ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

84ನೇ ಆವೃತ್ತಿಯ ರಣಜಿ ಕ್ರಿಕೆಟ್ ಋತು ಆರಂಭ

By Mahesh

ಬೆಂಗಳೂರು, ಅಕ್ಟೋಬರ್ 06: ರಣಜಿ ಕ್ರಿಕೆಟ್‌ ನ 84ನೇ ಆವೃತ್ತಿಯ ಪಂದ್ಯಗಳಿಗೆ ಶುಕ್ರವಾರದಿಂದ ಚಾಲನೆ ಸಿಕ್ಕಿದೆ. ಮುಂದಿನ ಮೂರು ತಿಂಗಳುಗಳ ಕಾಲ ನಡೆಯಲಿರುವ ದೇಶಿ ಕ್ರಿಕೆಟ್ ಹಬ್ಬದಲ್ಲಿ ಸುಮಾರು 28 ತಂಡಗಳು 91 ಪಂದ್ಯಗಳನ್ನಾಡಲಿವೆ.

ಈ ಬಾರಿ 28 ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಎಲ್ಲ ತಂಡಗಳೂ ಸಮಾನ ಸಂಖ್ಯೆಯ ಪಂದ್ಯಗಳನ್ನು ಆಡಲಿವೆ. ಪ್ರತಿ ಗುಂಪಿನಲ್ಲಿ ಅಗ್ರ ಸ್ಥಾನ ಹೊಂದುವ ಎರಡು ತಂಡಗಳು ಕ್ವಾರ್ಟರ್ ಫೈನಲಿಗೆ ಅರ್ಹತೆ ಪಡೆಯಲಿವೆ.

Ranji Trophy: First round matches begin October 06

ಕಳೆದ ಬಾರಿ ಚೊಚ್ಚಲ ಪ್ರಶಸ್ತಿಗೆ ಮುತ್ತಿಟ್ಟಿದ್ದ ಹಾಲಿ ಚಾಂಪಿಯನ್ ಗುಜರಾತ್ ತಂಡ ಬಿ ಗುಂಪಿನಲ್ಲಿದೆ. ಎ ಗುಂಪಿನಲ್ಲಿರುವ ಕರ್ನಾಟಕ ತಂಡವು ಮೊದಲ ಪಂದ್ಯ ಅಕ್ಟೋಬರ್ 14ರಂದು ಅಸ್ಸಾಂ ತಂಡದ ವಿರುದ್ಧ ಆಡಲಿದೆ.

ಈ ಬಾರಿ ತವರಿನಲ್ಲೂ ಪಂದ್ಯಗಳನ್ನು ಆಡುವ ಅವಕಾಶವನ್ನು ತಂಡಗಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನೀಡಿರುವುದು ಅಭಿಮಾನಿಗಳಿಗೆ ಖುಷಿ ಕೊಡುವ ಸಮಾಚಾರವಾಗಿದೆ.

ಗುಂಪುಗಳು:
ಎ ಗುಂಪು:ದೆಹಲಿ, ಕರ್ನಾಟಕ, ಅಸ್ಸಾಂ, ಹೈದರಾಬಾದ್, ಮಹಾರಾಷ್ಟ್ರ, ಉತ್ತರಪ್ರದೇಶ, ರೈಲ್ವೇಸ್.

ಬಿ ಗುಂಪು: ಗುಜರಾತ್, ಜಾರ್ಖಂಡ್, ಕೇರಳ, ಜಮ್ಮು ಮತ್ತು ಕಾಶ್ಮೀರ, ಸೌರಾಷ್ಟ್ರ, ಹರ್ಯಾಣ, ರಾಜಸ್ಥಾನ.

ಸಿ ಗುಂಪು: ಮುಂಬೈ, ತಮಿಳುನಾದು, ಮಧ್ಯಪ್ರದೇಶ, ಆಂಧ್ರಪ್ರದೇಶ, ಬರೋಡಾ, ತ್ರಿಪುರ, ಒಡಿಶಾ.

ಡಿ ಗುಂಪು: ಬೆಂಗಾಲ, ಪಂಜಾಬ್, ಹಿಮಾಚಲ ಪ್ರದೇಶ, ವಿದರ್ಭ, ಸರ್ವೀಸಸ್, ಗೋವಾ, ಚತ್ತೀಸ್ ಗಢ.

ಮೊದಲ ಸುತ್ತಿನ ಪಂದ್ಯಗಳು (ಅಕ್ಟೋಬರ್ 6-9)
ಎ ಗುಂಪು
ದೆಹಲಿ ವಿರುದ್ಧ ಅಸ್ಸಾಂ,ದೆಹಲಿ
ಯುಪಿ ವಿರುದ್ಧ ರೈಲ್ವೇಸ್, ಲಕ್ನೋ
ಹೈದರಾಬಾದ್ ವಿರುದ್ಧ ಮಹಾರಾಷ್ಟ್ರ, ಹೈದರಾಬಾದ್

ಬಿ ಗುಂಪು
ಕೇರಳ ವಿರುದ್ಧ ಜಾರ್ಖಂಡ್, ತಿರುವನಂತಪುರಂ
ರಾಜಸ್ಥಾನ ವಿರುದ್ಧ ಜಮ್ಮು ಮತ್ತು ಕಾಶ್ಮೀರ, ಜೈಪುರ
ಹರ್ಯಾಣ ವಿರುದ್ಧ ಸೌರಾಷ್ಟ್ರ, ಲಾಹ್ಲಿ

ಸಿ ಗುಂಪು
ಮಧ್ಯಪ್ರದೇಶ ವಿರುದ್ಧ ಬರೋಡಾ, ಇಂದೋರ್
ಒಡಿಶಾ ವಿರುದ್ಧ ತ್ರಿಪುರ, ಭುವನೇಶ್ವರ
ತಮಿಳುನಾಡು ವಿರುದ್ಧ ಆಂಧ್ರ, ಚೆನ್ನೈ

ಡಿ ಗುಂಪು
ಸರ್ವೀಸಸ್ ವಿರುದ್ಧ ಬೆಂಗಾಲ, ನವದೆಹಲಿ
ಗೋವಾ ವಿರುದ್ಧ ಚತ್ತೀಸ್ ಗಢ, ಗೋವಾ
ಹಿಮಾಚಲ ಪ್ರದೇಶ ವಿರುದ್ಧ ಪಂಜಾಬ್, ಧರ್ಮಶಾಲ

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X