ವಿಶ್ವದಾಖಲೆ: ಚೊಚ್ಚಲ ಪಂದ್ಯದಲ್ಲೇ ತ್ರಿಶತಕ ಸಿಡಿಸಿದ ಬಿಹಾರದ ಪ್ಲೇಯರ್ ಸಕಿಬುಲ್ ಗನಿ

ಬಿಹಾರದ 22 ವರ್ಷದ ಬ್ಯಾಟರ್ ಸಕಿಬುಲ್ ಗನಿ ಪ್ರಥಮ ದರ್ಜೆಯ ಚೊಚ್ಚಲ ಪಂದ್ಯದಲ್ಲೇ ವಿಶ್ವದಾಖಲೆ ನಿರ್ಮಿಸಿದ್ದಾನೆ. ಚೊಚ್ಚಲ ಪಂದ್ಯದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್‌ನ ದಾಖಲೆಯನ್ನು ಮುರಿಯುವ ಮೂಲಕ ಇತಿಹಾಸ ಪುಸ್ತಕಗಳಲ್ಲಿ ತನ್ನ ಹೆಸರನ್ನು ಬರೆದಿದ್ದಾರೆ.
ಕೋಲ್ಕತ್ತಾದ ಜಾದವ್‌ಪುರ ವಿಶ್ವವಿದ್ಯಾನಿಲಯ ಕ್ಯಾಂಪಸ್ 2ನೇ ಮೈದಾನದಲ್ಲಿ ಮಿಜೋರಾಂ ವಿರುದ್ಧದ ರಣಜಿ ಟ್ರೋಫಿ ಗ್ರೂಪ್ ಪಂದ್ಯದಲ್ಲಿ ಪ್ರಥಮ ದರ್ಜೆಯ ಚೊಚ್ಚಲ ಪಂದ್ಯದಲ್ಲೇ
ಈ ಸಾಧನೆ ಮಾಡಿದ್ದಾರೆ. ಪಂದ್ಯದ ಮೂಲೆ ಮೂಲೆಗೆ ಚೆಂಡಿನ ದರ್ಶನ ಮಾಡಿದ ಈತ ಮೊದಲ ಪಂದ್ಯದಲ್ಲಿ ತ್ರಿಶತ ಸಿಡಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
405 ಎಸೆತಗಳಲ್ಲಿ 56 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 341 ರನ್ ಗಳಿಸಿದರು. ಅಲ್ಲದೆ 84.20ರ ಸ್ಟ್ರೈಕ್ ರೇಟ್ ಕಾಯ್ದುಕೊಂಡಿದ್ದರು.
ಅಷ್ಟೇ ಅಲ್ಲ, ಸಕಿಬುಲ್ ಅವರು ಮತ್ತೊಂದು ದಾಖಲೆಯನ್ನು ಅಳಿಸಿ ಹಾಕಿದ್ದಾರೆ. 2018-19ರ ರಣಜಿ ಟೂರ್ನಿಯಲ್ಲಿ ಮಧ್ಯ ಪ್ರದೇಶದ ಅಜಯ್ ರೊಹೆರಾ ತನ್ನ ಚೊಚ್ಚಲ ಪಂದ್ಯದಲ್ಲಿ ಹೈದ್ರಬಾದ್ ವಿರುದ್ಧ 267 ರನ್ ಸಿಡಿಸಿದ್ದರು. ಇದು ರಣಜಿ ಟೂರ್ನಿಯ ಚೊಚ್ಚಲ ಪಂದ್ಯದಲ್ಲಿ ದಾಖಲಿಸಿದ್ದ ಗರಿಷ್ಠ ಸ್ಕೊರ್ ಆಗಿತ್ತು. ಈ ದಾಖಲೆಯನ್ನು ಸಕಿಬುಲ್ ಈಗ ತನ್ನ ಹೆಸರಿಗೆ ಬರೆಸಿಕೊಂಡಿದ್ದಾರೆ.
ಮತ್ತೊಂದೆಡೆ, ಸಕಿಬುಲ್ ಅವರು ನಾಲ್ಕನೇ ವಿಕೆಟ್ ಗೆ ಬಬುಲ್ ಕುಮಾರ್ ಜೊತೆ ಸೇರಿ 538 ರನ್ ಕಲೆ ಹಾಕಿದ್ದರು. ಬಬುಲ್ ಕುಮಾರ್ ಕೂಡ ದ್ವಿಶತಕ ದಾಖಲಿಸಿದ್ದರು. ಹಾಗೇ ನೋಡಿದ್ರೆ ಮಿಜೋರಾಂ ವಿರುದ್ದ ಬಿಹಾರ ತಂಡ ಒಂದು ಹಂತದಲ್ಲಿ 71 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ನಂತರ ಸಕಿಬುಲ್ ಮತ್ತು ಬಬುಲ್ ಕುಮಾರ್ ಅಮೋಘ ಆಟವನ್ನಾಡಿ ತಂಡದ ಬೃಹತ್ ಮೊತ್ತಕ್ಕೂ ಕಾರಣರಾದ್ರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications