For Quick Alerts
ALLOW NOTIFICATIONS  
For Daily Alerts
 

ರಣಜಿ ಟ್ರೋಫಿ: ಹಾಲಿ ಚಾಂಪಿಯನ್ ಕರ್ನಾಟಕ ಔಟ್

By Mahesh

ಬೆಂಗಳೂರು, ಡಿ. 04: ಹಾಲಿ ಚಾಂಪಿಯನ್ ಕರ್ನಾಟಕ ತಂಡ ರಣಜಿ ಟ್ರೋಫಿಯಿಂದ ಹೊರಬಿದ್ದಿದೆ. ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲಿ 53ರನ್ ಗಳಿಂದ ವಿನಯ್ ಪಡೆ ಸೋಲು ಕಂಡಿದೆ. ಈ ಮೂಲಕ ಸತತವಾಗಿ 34 ಪಂದ್ಯಗಳ ಗೆಲುವಿನ ಅಭಿಯಾನಕ್ಕೆ ಬ್ರೇಕ್ ಬಿದ್ದಿದೆ.

ಪುಣೆಯಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಮಹಾರಾಷ್ಟ್ರ ತಂಡ ನೀಡಿದ್ದ ಗೆಲುವಿನ ಗುರಿ 293ರನ್ ತಲುಪಲಾಗದೆ ಕರ್ನಾಟಕ ತಂಡ 239ಸ್ಕೋರಿಗೆ ಸರ್ವ ಪತನಗೊಂಡಿತು. ಈ ಮೂಲಕ ನಾಕೌಟ್ ಹಂತ ಕೂಡಾ ತಲುಪದೆ ಪ್ರಸಕ್ತ ವರ್ಷದ ರಣಜಿ ಋತು ಮುಗಿಸಿದೆ. ವಿನಯ್ ಕುಮಾರ್ ಪಡೆ ಕಳೆದ ಎರಡು ವರ್ಷ ಸತತವಾಗಿ ರಣಜಿ ಟ್ರೋಫಿ ಎತ್ತಿ ಹಿಡಿದಿತ್ತು. [ರಾಹುಲ್ ದ್ರಾವಿಡ್ ದಾಖಲೆ ಸಮಕ್ಕೆ ನಿಂತ ರಾಬಿನ್ ಉತ್ತಪ್ಪ]

Ranji Trophy : Defending Champions Karnataka knocked out by Maharashtra

ಸಂಕ್ಷಿಪ್ತ ಸ್ಕೋರ್
ಮಹಾರಾಷ್ಟ್ರ : ಮೊದಲ ಇನ್ನಿಂಗ್ಸ್ 212 (ಭವಾನೆ 87)
ಎರಡನೇ ಇನ್ನಿಂಗ್ಸ್ 260 (ಮುಂಡೆ 81, ಆರ್ ತ್ರಿಪಾಠಿ 78, ವಿನಯ್ ಕುಮಾರ್ 4/71)

ಕರ್ನಾಟಕ
ಮೊದಲ ಇನ್ನಿಂಗ್ಸ್ 180 (ಸಕ್ಲೇಚ 4/58)
ಎರಡನೇ ಇನ್ನಿಂಗ್ಸ್ 239 (ಸಿಎಂ ಗೌತಮ್ 65, ಧುಮಾಳ್ 5/78, ಸಕ್ಲೇಚ 4/65)

ದೆಹಲಿ ವಿರುದ್ಧ ಪಂದ್ಯದಲ್ಲಿ ಇನ್ನಿಂಗ್ಸ್ ಮುನ್ನಡೆಯಿಂದ 3 ಅಂಕಗಳನ್ನು ಪಡೆದಿದ್ದು, ಒಟ್ಟು ತನ್ನ ಅಂಕಗಳನ್ನು 24 ಕ್ಕೆ ಹೆಚ್ಚಿಸಿಕೊಂಡಿತ್ತು. ಆದರೆ, ಪ್ರಸಕ್ತ ಸಾಲಿನ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಮಹಾರಾಷ್ಟ್ರ ತಂಡದ ವಿರುದ್ಧ ಸೋಲುವ ಮೂಲಕ ತೀವ್ರ ಮುಖಭಂಗ ಅನುಭವಿಸಿ ಟೂರ್ನಿಯಿಂದ ಹೊರ ನಡೆಯಬೇಕಾಗಿದೆ.

Story first published: Wednesday, January 3, 2018, 10:03 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+