲಿ ಆಡಲಾಗುತ್ತದೆ. ವಿಜೇತರು ಅಂತಿಮ ಹಂತಕ್ಕೆ ಮುನ್ನಡೆಯುತ್ತಾರೆ. ಒಂದು ವೇಳೆ ಪಂದ್ಯ ಟೈ ಅಥವಾ ಡ್ರಾನಲ್ಲಿ ಮುಕ್ತಾಯವಾದರೆ, ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದ ತಂಡವು ಫೈನಲ್‌ಗೇರುತ್ತದೆ.
ಇನ್ನು ಸೆಮಿಫೈನಲ್‌ನಲ್ಲಿ ಯಾವುದೇ ತಂಡವು ಒಂದಕ್ಕಿಂತ ಹೆಚ್ಚು ಇನ್ನಿಂಗ್ಸ್ ಆಡದಿದ್ದರೆ, ಗುಂಪು ಹಂತದಲ್ಲಿ ಉತ್ತಮ ದಾಖಲೆಯನ್ನು ಹೊಂದಿರುವ ತಂಡವು 2022-23 ಋತುವಿನ ರಣಜಿ ಟ್ರೋಫಿ ಫೈನಲ್ ಹಂತ ತಲುಪುತ್ತದೆ.

ರಣಜಿ ಟ್ರೋಫಿ 2022-23ರ ಸೆಮಿಫೈನಲ್ ಪಂದ್ಯಗಳು, ಲೈವ್ ಸ್ಟ್ರೀಮಿಂಗ್, ಸ್ಥಳ ಮತ್ತು ಇತರ ಸಂಪೂರ್ಣ ವಿವರಗಳು ಇಲ್ಲಿದೆ.
ರಣಜಿ ಟ್ರೋಫಿ 2022-23ರ ಸೆಮಿಫೈನಲ್ ವೇಳಾಪಟ್ಟಿ, ಸ್ಥಳ, ಸಮಯ
ಬುಧವಾರ, ಫೆಬ್ರವರಿ 8ರಿಂದ 12ರವರೆಗೆ ರಣಜಿ ಟ್ರೋಫಿ 2022-23ರ ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ಇಂದೋರ್‌ನ ಹೋಳ್ಕರ್ ಸ್ಟೇಡಿಯಂನಲ್ಲಿ ನಡೆಯುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬಂಗಾಳ ತಂಡದ ವಿರುದ್ಧ ಮಧ್ಯಪ್ರದೇಶ ತಂಡ ಸೆಣಸಾಡಲಿದೆ. ಪಂದ್ಯದ ಸಮಯ ಭಾರತೀಯ ಕಾಲಮಾನ ಬೆಳಿಗ್ಗೆ 9.30ಕ್ಕೆ ಆರಂಭವಾಗಲಿದೆ.
ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ಮತ್ತು ಸೌರಾಷ್ಟ್ರ ತಂಡಗಳು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೆಣಸಲಿವೆ. ಪಂದ್ಯದ ಸಮಯ ಭಾರತೀಯ ಕಾಲಮಾನ ಬೆಳಿಗ್ಗೆ 9.30ಕ್ಕೆ ಆರಂಭವಾಗಲಿದೆ.

ಟಿವಿ ವೀಕ್ಷಣೆ: 2022-23ರ ರಣಜಿ ಟ್ರೋಫಿಯ ಸೆಮಿಫೈನಲ್ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ.
ಲೈವ್ ಸ್ಟ್ರೀಮಿಂಗ್: 2022-23ರ ರಣಜಿ ಟ್ರೋಫಿಯ ಸೆಮಿಫೈನಲ್ ಪಂದ್ಯಗಳನ್ನು ಡಿಸ್ನಿ + ಹಾಟ್‌ಸ್ಟಾರ್ ವೆಬ್‌ಸೈಟ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ.
ಸೆಮಿಫೈನಲ್ ಪ್ರವೇಶಿಸಿದ ತಂಡಗಳು ಫೆ.16ರಿಂದ 20ರವರೆಗೆ ನಡೆಯಲಿರುವ ರಣಜಿ ಟ್ರೋಫಿ ಫೈನಲ್‌ನಲ್ಲಿ ಸೆಣಸಾಡಲಿವೆ. ಆದರೆ, ಇನ್ನೂ ಫೈನಲ್ ಪಂದ್ಯ ನಡೆಯುವ ಸ್ಥಳವನ್ನು ನಿಯೋಜಿಸಲಾಗಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications