ರಣಜಿ ಟ್ರೋಫಿ ಫೈನಲ್: ಮೊದಲ ದಿನ ವಿದರ್ಭ 7 ವಿಕೆಟ್ ನಷ್ಟಕ್ಕೆ 200 ರನ್

ನಾಗ್ಪುರ, ಫೆಬ್ರವರಿ 3: ನಾಗ್ಪುರದಲ್ಲಿರುವ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿದರ್ಭ vs ಸೌರಾಷ್ಟ್ರ ನಡುವಣ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾನುವಾರ (ಫೆಬ್ರವರಿ 3) ಮೊದಲ ಇನ್ನಿಂಗ್ಸ್‌ನಲ್ಲಿ ಮೊದಲ ದಿನದಾಂತ್ಯಕ್ಕೆ ಆತಿಥೇಯ ವಿದರ್ಭ ತಂಡ 90 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಭರ್ತಿ 200 ರನ್ ಗಳಿಸಿದೆ.
ಟಾಸ್ ಗೆದ್ದು ಇನ್ನಿಂಗ್ಸ್ ಆರಂಭಿಸಿದ ವಿದರ್ಭಕ್ಕೆ ಆರಂಭಿಕ ಆಟಗಾರರ ನೆರವು ಸಿಗಲಿಲ್ಲ. ಆದರೆ ಮೋಹಿತ್ ಕಾಲೆ 35, ಗಣೇಶ್ ಸತೀಶ್ 32, ಅಕ್ಷಯ್ ವಾಡ್ಕರ್ 45 ಪೇರಿಸಿ ತಂಡವನ್ನು ಬೆಂಬಲಿಸಿದರು. ಹೀಗಾಗಿ ವಿದರ್ಭ 200 ರನ್ ಗಡಿ ದಾಟುವಲ್ಲಿ ಯಶಸ್ವಿಯಾಯಿತು.
ಸೌರಾಷ್ಟ್ರ ಪರ ನಾಯಕ ಜಯದೇವ್ ಉನಾದ್ಕತ್ 2, ಚೇತನ್ ಸಕರಿಯಾ, ಪ್ರೇರಕ್ ಮಂಕದ್, ಧರ್ಮೇಂದ್ರ ಸಿಂಹ್ ಜಡೇಜಾ ಮತ್ತು ಕಮಲೇಶ್ ಮಕ್ವಾನ ತಲಾ 1 ವಿಕೆಟ್ ಉರುಳಿಸಿ ವಿದರ್ಭ ರನ್ ಕದಿಯುವಿಕೆಗೆ ಬ್ರೇಕ್ ಹಾಕಿದರು. ದಿನಾದಾಟದ ಅಂತ್ಯಕ್ಕೆ ವಿದರ್ಭ ಪರ ಅಕ್ಷಯ್ ಕಾರ್ಣೆವಾರ್ (31) ಮತ್ತು ಅಕ್ಷಯ್ ವಾಖರೆ ಕ್ರೀಸ್‌ನಲ್ಲಿದ್ದರು.
Story first published: Sunday, February 3, 2019, 17:37 [IST]
Other articles published on Feb 3, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications