Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಣಜಿ ಟ್ರೋಫಿ: ಕರ್ನಾಟಕ ಮಾಜಿ ನಾಯಕ ವಿನಯ್‌ಗೆ ದಾಖಲೆಯ ವಿಕೆಟ್!

Ranji Trophy: Vinay Kumar shines against Arunachal Pradesh

ಪುದುಚೇರಿ, ಜನವರಿ 21: ಕರ್ನಾಟಕ ಕ್ರಿಕೆಟ್‌ ತಂಡದ ಮಾಜಿ ನಾಯಕ ವಿನಯ್‌ ಕುಮಾರ್, ರಣಜಿ ಟ್ರೋಫಿ ಟೂರ್ನಿ ಪಂದ್ಯವೊಂದರಲ್ಲಿ ಹೆಚ್ಚಿನ ವಿಕೆಟ್‌ ಪಡೆದಿದ್ದಾರೆ. ಈ ಬಾರಿ ಪುದುಚೇರಿ ತಂಡ ಪ್ರತಿನಿಧಿಸುತ್ತಿರುವ ವಿನಯ್, ಅರುಣಾಂಚಲ ಪ್ರದೇಶ್ ವಿರುದ್ಧ ಬೌಲಿಂಗ್, ಬ್ಯಾಟಿಂಗ್ ಪಾರಮ್ಯ ಮೆರೆದು ಗಮನ ಸೆಳೆದಿದ್ದಾರೆ.

ಅರುಣಾಂಚಲ್ ಪ್ರದೇಶ ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌, ದ್ವಿತೀಯ ಇನ್ನಿಂಗ್ಸ್‌ನಲ್ಲಿ ವಿನಯ್‌ ಕುಮಾರ್ 5 ವಿಕೆಟ್‌ಗಳನ್ನು ಉರುಳಿಸಿ ಕಾಡಿದರು. ವೇಗಿ ವಿನಯ್‌ಯ ಮಾರಕ ದಾಳಿಯಿಂದಾಗಿ ಅರುಣಾಂಚಲ ತಂಡ, ಪಂದ್ಯದಲ್ಲಿ 296 ರನ್‌ಗಳ ಸೋಲನುಭವಿಸಿದೆ.

ಪುದುಚೇರಿ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ರಣಜಿ ಟ್ರೋಫಿ ಆರನೇ ಸುತ್ತಿನ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪುದುಚೇರಿ, ಅರುಣ್ ಕಾರ್ತಿಕ್ 30, ಎಸ್ ಕಾರ್ತಿಕ್ 31, ವಿಘ್ಣೇಶ್ವರನ್ ಮಾರಿಮುತ್ತು 37, ಸಾಗರ್ ತ್ರಿವೇದಿ 79 ರನ್‌ನೊಂದಿಗೆ 46.4 ಓವರ್‌ಗೆ 209 ರನ್ ಮಾಡಿತ್ತು.

ವಿನಯ್ ಮಾರಕ ಬೌಲಿಂಗ್

ವಿನಯ್ ಮಾರಕ ಬೌಲಿಂಗ್

ಮೊದಲ ಇನ್ನಿಂಗ್ಸ್‌ಗೆ ಇಳಿದ ಅರುಣಾಂಚಲ್ ಪ್ರದೇಶ್, ಸಮರ್ತ್ ಸೇತ್ 67, ರಾಹುಲ್ ದಲಾಲ್ 51, ಅಖಿಲೇಶ್ ಸಹಾನಿ 21 ರನ್‌ನೊಂದಿಗೆ 60.5 ಓವರ್‌ಗೆ 192 ರನ್ ಮಾಡಿತು. ಈ ವೇಳೆ ವಿನಯ್ ಕುಮಾರ್ 51 ರನ್‌ಗೆ 6 ವಿಕೆಟ್‌ ಉರುಳಿಸಿ ಚಿತ್ತ ತನ್ನತ್ತ ಹರಿಸಿಕೊಂಡರು.

ಅಜೇಯ ಅರ್ಧ ಶತಕಬೇರೆ!

ಅಜೇಯ ಅರ್ಧ ಶತಕಬೇರೆ!

ಪುದುಚೇರಿ ದ್ವಿತೀಯ ಇನ್ನಿಂಗ್ಸ್‌ನಲ್ಲಿ ವಿನಯ್ ಆಕರ್ಷಕ ಅರ್ಧ ಶತಕ ಕೂಡ ಬಾರಿಸಿದ್ದರು. ಅರುಣ್ ಕಾರ್ತಿಕ್ 36, ಎಸ್ ಕಾರ್ತಿಕ್ 31, ನಾಯಕ ದಾಮೋದರನ್ ರೋಹಿತ್ 46, ಪರಾಸ್ ದೊಗ್ರ 61, ವಿನಯ್ ಕುಮಾರ್ ಅಜೇಯ 81, ಸಾಗರ್ ತ್ರಿವೇದಿ 25, ಆಶಿತ್ ರಾಜಿವ್ 24 ರನ್‌ ಕೊಡುಗೆಯಿಂದ ಪುದುಚೇರಿ 73.4 ಓವರ್‌ಗೆ 315 ರನ್ ಮಾಡಿತು.

ನದಾಮ್‌ಗೆ 12 ವಿಕೆಟ್‌ಗಳು

ನದಾಮ್‌ಗೆ 12 ವಿಕೆಟ್‌ಗಳು

ಪುದುಚೇರಿ ವಿರುದ್ಧ ಅರಣಾಂಚಲ ಬೌಲರ್ ಅಖಿಲೇಶ್ ಸಹಾನಿ ಮೊದಲ ಇನ್ನಿಂಗ್ಸ್‌ನಲ್ಲಿ 4, ನದಾಮ್ ತೆಂಪೋಲ್ 5 ಪಡೆದಿದ್ದರಲ್ಲದೆ, ಪುದುಚೇರಿ ದ್ವಿತೀಯ ಇನ್ನಿಂಗ್ಸ್‌ನಲ್ಲೂ ನದಾಮ್ ತೆಂಪೋಲ್ 7, ಚೇಚಿ ನೇರಿ 2 ವಿಕೆಟ್‌ನೊಂದಿಗೆ ಮಿಂಚಿದರು. ನದಾಮ್ ಒಟ್ಟಿಗೆ 12 (7+5) ವಿಕೆಟ್‌ಗಳೊಂದಿಗೆ ವಿನಯ್‌ಗೂ ಉತ್ತಮ ವಿಕೆಟ್ ಸಾಧನೆ ತೋರಿದ್ದಾರೆ.

ಅರುಣಾಂಚಲ ನೀರಸ ಬ್ಯಾಟಿಂಗ್

ಅರುಣಾಂಚಲ ನೀರಸ ಬ್ಯಾಟಿಂಗ್

ಗುರಿ ಬೆಂಬತ್ತಿದ ಅರುಣಾಂಚಲ, ನೀರಸ ಬ್ಯಾಟಿಂಗ್‌ ನೊಂದಿಗೆ 26.4 ಓವರ್‌ಗೆ 72 ರನ್ ಬಾರಿಸಿ ಸೋಲೊಪ್ಪಿಕೊಂಡಿತು. ಈ ಇನ್ನಿಂಗ್ಸ್‌ನಲ್ಲಿ ಪುದುಚೇರಿಯ ವಿನಯ್ ಕುಮಾರ್ 5, ಸಾಗರ್ ಉದೇಶಿ 2, ಸಾಗರ್ ತ್ರಿವೇದಿ 5 ವಿಕೆಟ್‌ನೊಂದಿಗೆ ತಂಡದ ಗೆಲುವಿಗೆ ಕಾರಣರಾದರು.

Story first published: Tuesday, January 21, 2020, 16:59 [IST]
Other articles published on Jan 21, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+