Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಣಜಿ : ಕೊನೆಗೂ ಕ್ವಾರ್ಟರ್ ಫೈನಲ್ ಗೇರಿದ ಕರ್ನಾಟಕ

ಬೆಂಗಳೂರು, ಜನವರಿ 10: ರಣಜಿ ಟ್ರೋಫಿಯ ಎ ಗುಂಪಿನ ಪಂದ್ಯದಲ್ಲಿ ಬರೋಡಾ ವಿರುದ್ಧ ಎರಡು ದಿನಕ್ಕೆ ಸೋಲು ಅನುಭವಿಸಿದರೂ, ಕರ್ನಾಟಕ ಈ ಬಾರಿ ಕ್ವಾರ್ಟರ್ ಫೈನಲ್ ಹಂತ ತಲುಪುವಲ್ಲಿ ಯಶಸ್ವಿಯಾಗಿದೆ.

ಮಧ್ಯಪ್ರದೇಶ ತಂಡ ಆಂಧ್ರ ವಿರುದ್ಧ ಹೀನಾಯ ಸೋಲಿಗೆ ಶರಣಾದರೆ, ಬಂಗಾಳ ಹಾಗೂ ಹಿಮಾಚಲ ಪ್ರದೇಶ ತಂಡಗಳು ಕ್ರಮವಾಗಿ ಪಂಜಾಬ್ ಹಾಗೂ ಕೇರಳ ವಿರುದ್ಧ ಇನಿಂಗ್ಸ್ ಹಿನ್ನಡೆ ಅನುಭವಿಸಿವೆ. ಸೌರಾಷ್ಟ್ರ ಹಾಗೂ ಹಾಲಿ ಚಾಂಪಿಯನ್ ವಿದರ್ಭ ಕೂಡಾ ಮುಂದಿನ ಹಂತಕ್ಕೇರಿವೆ.

ಇದರಿಂದ ಕರ್ನಾಟಕ ತಂಡದ ಎಂಟರಘಟ್ಟದ ಹಾದಿ ಖಚಿತಗೊಂಡಿದೆ. 8 ಪಂದ್ಯಗಳಿಂದ 3ರಲ್ಲಿ ಜಯ, 2ರಲ್ಲಿ ಸೋಲು ಹಾಗೂ 3 ಪಂದ್ಯಗಳಲ್ಲಿ ಡ್ರಾ ಸಾಧನೆ ಮಾಡಿದ ಕರ್ನಾಟಕ 27 ಅಂಕಗಳೊಂದಿಗೆ ಎಲೈಟ್ ಎ ಮತ್ತು ಬಿ ಗುಂಪಿನಲ್ಲಿ ಸದ್ಯ ಎರಡನೇ ಸ್ಥಾನದಲ್ಲಿದೆ.

Ranji: Vidarbha and Karnataka through to Quarterfinals

8 ಪಂದ್ಯಗಳಲ್ಲಿ 3 ಗೆಲುವು, 2 ಸೋಲು ಕಂಡು 27 ಅಂಕಗಳನ್ನು ಹೊಂದಿರುವ ಕರ್ನಾಟಕ ನಾಕೌಟ್ ಹಂತ ತಲುಪುವ ನಿರೀಕ್ಷೆಯಿದೆ. ಬರೋಡಾ ಹಾಗೂ ಗುಜರಾತ್ ತಲಾ 26 ಅಂಕಗಳನ್ನು ಹೊಂದಿವೆ.

ಎ ಗುಂಪು ಹಾಗೂ ಬಿ:
1. ವಿದರ್ಭ(29 ಅಂಕ),
2. ಸೌರಾಷ್ಟ್ರ (29)
3. ಕರ್ನಾಟಕ (27)
4. ಕೇರಳ (26)
5. ಗುಜರಾತ್ (26)

ಸಿ ಗುಂಪು
ರಾಜಸ್ಥಾನ್ (51)
ಉತ್ತರ ಪ್ರದೇಶ (41)

ಜನವರಿ 15ರಿಂದ ಕ್ವಾರ್ಟರ್ ಫೈನಲ್
* ವಿದರ್ಭ ವಿರುದ್ಧ ಉತ್ತರಾಖಂಡ್
* ಸೌರಾಷ್ಟ್ರ ವಿರುದ್ಧ ಉತ್ತರಪ್ರದೇಶ
* ಕರ್ನಾಟಕ ವಿರುದ್ಧ ರಾಜಸ್ಥಾನ
* ಕೇರಳ ವಿರುದ್ಧ ಗುಜರಾತ್.

Story first published: Thursday, January 10, 2019, 21:41 [IST]
Other articles published on Jan 10, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+