For Quick Alerts
ALLOW NOTIFICATIONS  
For Daily Alerts
 

63 ವರ್ಷದ ದಾಖಲೆ ಉಡೀಸ್‌: 540 ಎಸೆತಗಳಲ್ಲಿ ಮುಗಿದ ರಣಜಿ ಪಂದ್ಯ

ಸದ್ಯ ಭಾರತದಲ್ಲಿ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿ ನಡೆಯುತ್ತಿದೆ. ಈ ವೇಳೆ ಹಲವು ತಂಡಗಳು ಸ್ಥಿರ ಪ್ರದರ್ಶನ ನೀಡಿ ಅಭಿಮಾನಿಗಳನ್ನು ರಂಜಿಸಿದರು. ಆದರೆ ಇಲ್ಲೊಂದು ರಣಜಿ ಪಂದ್ಯ 540 ಎಸೆತಗಳಲ್ಲೇ ಮುಗಿದು ಇತಿಹಾಸ ನಿರ್ಮಿಸಿದೆ. ಈ ಮೂಲಕ 63 ವರ್ಷಗಳ ಹಳೆಯ ದಾಖಲೆಯನ್ನು ಅಳಿಸಿ ಹಾಕಿದೆ.

ರಣಜಿ "ಸಿ" ಗುಂಪಿನ ಪಂದ್ಯದಲ್ಲಿ ಅಸ್ಸಾಂ ಹಾಗೂ ಸರ್ವಿಸಸ್‌ ತಂಡಗಳು ಕಾದಾಟವನ್ನು ನಡೆಸಿದವು. ಈ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಸಂ ಮೊದಲ ಇನಿಂಗ್ಸ್‌ನಲ್ಲಿ 103 ರನ್‌ಗಳಿಗೆ ಆಲೌಟ್ ಆಯಿತು. ಈ ವೇಳೆ ಆಸ್ಸಾಂ ತಂಡದ ಪರ ಪ್ರದ್ಯುನ್ ಸೈಕಿಯಾ 3 ಬೌಂಡರಿ, 6 ಸಿಕ್ಸರ್ ಸಹಾಯದಿಂದ 52 ರನ್‌ ಬಾರಿಸಿ ತಂಡಕ್ಕೆ ಆಧಾರವಾದರು. ರಿಯಾನ್‌ ಪರಾಗ್ 36, ಸ್ವರೂಪಂ ಪುರಕಾಯಸ್ಥ 13 ರನ್‌ ಸಿಡಿಸಿದರು. ಸರ್ವಿಸ್‌ ತಂಡದ ಪರ ಅರ್ಜುನ್ ಶರ್ಮಾ 5 ವಿಕೆಟ್‌ ಕಬಳಿಸಿ ಮಿಂಚಿದರು.

Ranji Trophy Record Broken Assam vs Services Match Ends in Shortest Ever 540 Balls

ಮೊದಲ ಇನಿಂಗ್ಸ್ ಬ್ಯಾಟಿಂಗ್ ನಡೆಸಿದ ಸರ್ವಿಸಸ್‌ ಸಹ ಕೇವಲ 5 ರನ್‌ ಮುನ್ನಡೆ ಸಾಧಿಸಿತು. ಈ ವೇಳೆ ತಂಡ 108 ರನ್‌ಗಳಿಗೆ ಆಲೌಟ್ ಆಯಿತು. ಇರ್ಫಾನ್‌ ಅಲಿ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 51 ರನ್‌ ಸಿಡಿಸಿ ತಂಡಕ್ಕೆ ಆಧಾರವಾದರು. ಉಳಿದ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಅಸ್ಸಾಂ ತಂಡದ ಪರ ರಿಯಾನ್‌ ಪರಾಗ್‌ 5 ವಿಕೆಟ್‌ ಉರುಳಿಸಿದರು. ರಾಹುಲ್‌ ಸಿಂಗ್ 4 ವಿಕೆಟ್‌ ಪಡೆದರು.

5 ರನ್‌ ಹಿನ್ನಡೆಯಿಂದ ಮತ್ತೆ ಬ್ಯಾಟಿಂಗ್ ಆರಂಭಿಸಿದ ಆಸ್ಸಾಂ ತಂಡ 75 ರನ್‌ಗಳಿಗೆ ಆಲೌಟ್ ಆಯಿತು. ಈ ವೇಳೆ ಯಾವೊಬ್ಬ ಬ್ಯಾಟರ್‌ ಬಿಗ್ ಇನಿಂಗ್ಸ್‌ ಕಟ್ಟಲಿಲ್ಲ. ಪರಿಣಾಮ ಅಸ್ಸಾಂ 71 ರನ್‌ಗಳ ಅಲ್ಪ ಮೊತ್ತದ ಗುರಿಯನ್ನು ಸರ್ವಿಸಸ್ ತಂಡಕ್ಕೆ ನೀಡಿತು. ಎರಡನೇ ಇನಿಂಗ್ಸ್‌ನಲ್ಲಿ ಸರ್ವಿಸಸ್ ತಂಡದ ಪರ ಅರ್ಜುನ್ ಶರ್ಮಾ 4, ಅಮಿತ್ ಶುಕ್ಲಾ 3 ವಿಕೆಟ್‌ ಕಿತ್ತರು. ಗುರಿಯನ್ನು ಬೆನ್ನಟ್ಟಿದ ಸರ್ವಿಸಸ್‌ 29 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 73 ರನ್‌ ಕಲೆ ಹಾಕಿತು.

63 ವರ್ಷಗಳ ಹಳೆಯ ದಾಖಲೆ

ಅಸ್ಸಾಂ ಮತ್ತು ಸರ್ವಿಸಸ್ ನಡುವಿನ ಈ ಪಂದ್ಯದಲ್ಲಿ ಒಟ್ಟು 540 ಎಸೆತ ಎಸೆಯಲಾಯಿತು. ಇದು ರಣಜಿ ಟ್ರೋಫಿ ಎಸೆತಗಳ ವಿಷಯದಲ್ಲಿ ಅತ್ಯಂತ ಕಡಿಮೆ ಪಂದ್ಯವಾಗಿದೆ. ಇದಕ್ಕೂ ಮೊದಲು 1962ರಲ್ಲಿ ರೈಲ್ವೇಸ್‌ ಹಾಗೂ ದೆಹಲಿ ತಂಡಗಳ ನಡುವೆ ನಡೆದ ಪಂದ್ಯ 547 ಎಸೆತಗಳಲ್ಲಿ ಅಂತ್ಯವಾಗಿತ್ತು. 63 ವರ್ಷದ ಹಳೆಯ ದಾಖಲೆಯನ್ನು ಈ ಪಂದ್ಯ ಮುರಿದಿದೆ. ಇನ್ನು 91 ವರ್ಷಗಳ ರಣಜಿ ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ ಇಬ್ಬರು ಬೌಲರ್‌ಗಳು ಹ್ಯಾಟ್ರಿಕ್ ಸಾಧನೆ ಮಾಡಿದರು. ಸರ್ವಿಸಸ್ ತಂಡದ ಪರ ಅರ್ಜುನ್ ಶರ್ಮಾ ಮತ್ತು ಮೋಹಿತ್ ಜಂಗ್ರಾ ಹ್ಯಾಟ್ರಿಕ್ ಪಡೆದು ಬೀಗಿದರು.

Story first published: Monday, October 27, 2025, 8:52 [IST]
Other articles published on Oct 27, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+