ಕರುಣ್, ಸಮರ್ಥ್ ಶತಕದ ನಡುವೆಯೂ ವಿದರ್ಭ ವಿರುದ್ಧ ಡ್ರಾ
ಬೆಂಗಳೂರು, ಅ.19: ವಿದರ್ಭ ವಿರುದ್ಧ ಕರ್ನಾಟಕ ತಂಡ ಡ್ರಾಗೆ ತೃಪ್ತಿಪಟ್ಟಿದೆ. ಅದರೆ, ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದ ಮೇರೆಗೆ ಕರ್ನಾಟಕಕ್ಕೆ 3, ವಿದರ್ಭಕ್ಕೆ 1 ಅಂಕ ಲಭಿಸಿದೆ. ಕರ್ನಾಟಕ ಪರ ಎರಡನೇ ಇನ್ನಿಂಗ್ಸ್ ನಲ್ಲಿ ರವಿಕುಮಾರ್ ಸಮರ್ಥ್ ಹಾಗೂ ಕರುಣ್ ನಾಯರ್ ಆಕರ್ಷಕ ಶತಕ ಗಳಿಸಿದರು.
ಮಧ್ಯಮ ವೇಗಿ ಎಸ್. ಅರವಿಂದ್(46ಕ್ಕೆ 4) ಹಾಗೂ ಯುವ ಸ್ಪಿನ್ನರ್ ಜೆ. ಸುಚಿತ್ (51ಕ್ಕೆ 4) ಕರಾರುವಾಕ್ ಬೌಲಿಂಗ್ ನೆರವಿನಿಂದ ಹಾಲಿ ಚಾಂಪಿಯನ್ ಕರ್ನಾಟಕ ತಂಡ ಪ್ರವಾಸಿ ವಿದರ್ಭ ತಂಡದ ವಿರುದ್ಧ ಇನಿಂಗ್ಸ್ ಮುನ್ನಡೆ ಸಂಪಾದಿಸಿತು. 40ರನ್ ಮುನ್ನಡೆ ಪಡೆದುಕೊಂಡಿದ್ದ ಕರ್ನಾಟಕ, ಎರಡನೇ ಇನ್ನಿಂಗ್ಸ್ ನಲ್ಲಿ 331/3 ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಅಂತಿಮ ದಿನ ವಿದರ್ಭ ತಂಡ 17ರನ್ ಮಾತ್ರ ಗಳಿಸಿತು.

ಎರಡನೇ ಇನ್ನಿಂಗ್ಸ್ ನಲ್ಲಿ ಸಮರ್ಥ್ 121 ಹಾಗೂ ನಾಯರ್ 101 ಅಜೇಯ ರನ್ ಗಳು ಹಾಗೂ ನಾಲ್ಕನೇ ವಿಕೆಟ್ ಗೆ 176ರನ್ ಜೊತೆಯಾಟ ನೆರವಿನಿಂದ ಕರ್ನಾಟಕ ಉತ್ತಮ ಗುರಿಯನ್ನು ತಲುಪಿದರೂ ವಿದರ್ಭ ರನ್ ಚೇಸ್ ಮಾಡಲು ಕಾಲಾವಕಾಶ ಇರಲಿಲ್ಲ.
ಕರ್ನಾಟಕ ಈಗ ಮೂರು ಪಂದ್ಯಗಳ ನಂತರ ಏಳು ಅಂಕ ಗಳಿಸಿದ್ದರೆ, ವಿದರ್ಭ ನಾಲ್ಕು ಅಂಕ ಗಳಿಸಿದೆ. ಕರ್ನಾಟಕ ತನ್ನ ಮುಂದಿನ ಪಂದ್ಯವನ್ನು ಅಕ್ಟೋಬರ್ 22 ರಂದು ಮೈಸೂರಿನಲ್ಲಿ ಹರ್ಯಾಣ ವಿರುದ್ಧ ಆಡಲಿದೆ. ವಿದರ್ಭ ತಂಡ ಅಸ್ಸಾಂ ತಂಡವನ್ನು ಎದುರಿಸಲಿದೆ.
ಸಂಕ್ಷಿಪ್ತ ಸ್ಕೋರ್ :
ಕರ್ನಾಟಕ : 330, 331/3 ಡಿಕ್ಲೇರ್ (ಆರ್ ಸಮರ್ಥ್ 121, ಕರುಣ್ ನಾಯರ್ 101 ನಾಟೌಟ್, ಸ್ವಪ್ನಿಲ್ ಬಂಡಿವಾರ್ 2/50). ವಿದರ್ಭ 310 ಹಾಗೂ 17, 11 ಓವರ್ಸ್ (ಪಿಟಿಐ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications