Ranji Trophy: ಕ್ವಾರ್ಟರ್ ಫೈನಲ್‌ನಲ್ಲಿ ವಿದರ್ಭ ವಿರುದ್ಧ ಸೋತು ಹೊರಬಿದ್ದ ಕರ್ನಾಟಕ
ಮಂಗಳವಾರ, ಫೆಬ್ರವರಿ 27ರಂದು ನಡೆದ 2024ರ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್‌ನಲ್ಲಿ ವಿದರ್ಭ ತಂಡದ ವಿರುದ್ಧ 128 ರನ್‌ಗಳಿಂದ ಸೋತ ಕರ್ನಾಟಕ ತಂಡ ಪಂದ್ಯಾವಳಿಯಿಂದ ಹೊರಬಿದ್ದರೆ, ವಿದರ್ಭ ತಂಡ ಪ್ರಸಕ್ತ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿತು.
ನಾಗ್ಪುರದ ವಿಸಿಎ ಸ್ಟೇಡಿಯಂನಲ್ಲಿ ಆತಿಥೇಯ ವಿದರ್ಭ ತಂಡಕ್ಕೆ ಇದು ರೋಚಕ ಗೆಲುವಾಗಿದೆ. ಹರ್ಷ ದುಬೆ ಮತ್ತು ಆದಿತ್ಯ ಸರ್ವಾಟೆ ಅವರ ತಲಾ ನಾಲ್ಕು ವಿಕೆಟ್‌ಗಳ ನೆರವಿನಿಂದ ವಿದರ್ಭ ಅಂತಿಮ ದಿನ ಕರ್ನಾಟಕವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿತು.
ನಾಲ್ಕನೇ ದಿನದಂತ್ಯಕ್ಕೆ ಪ್ರವಾಸಿ ಕರ್ನಾಟಕ ತಂಡವು 1 ವಿಕೆಟ್ ನಷ್ಟಕ್ಕೆ 103 ರನ್ ಗಳಿಸಿದ್ದರಿಂದ ಕರ್ನಾಟಕ ಉತ್ತಮವಾಗಿ ಬೆನ್ನಟ್ಟಲು ಮುನ್ಸೂಚನೆ ನೀಡಿತ್ತು. ಆದರೆ ಐದನೇ ದಿನದ ಬೆಳಿಗ್ಗೆ ನಾಟಕೀಯ ಬ್ಯಾಟಿಂಗ್ ಕುಸಿತದಿಂದಾಗಿ ಸೋಲಿನ ದವಡೆಯತ್ತ ನಡೆಯಿತು.

ಕೊನೆಯ ದಿನ ಕರ್ನಾಟಕ ತಂಡ ಗೆಲ್ಲಲು 268 ರನ್‌ಗಳು ಮತ್ತು ಕೈಯಲ್ಲಿ ಇನ್ನೂ ಒಂಬತ್ತು ವಿಕೆಟ್‌ಗಳಿದ್ದವು. ಕರ್ನಾಟಕ ಗೆಲುವಿನ ಗೆರೆಯನ್ನು ದಾಟುವ ನಿರೀಕ್ಷೆಯಿತ್ತು. ಆದರೆ ಹರ್ಷ ದುಬೆ ಮತ್ತು ಆದಿತ್ಯ ಸರ್ವಾಟೆ ತಮ್ಮ ಮಾರಕ ಬೌಲಿಂಗ್ ಮೂಲಕ ವಿದರ್ಭಕ್ಕೆ ಬೃಹತ್ ಗೆಲುವು ಖಚಿತಪಡಿಸಿದರು.
ಪಂದ್ಯದ ಮೊದಲ ಗಂಟೆಯೊಳಗೆ ಕರ್ನಾಟಕ ತನ್ನ ಬ್ಯಾಟಿಂಗ್ ವಿಭಾಗದಲ್ಲಿ ಹಿನ್ನಡೆ ಅನುಭವಿಸಿತು. ನಾಯಕ ಮಯಾಂಕ್ ಅಗರ್ವಾಲ್ 70 ರನ್, ನಿಕಿನ್ ಜೋಸ್ 0 ಮತ್ತು ಮನೀಶ್ ಪಾಂಡೆ 1 ರನ್ ಗಳಿಸಿ ಔಟಾದರು. ವಿದರ್ಭ ತಂಡದ ಪರ ಆದಿತ್ಯ ಸರ್ವಾಟೆ 22 ಓವರ್‌ಗಳಲ್ಲಿ 78 ರನ್ ನೀಡಿ 4 ವಿಕೆಟ್ ಪಡೆದರು.
ಅನೀಶ್ ಕೆವಿ ಒಂದು ತುದಿಯಿಂದ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಲು ಪ್ರಯತ್ನಿಸಿದರು. ಆದರೆ 3ನೇ ಕ್ರಮಾಂಕದ ಬ್ಯಾಟರ್ 40 ರನ್‌ಗಳಿಗೆ ರನೌಟ್ ಆದರು. ಕರ್ನಾಟಕ ತಂಡ ಪಂದ್ಯವನ್ನು ಗೆಲ್ಲುವ ಸಾಧ್ಯತೆಗೆ ದೊಡ್ಡ ಹೊಡೆತವನ್ನು ನೀಡಿದರು.

ಆರನೇ ವಿಕೆಟ್‌ಗೆ ಅನೀಶ್ ಕೆವಿ 40 ರನ್ ಗಳಿಸಿದರೆ, ಹಾರ್ದಿಕ್ ರಾಜ್ 13 ರನ್ ಗಳಿಸಿ ಚೇತರಿಕೆಗೆ ಕಾರಣರಾದರು. ಆದರೆ, ಹರ್ಷ ದುಬೆ 13.4 ಓವರ್‌ಗಳಲ್ಲಿ 65 ರನ್ ನೀಡಿ 4 ವಿಕೆಟ್ ಪಡೆದು ಕರ್ನಾಟಕದ ಕೆಳ ಕ್ರಮಾಂಕವನ್ನು ಹೊರಹಾಕಿದರು.
ಕೊನೆಯಲ್ಲಿ ಆಲ್‌ರೌಂಡರ್ ವಿಜಯ್ ಕುಮಾರ್ ವೈಶಾಕ್ 34 ರನ್ ಮತ್ತು ವಿದ್ವತ್ ಕಾವೇರಪ್ಪ 25 ರನ್ ಗಳಿಸಿ, ಒಂಬತ್ತನೇ ವಿಕೆಟ್‌ಗೆ 33 ರನ್‌ಗಳ ಜೊತೆಯಾಟದೊಂದಿಗೆ ಸೋಲಿನ ಅಂತರವನ್ನು ತಗ್ಗಿಸಿದರು.
ಕೊನೆಯ ಇನ್ನಿಂಗ್ಸ್‌ನಲ್ಲಿ 371 ರನ್‌ಗಳ ಬೆನ್ನತ್ತಿದ ಕರ್ನಾಟಕ ತಂಡ ಕೇವಲ 243 ರನ್‌ಗಳಿಗೆ ಆಲೌಟ್ ಆಯಿತು ಮತ್ತು ಈ ಮೂಲಕ ಸೆಮಿಫೈನಲ್‌ಗೆ ರೇಸ್‌ನಿಂದ ಹೊರಬಿತ್ತು.
ವಿದರ್ಭ ಸೆಮಿಫೈನಲ್ ಸುತ್ತಿನಲ್ಲಿ ಮಧ್ಯಪ್ರದೇಶ ಮತ್ತು ತಮಿಳುನಾಡು ತಂಡವನ್ನು ಸೇರಿಕೊಂಡಿತು. ಪಂದ್ಯದಲ್ಲಿ ಏಳು ವಿಕೆಟ್‌ಗಳ ಸಾಧನೆಗಾಗಿ ಆದಿತ್ಯ ಸರ್ವಾಟೆ ಪಂದ್ಯಶ್ರೇಷ್ಠ ಆಟಗಾರ ಎಂದು ಹೆಸರಿಸಲ್ಪಟ್ಟರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications