ಮೈಸೂರು, ಅಕ್ಟೋಬರ್ 17 : ಇಲ್ಲಿನ ಮಾನಸ ಗಂಗೋತ್ರಿ ಕ್ರೀಡಾಂಗಣದಲ್ಲಿ ಅಸ್ಸಾಂ ವಿರುದ್ಧ ಕರ್ನಾಟಕ ತಂಡ ಇನ್ನಿಂಗ್ಸ್ ಜಯಗಳಿಸುವ ಮೂಲಕ 84ನೇ ಆವೃತ್ತಿಯ ರಣಜಿ ಕ್ರಿಕೆಟ್ ಟೂರ್ನಿಯಲ್ಲಿ ಗೆಲುವಿನ ಶುಭಾರಂಭ ಮಾಡಿದೆ.
84ನೇ ಆವೃತ್ತಿಯ ರಣಜಿ ಕ್ರಿಕೆಟ್ ಋತು ಆರಂಭ
ಆಲ್‌ರೌಂಡ್ ಆಟ ಪ್ರದರ್ಶಿಸಿದ ವಿನಯ್ ಕುಮಾರ್ ನೇತೃತ್ವದ ಕರ್ನಾಟಕ ತಂಡ ಮಂಗಳವಾರ ಅಸ್ಸಾಂ ವಿರುದ್ಧ ಇನ್ನಿಂಗ್ಸ್ ನೊಂದಿಗೆ 121 ರನ್ ಗಳ ಗೆಲುವಿನ ಸಂಭ್ರಮ ಆಚರಿಸಿತು.

ಮೊದಲ ಬ್ಯಾಟ್ ಮಾಡಿದ ಅಸ್ಸಾಂ ಕರ್ನಾಟಕ ಬೌಲಿಂಗ್ ದಾಳಿಗೆ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 145 ರನ್ ಗಳಿಗೆ ಸರ್ವಪತನಗೊಂಡಿತ್ತು.
ಇದಾದ ಬಳಿಕ ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ಸಮರ್ಥ್ 123, ಗೌತಮ್ ಕೆ 149 ರನ್ ಗಳ ಅಮೋಘ ಬ್ಯಾಟಿಂಗ್ ನೆರವಿನಿಂದ ಮೊದಲ ಇನ್ನಿಂಗ್ಸ್ ನಲ್ಲಿ ಭರ್ಜರಿ 7 ವಿಕೆಟ್ ಕಳೆದುಕೊಂಡು 469 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿತು.
ಬಳಿಕ 2ನೇ ಇನ್ನಿಂಗ್ಸ್ ಆರಂಭಿಸಿದ ಅಸ್ಸಾಂ ತಂಡವನ್ನು ಕರ್ನಾಟಕದ ಬೌಲರ್ ಗಳು ಕೇವಲ 203 ರನ್ ಗಳಿಗೆ ಕಟ್ಟಿ ಹಾಕಿ ಇನ್ನಿಂಗ್ಸ್ ನೊಂದಿಗೆ 121 ರನ್ ಗಳ ಭರ್ಜರಿ ಜಯಗಳಿಸಿತು.
ಸ್ಕೋರ್ ವಿವರ -Assam:145 all out in 59.1 overs and 203 all out in 73.1 overs (Sibsankar Roy 44, Gokul Sharma 66; R Vinay Kumar 4-31, A Mithun 3-47, K Gowtham 3-39) lt to Karnataka: 469/7 declared in 126.4 overs by an innings and 121 runs.