ರಣಜಿಯಲ್ಲಿ ವಿಶ್ವದಾಖಲೆ: 9 ಬ್ಯಾಟರ್‌ಗಳಿಂದ ಐತಿಹಾಸಿಕ ಸಾಧನೆ: 129 ವರ್ಷಗಳ ವಿಶ್ವದಾಖಲೆ ಮುರಿದ ಬಂಗಾಳ

ರಣಜಿ ಕ್ವಾರ್ಟರ್‌ಫೈನಲ್ ಹಂತದ ಪಂದ್ಯದಲ್ಲಿ ಬಂಗಾಳ ಕ್ರಿಕೆಟ್ ಪಡೆ ಗುರುವಾರ ವಿಶ್ವ ದಾಖಲೆ ಬರೆದಿದೆ. ಜಾರ್ಖಂಡ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಬಂಗಾಳ ತಂಡದ ಕಣಕ್ಕಿಳಿದ ಎಲ್ಲಾ 9 ಆಟಗಾರರು ಕೂಡ ಕನಿಷ್ಠ ಅರ್ಧ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ 8 ವಿಕೆಟ್ ಕಳೆದುಕೊಂಡು 773 ರನ್‌ಗಳನ್ನು ಗಳಿಸಿದೆ.
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಬಂಗಾಳ ಕ್ರಿಕೆಟ್ ತಂಡ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಕ್ವಾರ್ಟರ್ ಫೈನಲ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಜಾರ್ಖಂಡ್ ತಂಡದ ಮೊದಲ 9 ಬ್ಯಾಟರ್‌ಗಳು ಕೂಡ ಕಣಕ್ಕಿಳಿದು 50ಕ್ಕೂ ಅಧಿಕ ರನ್‌ಗಳನ್ನು ಗಳಿಸಿದ್ದಾರೆ. ಇದು 1893ರಲ್ಲಿ ಆಸ್ಟ್ರೇಲಿಯಾ ತಂಡ ಪ್ರವಾಸ ಕೈಗೊಂಡು ಆಕ್ಸ್‌ಫರ್ಡ್ ಹಾಘೂ ಕೇಂಬ್ರಿಡ್ಜ್ ವಿಶ್ವವಿದ್ಯಾಲಯಗಳ ಸಂಯುಕ್ತ ತಂಡದ ವಿರುದ್ಧ ಆಡಿದಾಗಿನ ದಾಖಲೆಯನ್ನು ಮುರಿದಂತಾಗಿದೆ. ಅಂದು ಆಸ್ಟ್ರೇಲಯಾ ತಂಡದ 8 ಬ್ಯಾಟರ್‌ಗಳು 50 ಹಾಗೂ ಅದಕ್ಕೂ ಹೆಚ್ಚಿನ ರನ್‌ಗಳಿಸಿದ್ದರು.

ದಾಖಲೆಗೆ ಮುನ್ನುಡಿಯಿಟ್ಟ ನಾಯಕ
ಬಂಗಾಳ ತಂಡದ ಪರವಾಗಿ ನಾಯಕ ಅಭಿಮನ್ಯು ಈಶ್ವರನ್ 65 ರನ್‌ಗಳನ್ನು ಗಳಿಸುವ ಮೂಲಕ ಈ ಸಾಧನೆ ಆರಂಭವಾಯಿತು. ಅವರ ಆರಂಭಿಕ ಜೋಡಿಯಾದ ಅಭಿಶೇಕ್ ರಾಮನ್ 61 ರನ್‌ಗಳನ್ನು ಸಿಡಿಸಿದರು. ಅದಾದ ಬಳಿಕ ಸುದಿಪ್ ಘರಮಿ ಅವರು ಭರ್ಜರಿ 186 ರನ್‌ಗಳನ್ನು ಸಿಡಿಸಿದರೆ ಅನುಶ್ತಪ್ ಮುಜುಂದಾರ್ 117 ರನ್‌ಗಳನ್ನು ಗಳಿಸಿದರು. ಎರಡನೇ ವಿಕೆಟ್‌ಗೆ ಈ ಇಬ್ಬರು ಆಟಗಾರರು 243 ರನ್‌ಗಳನ್ನು ಕಲೆಹಾಕಿದರು.

ಆರ್‌ಸಿಬಿ ಆಟಗಾರರೂ ಸಾಥ್
ಇನ್ನು ಪಶ್ಚಿಮ ಬಂಗಾಳದ ಯುವ ಕ್ರೀಡಾ ಸಚಿವ ಮನೋಜ್ ತಿವಾರಿ ಕೂಡ ಈ ದಾಖಲೆಯಲ್ಲಿ ತಮ್ಮ ಹೆಸರನ್ನು ಸೇರ್ಪಡೆಗೊಳಿಸಿದ್ದಾರೆ. ಅವರ ಬ್ಯಾಟ್‌ನಿಂದ 73 ರನ್‌ಗಳು ಸಿಡಿದಿದೆ. ಅಭಿಶೇಕ್ ಪೋರೆಲ್ 68 ರನ್‌ಗಳ ಕೊಡುಗೆ ನೀಡಿದರು. ಇನ್ನು ಆರ್‌ಸಿಬಿ ತಂಡದ ಆಲ್‌ರೌಂಡರ್ ಶಹ್ಬಾಜ್ ಅಹ್ಮದ್ 78 ರನ್‌ಗಳನ್ನು ಗಳಿಸಿದರೆ ಸಾಯನ್ ಸೇಖರ್ ಮೊಂಡಾಲ್ 53 ರನ್‌ಗಳಿಸಿದರು. ಇನ್ನು ಅಂತಿಮ ಹಂತದಲ್ಲಿ ಆಕಾಶ್ ದೀಪ್ 18 ಎಸೆತಗಳಲ್ಲಿ 8 ಸಿಕ್ಸರ್‌ಗಳ ಸಹಿತ 53 ರನ್‌ಗಳ ಕೊಡುಗೆ ನೀಡುವ ಮೂಲಕ ವಿಶ್ವ ದಾಖಲೆ ಬರೆದರು. ಈ ಮೂಲಕ 129 ವರ್ಷಗಳ ಹಿಂದಿನ ದಾಖಲೆಯನ್ನು ಬಂಗಾಳ ಕ್ರಿಕೆಟ್ ತಂಡ ಮುರಿದಿದೆ.

ಪಂದ್ಯದಲ್ಲಿ ಸಂಪೂರ್ಣ ಹಿಡಿತ
ಇನ್ನು ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿರುವ ಬಂಗಾಳ ತಂಡ 773 ರನ್‌ಗಳನ್ನು ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಬಹುತೇಕ ಮೂರೂವರೆ ದಿನಗಳ ಕಾಲ ಬಂಗಾಳ ತಂಡ ಬ್ಯಾಟಿಂಗ್ ನಡೆಸಿದ್ದು ಬೌಲಿಂಗ್‌ನಲ್ಲಿಯೂ ಮಿಂಚಿದೆ. ಮೂರನೇ ದಿನದಾಂತ್ಯದ ವೇಳೆ ಎದುರಾಳಿ ಜಾರ್ಖಂಡ್ ತಂಡದ ಐವರು ಆಟಗಾರರನ್ನು ಫೆವಿಲಿಯನ್‌ಗೆ ಅಟ್ಟುವ ಮೂಲಕ ತಂಡದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ.

ಆಡುವ ಬಳಗ ಹೀಗಿದೆ
ಬಂಗಾಳ: ಅಭಿಮನ್ಯು ಈಶ್ವರನ್ (ನಾಯಕ), ಅಭಿಷೇಕ್ ರಾಮನ್, ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್), ಆಕಾಶ್ ದೀಪ್, ಅನುಸ್ತುಪ್ ಮಜುಂದಾರ್, ಇಶಾನ್ ಪೊರೆಲ್, ಮನೋಜ್ ತಿವಾರಿ, ಮುಖೇಶ್ ಕುಮಾರ್, ಶಹಬಾಜ್ ಅಹ್ಮದ್, ಸುದೀಪ್ ಕುಮಾರ್ ಘರಾಮಿ, ಸಯನ್ ಮೊಂಡಲ್
ಬೆಂಚ್: ರಿತ್ವಿಕ್ ಚೌಧರಿ, ಮೊಹಮ್ಮದ್ ಶಮಿ, ಸುದೀಪ್ ಚಟರ್ಜಿ, ಕೌಶಿಕ್ ಘೋಷ್, ಪ್ರದೀಪ್ತ ಪ್ರಮಾಣಿಕ್, ನೀಲಕಂಠ ದಾಸ್, ಮೊಹಮ್ಮದ್ ಕೈಫ್, ಕರಣ್ ಲಾಲ್, ರಿಟಿಕ್ ಚಟರ್ಜಿ
ಜಾರ್ಖಂಡ್: ಅನುಕೂಲ್ ರಾಯ್, ಆಶಿಶ್ ಕುಮಾರ್, ಕುಮಾರ್ ದಿಯೋಬ್ರಾತ್, ಕುಮಾರ್ ಕುಶಾಗ್ರಾ (ವಿಕೆಟ್ ಕೀಪರ್), ನಾಜಿಮ್ ಸಿದ್ದಿಕಿ, ರಾಹುಲ್ ಶುಕ್ಲಾ, ಸೌರಭ್ ತಿವಾರಿ (ನಾಯಕ), ಶಹಬಾಜ್ ನದೀಮ್, ಸುಶಾಂತ್ ಮಿಶ್ರಾ, ಉತ್ಕರ್ಷ್ ಸಿಂಗ್, ವಿರಾಟ್ ಸಿಂಗ್
ಬೆಂಚ್: ಕುಮಾರ್ ಸೂರಜ್, ಮನೀಷಿ, ಪಂಕಜ್ ಕಿಶೋರ್ ಕುಮಾರ್, ಸಾಹಿಲ್ ರಾಜ್, ವಿಕಾಶ್ ವಿಶಾಲ್, ಬಾಲ ಕೃಷ್ಣ, ಎಂಡಿ ನಾಜಿಮ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications