ಐಸಿಸಿ ODI ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ ರಶೀದ್ ಖಾನ್!

ಬೆಂಗಳೂರು, ಸೆಪ್ಟೆಂಬರ್ 30: ಏಷ್ಯಾ ಕಪ್ 2018ರ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಆಟಗಾರರ ಶ್ರೇಯಾಂಕ ಪಟ್ಟಿ ಪ್ರಕಟಿಸಿದೆ. ಟೀಂ ಇಂಡಿಯಾ ನಾಯಕ ಕೊಹ್ಲಿ ಅವರು ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದರೆ, ತಂಡವನ್ನು ಮುನ್ನಡೆಸಿದ್ದ ರೋಹಿತ್ ಶರ್ಮ ಅವರು ಎರಡನೇ ಸ್ಥಾನಕ್ಕೇರಿದ್ದಾರೆ.
ಬೌಲರ್ ಗಳ ಪೈಕಿ ಭಾರತದ ಜಸ್ ಪ್ರೀತ್ ಬೂಮ್ರಾ ಅಗಸ್ಥಾನದಲ್ಲಿದ್ದರೆ, ಸ್ಪಿನ್ನರ್ ಕುಲದೀಪ್ ಯಾದವ್ ಅವರು ಮೂರನೇ ಸ್ಥಾನಕ್ಕೇರಿದ್ದಾರೆ. ಬೌಲರ್ ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಅಫ್ಘಾನಿಸ್ತಾನದ ರಶೀದ್ ಖಾನ್ ಅವರು, ಆಲ್ ರೌಂಡರ್ ಪಟ್ಟಿಯಲ್ಲಿ ನಂ.1 ಪಟ್ಟ ಪಡೆದುಕೊಂಡಿದ್ದಾರೆ.
20 ವರ್ಷ ವಯಸ್ಸಿನ ರಶೀದ್ ಖಾನ್ ಅವರು 6 ರೇಟಿಂಗ್ ಅಂಕ ಗಳಿಸಿ ಬಾಂಗ್ಲಾದೇಶದ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಅವರನ್ನು ಅಗ್ರಸ್ಥಾನದಿಂದ ಕೆಳಗಿಳಿಸಿದ್ದಾರೆ.
ದುಬೈಯಲ್ಲಿ ನಡೆದ ಏಷ್ಯಾಕಪ್ 2018ರ ಅಂತಿಮ ಹಣಾಹಣಿಯಲ್ಲಿ ಬಾಂಗ್ಲಾದೇಶವನ್ನು ರೋಚಕವಾಗಿ ಸೋಲಿಸಿದರೂ ಭಾರತ ಎರಡನೇ ಸ್ಥಾನದಿಂದ ಮೇಲಕ್ಕೇರಿಲ್ಲ. ಇಂಗ್ಲೆಂಡ್ ಈಗಲೂ ಅಗ್ರಸ್ಥಾನದಲ್ಲಿ ಮುಂದುವರೆದಿದೆ.

ಟಾಪ್ 5 ಏಕದಿನ ಕ್ರಿಕೆಟ್ ತಂಡಗಳು
#1 ಇಂಗ್ಲೆಂಡ್ ತಂಡ : ಪಂದ್ಯಗಳು 51, 6,470 ಅಂಕಗಳು, 127 ರೇಟಿಂಗ್
#2 ಭಾರತ : ಪಂದ್ಯಗಳು 53, 6,492 ಅಂಕಗಳು, 122 ರೇಟಿಂಗ್
#3 ನ್ಯೂಜಿಲೆಂಡ್ : ಪಂದ್ಯಗಳು 53, 4602 ಅಂಕಗಳು, 112 ರೇಟಿಂಗ್
#4 ದಕ್ಷಿಣ ಆಫ್ರಿಕಾ : ಪಂದ್ಯಗಳು 39, 4275 ಅಂಕಗಳು, 110 ರೇಟಿಂಗ್
#5 ಪಾಕಿಸ್ತಾನ : ಪಂದ್ಯಗಳು 41, 4145 ಅಂಕಗಳು, 101 ರೇಟಿಂಗ್
ಸೂಚನೆ: ಏಷ್ಯಾ ಕಪ್ 2018 ಫೈನಲ್ ನಂತರ ಐಸಿಸಿ ಪ್ರಕಟಿಸಿರುವ ಶ್ರೇಯಾಂಕ ಪಟ್ಟಿ ಇದಾಗಿದ್ದು, ಸೆಪ್ಟೆಂಬರ್ 30ರ ಅನ್ವಯ ಟಾಪ್ 05 ಸ್ಥಾನಗಳು ಇಲ್ಲಿವೆ.
ಕೊಹ್ಲಿ ಇಸ್ ಕಿಂಗ್ : ಐಸಿಸಿ ಶ್ರೇಯಾಂಕದಲ್ಲಿ ಅಗ್ರಸ್ಥಾನ, ದಾಖಲೆ ಅಂಕ ಗಳಿಕೆ

ಒಡಿಐ ಬ್ಯಾಟ್ಸ್ ಮನ್ ಗಳು ಟಾಪ್ 05
1. ವಿರಾಟ್ ಕೊಹ್ಲಿ (ಭಾರತ), 884 ರೇಟಿಂಗ್
2. ರೋಹಿತ್ ಶರ್ಮ (ಭಾರತ), 842 ರೇಟಿಂಗ್
3. ಜೋ ರೂಟ್ (ಇಂಗ್ಲೆಂಡ್), 818 ರೇಟಿಂಗ್
4. ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ), 803 ರೇಟಿಂಗ್
5. ಶಿಖರ್ ಧವನ್ (ಭಾರತ), 802 ರೇಟಿಂಗ್
ಸೂಚನೆ: ಏಷ್ಯಾ ಕಪ್ 2018 ಫೈನಲ್ ನಂತರ ಐಸಿಸಿ ಪ್ರಕಟಿಸಿರುವ ಶ್ರೇಯಾಂಕ ಪಟ್ಟಿ ಇದಾಗಿದ್ದು, ಸೆಪ್ಟೆಂಬರ್ 30ರ ಅನ್ವಯ ಟಾಪ್ 05 ಸ್ಥಾನಗಳು ಇಲ್ಲಿವೆ.

ಒಡಿಐ ಟಾಪ್ 05 ಬೌಲರ್ಸ್
1. ಜಸ್ ಪ್ರೀತ್ ಬೂಮ್ರಾ (ಭಾರತ), 797 ರೇಟಿಂಗ್
2. ರಶೀದ್ ಖಾನ್ (ಅಫ್ಘಾನಿಸ್ತಾನ) 788 ರೇಟಿಂಗ್
3. ಕುಲದೀಪ್ ಯಾದವ್ (ಭಾರತ), 700 ರೇಟಿಂಗ್
4. ಟ್ರೆಂಟ್ ಬೌಲ್ಟ್ (ನ್ಯೂಜಿಲೆಂಡ್), 699 ರೇಟಿಂಗ್
5. ಜೋಶ್ ಹೇಜಲ್ ವುಡ್ (ಆಸ್ಟ್ರೇಲಿಯಾ), 696 ರೇಟಿಂಗ್
ಸೂಚನೆ: ಏಷ್ಯಾ ಕಪ್ 2018 ಫೈನಲ್ ನಂತರ ಐಸಿಸಿ ಪ್ರಕಟಿಸಿರುವ ಶ್ರೇಯಾಂಕ ಪಟ್ಟಿ ಇದಾಗಿದ್ದು, ಸೆಪ್ಟೆಂಬರ್ 30ರ ಅನ್ವಯ ಟಾಪ್ 05 ಸ್ಥಾನಗಳು ಇಲ್ಲಿವೆ.

ಒಡಿಐ ಟಾಪ್ 05 ಆಲ್ ರೌಂಡರ್ಸ್
1. ರಶೀದ್ ಖಾನ್ (ಅಫ್ಘಾನಿಸ್ತಾನ), 353 ರೇಟಿಂಗ್
2. ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ), 341 ರೇಟಿಂಗ್
3. ಮೊಹಮ್ಮದ್ ನಬಿ (ಅಫ್ಘಾನಿಸ್ತಾನ), 337 ರೇಟಿಂಗ್
4. ಮಿಚೆಲ್ ಸ್ಯಾಂಟ್ನರ್ (ನ್ಯೂಜಿಲೆಂಡ್), 317 ರೇಟಿಂಗ್
5. ಮೊಹಮ್ಮದ್ ಹಫೀಜ್ (ಪಾಕಿಸ್ತಾನ), 306 ರೇಟಿಂಗ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications