ರಣಜಿ ಕ್ವಾ.ಫೈ: ಕರ್ನಾಟಕಕ್ಕೆ ಸುಲಭ ಎದುರಾಳಿ
ಮುಂಬೈ, ಫೆ.10: ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಹಂತ ತಲುಪಿದೆ. ಇದುವರೆವಿಗೂ ಅಜೇಯವಾಗಿರುವ ಕರ್ನಾಟಕದ ತಂಡಕ್ಕೆ ಕ್ವಾರ್ಟರ್ ಫೈನಲ್ ನಲ್ಲಿ ಸುಲಭ ಜಯ ಸಾಧಿಸಿ ಮುಂದಿನ ಹಂತಕ್ಕೆ ತಲುಪುವ ಸಾಧ್ಯತೆ ಕಂಡು ಬಂದಿದೆ.
ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಲ್ಲಿ ಐಸಿಸಿ ವಿಶ್ವಕಪ್ 2015 ಆರಂಭಗೊಂಡು ಎರಡು ದಿನಗಳ ನಂತರ ರಣಜಿ ಕ್ವಾರ್ಟರ್ ಫೈನಲ್ ಪಂದ್ಯಗಳು ಶುರುವಾಗಲಿದೆ.
ಹಾಲಿ ಚಾಂಪಿಯನ್ ಕರ್ನಾಟಕ ತಂಡ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಸ್ಸಾಂ ತಂಡವನ್ನು ಇಂದೋರ್ ನಲ್ಲಿ ಎದುರಿಸಲಿದೆ. ಮುಂಬೈ ಹಾಗೂ ದೆಹಲಿ ತಂಡಗಳು ಕಟಕ್ ನಲ್ಲಿ ಸೆಣಸಾಡಲಿದ್ದು, ರೋಚಕ ಹಣಾಹಣಿಯ ನಿರೀಕ್ಷೆಯಿದೆ.

ಫೆ.16 ರಿಂದ 20 ರ ತನಕ ನಡೆಯಲಿರುವ ರಣಜಿ ಪಂದ್ಯಗಳ ವಿವರ:
1. ಕರ್ನಾಟಕ vs ಅಸ್ಸಾಂ -ಇಂದೋರ್
2. ದೆಹಲಿ vs ಮುಂಬೈ-ಕಟಕ್
3. ವಿದರ್ಭ vs ತಮಿಳುನಾಡು-ಜೈಪುರ
4. ಆಂಧ್ರಪ್ರದೇಶ vs ಮಹಾರಾಷ್ಟ್ರ- ಲಾಹ್ಲಿ
ಎಲ್ಲಾ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಪ್ರಸಾರವಾಗಲಿದೆ.
ಸೆಮಿಫೈನಲ್ಸ್
* ಬೆಂಗಳೂರು ಹಾಗೂ ಕೋಲ್ಕತ್ತಾದಲ್ಲಿ ಫೆ.25 ರಿಂದ ಮಾರ್ಚ್ 1 ರ ತನಕ
* ಕ್ವಾರ್ಟರ್ ಫೈನಲ್ 1 ಹಾಗೂ 2 ರ ವಿಜೇತರ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದ್ದು, ನೇರ ಪ್ರಸಾರ ಸ್ಟಾರ್ ನೆಟ್ವರ್ಕ್ ನಲ್ಲಿ ಮಾತ್ರ.
* ಕ್ವಾರ್ಟರ್ ಫೈನಲ್ 1 ಹಾಗೂ 2 ರ ವಿಜೇತರ ಪಂದ್ಯ ಕೋಲ್ಕತ್ತಾದಲ್ಲಿ ನಡೆಯಲಿದೆ.
ಫೈನಲ್ಸ್
* ಮುಂಬೈನಲ್ಲಿ ಮಾರ್ಚ್ 8 ರಿಂದ 12ರ ತನಕ ನಡೆಯಲಿದೆ.
ಒನ್ ಇಂಡಿಯಾ ಸುದ್ದಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications