ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಣಜಿ: ಕರ್ನಾಟಕಕ್ಕೆ ತಮಿಳುನಾಡು ಮೊದಲ ಎದುರಾಳಿ

By Mahesh

ಬೆಂಗಳೂರು, ಡಿ,4: ಹಾಲಿ ರಣಜಿ ಚಾಂಪಿಯನ್ ಕರ್ನಾಟಕ ತಂಡ ಈ ಸಾಲಿನ ರಣಜಿ ಸೀಸನ್ ನ ತನ್ನ ಮೊದಲ ಪಂದ್ಯದಲ್ಲಿ ತಮಿಳುನಾಡು ತಂಡವನ್ನು ಎದುರಿಸಲಿದೆ. ಆರ್ ವಿನಯ್ ಕುಮಾರ್ ಅವರು ಕರನಟಕದ ನಾಯಕತ್ವ ವಹಿಸಿದ್ದರೆ, ಆರ್ ಪ್ರಸನ್ನ ತಮಿಳುನಾಡಿನ ಕ್ಯಾಪ್ಟನ್ ಆಗಿದ್ದಾರೆ.

ಎ ಗುಂಪಿನ ಮೊದಲ ಪಂದ್ಯಗಳು ಡಿ.7ರಿಂದ ಆರಂಭವಾಗಲಿದ್ದು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ತಮಿಳುನಾಡು ಹಾಗೂ ಕರ್ನಾಟಕ ತಂಡ ಕಾದಾಡಲಿವೆ.

Karnataka to face Tamilnadu on Dec 7

ತಂಡ ಇಂತಿದೆ: ಆರ್ ವಿನಯ್ ಕುಮಾರ್ (ನಾಯಕ), ರಾಬಿನ್ ಉತ್ತಪ್ಪ, ಮಾಯಾಂಕ್ ಅಗರವಾಲ್, ಮನೀಶ್ ಪಾಂಡೆ, ಕರುಣ್ ನಾಯರ್, ಸ್ಟುವರ್ಟ್ ಬಿನ್ನಿ, ಗೌತಮ್ ಸಿಎಂ (ಉಪನಾಯಕ, ವಿಕೆಟ್ ಕೀಪರ್), ಕುನಾಲ್ ಕಪೂರ್, ಶ್ರೇಯಸ್ ಗೋಪಾಲ್, ಉದಿತ್ ಬಿ ಪಟೇಲ್, ಅಭಿಮನ್ಯು ಮಿಥುನ್, ಎಚ್ ಎಸ್ ಶರತ್, ಎಸ್ ಅರವಿಂದ್, ಅಬ್ರಾರ್ ಕಾಜಿ, ಶಿಶಿರ್ ಭವಾನೆ, ಸಮರ್ಥ್ ಆರ್.

ಬ್ಯಾಟಿಂಗ್ ಕೋಚ್: ಜೆ ಅರುಣ್ ಕುಮಾರ್
ಬೌಲಿಂಗ್ ಕೋಚ್: ಮನ್ಸೂರ್ ಅಲಿ ಖಾನ್
ಮ್ಯಾನೇಜರ್ : ಸಿದ್ದರಾಮು

ತಮಿಳುನಾಡು ತಂಡಕ್ಕೆ ಎಡಗೈ ಬ್ಯಾಟ್ಸ್ ಮನ್ ಆರ್ ಪ್ರಸನ್ನ ಅವರು ಈ ಬಾರಿ ಸೀಸನ್ ಗೆ ನಾಯಕರಾಗಿ ಆಯ್ಕೆ ಮಾಡಲಾಗಿದೆ. ಎಸ್ ಬದರೀನಾಥ್ ಅನುಪಸ್ಥಿತಿಯಲ್ಲಿ ಬಾಬಾ ಅಪರಾಜಿತ್, ದಿನೇಶ್ ಕಾರ್ತಿಕ್ ಹಾಗೂ ಅಭಿನವ್ ಮುಕುಂದ್ ಬ್ಯಾಟಿಂಗ್ ಶಕ್ತಿಯನ್ನು ಪ್ರದರ್ಶಿಸಬೇಕಿದೆ. ಬೌಲಿಂಗ್ ವಿಭಾಗದಲ್ಲಿ ಎಲ್ ಬಾಲಾಜಿ, ಮಹಮ್ಮದ್, ಜೆ ಕೌಶಿಕ್ ಜೊತೆಗೆ ಮೊದಲ ಬಾರಿಗೆ ತಂಡ ಸೇರಿರುವ ಎಡಗೈ ಮಧ್ಯಮ ವೇಗಿ ಟಿ ನಟರಾಜನ್ ಅವರು ಉತ್ತಮ ಪ್ರದರ್ಶನ ನೀಡಬೇಕಿದೆ.

ತಂಡ ಇಂತಿದೆ: ಆರ್ ಪ್ರಸನ್ನ(ನಾಯಕ), ಅಭಿನವ್ ಮುಕುಂದ್, ಎಂ ಕೌಶಿಕ್ ಗಾಂಧಿ, ಬಾಬಾ ಅಪರಾಜಿತ್, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್) ಬಿ ಇಂದ್ರಜೀತ್, ಎಂ ರಂಗರಾಜನ್, ಎಲ್ ಬಾಲಾಜಿ, ಜೆ ಕೌಶಿಕ್, ಎಂ ಮಹಮ್ಮದ್, ಎ ಶ್ರೀನಿವಾಸ್, ವಿಜಯ್ ಶಂಕರ್, ಯು ಸುಶೀಲ್(ವಿಕೆಟ್ ಕೀಪರ್), ಟಿ ನಟರಾಜನ್ ಹಾಗೂ ಎಂ ಶಾರುಖ್ ಖಾನ್.

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X