ಅಫ್ಘಾನಿಸ್ತಾನ ಟಿ20 ತಂಡಕ್ಕೆ ನೂತನ ನಾಯಕರಾಗಿ ರಶೀದ್ ಖಾನ್ ಆಯ್ಕೆ

ಕಾಬುಲ್: ಅಫ್ಘಾನಿಸ್ತಾನ ರಾಷ್ಟ್ರೀಯ ಟಿ20 ತಂಡಕ್ಕೆ ನೂತನ ನಾಯಕರಾಗಿ ಆಯ್ಕೆ ಬೌಲಿಂಗ್ ಆಲ್ ರೌಂಡರ್ ರಶೀದ್ ಖಾನ್ ಆಯ್ಕೆಯಾಗಿದ್ದಾರೆ. ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್ ಈ ಸಂಗತಿಯನ್ನು ಮಂಗಳವಾರ (ಜುಲೈ 6) ಘೋಷಿಸಿದೆ. ನಜೀಬುಲ್ಲ ಝದ್ರನ್ ಅಫ್ಘಾನ್ ರಾಷ್ಟ್ರೀಯ ತಂಡದ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ.
ವಿಶ್ವ ಕ್ರಿಕೆಟ್‌ನಲ್ಲಿ ಛಾಪು ಮೂಡಿಸುತ್ತಿರುವ ಸ್ಪಿನ್ನರ್ ರಶೀದ್ ಖಾನ್ ಅವರನ್ನು ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್‌ನ ಅಧ್ಯಕ್ಷ ಫರ್ಹಾನ್ ಯೂಸೆಫ್ಜೈ ಮುಂದಾಳತ್ವದ ತಂಡ ನಾಯಕರಾಗಿ ಆರಿಸಿದೆ. ಕಳೆದ ಕೆಲವಾರು ವರ್ಷಗಳಿಂದ ತಂಡದಲ್ಲಿ ಅತ್ಯುತ್ತಮ ಪ್ರದರ್ಶನವನ್ನು ಪರಿಗಣಿಸಿ ರಶೀದ್‌ಗೆ ತಂಡ ಮುನ್ನಡೆಸುವ ಜವಾಬ್ದಾರಿ ನೀಡಲಾಗಿದೆ.
ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಟಿ20ಐ ಬೌಲಿಂಗ್ ರ್‍ಯಾಂಕಿಂಗ್‌ನಲ್ಲಿ ರಶೀದ್ ಈಗ ದ್ವಿತೀಯ ಸ್ಥಾನದಲ್ಲಿದ್ದಾರೆ. ಈ ರ್‍ಯಾಂಕಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಸ್ಪಿನ್ನರ್ ತಬ್ರೈಜ್ ಶಂಸಿಗಿಂತ ರಶೀದ್ 31 ಪಾಯಿಂಟ್ಸ್ ಕಡಿಮೆಯಿದ್ದಾರೆ.
ರಶೀದ್ ಅವರು 5 ಟೆಸ್ಟ್ ಪಂದ್ಯಗಳಲ್ಲಿ 34 ವಿಕೆಟ್, 106 ರನ್, 74 ಏಕದಿನ ಪಂದ್ಯಗಳಲ್ಲಿ 140 ವಿಕೆಟ್, 1008 ರನ್, 51 ಟಿ20ಐ ಪಂದ್ಯಗಳಲ್ಲಿ 95 ವಿಕೆಟ್, 179 ರನ್ ಬಾರಿಸಿದ್ದಾರೆ. 76 ಲಿಸ್ಟ್ ಎ ಪಂದ್ಯಗಳಲ್ಲಿ 144 ವಿಕೆಟ್ ದಾಖಲೆ ಹೊಂದಿದ್ದಾರೆ. 22ರ ಹರೆಯದ ರಶೀದ್ ಐಪಿಎಲ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಆಡುತ್ತಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications