ಟಿ20 ಕ್ರಿಕೆಟ್‌ನಲ್ಲಿ ದಿನವೂ ಒಂದೊಂದು ದಾಖಲೆಗಳು ನಿರ್ಮಾಣ ಆಗುತ್ತಲೇ ಇರುತ್ತವೆ. ದಿನವೂ ಹೊಸ ಸ್ಟಾರ್ ಚುಟುಕು ಫಾರ್ಮೆಟ್‌ನಲ್ಲಿ ಉದಯವಾಗುತ್ತಲೆ ಇರುತ್ತಾರೆ. ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ಪರ ಆಡುವ ರಶೀದ್ ಖಾನ್ ಟಿ20 ಕ್ರಿಕೆಟ್‌ನಲ್ಲಿ ಇತಿಹಾಸ ಬರೆದಿದ್ದಾರೆ. ಅಫ್ಘಾನಿಸ್ತಾನದ ಸ್ಪಿನ್ ಬೌಲರ್ ಬರೆದಿರುವ ಇತಿಹಾಸ ಏನು ಎಂಬ ಬಗ್ಗೆ ವರದಿ ಇಲ್ಲಿದೆ.
ರಾಶೀದ್ ಖಾನ್ ವಿಶ್ವದ ಶ್ರೇಷ್ಠ ಸ್ಪಿನ್ ಬೌಲರ್‌ಗಳಲ್ಲಿ ಒಬ್ಬರು. ಇವರು ತಮ್ಮ ಲೆಗ್ ಸ್ಪಿನ್ ಹಾಗೂ ಗೂಗ್ಲಿಗಳಿಂದ ಎದುರಾಳಿ ಬೌಲರ್‌ಗಳನ್ನು ಕಾಡುತ್ತಲೆ ಇರುತ್ತಾರೆ. ಈಗ ಇವರು ಎಸ್‌ಎ20ಯಲ್ಲಿ ಕ್ವಾಲಿಫೈಯರ್ ಮೊದಲ ಪಂದ್ಯದಲ್ಲಿ ಎಂಐ ಕೇಪ್ ಟೌನ್ ಪರ ಆಡಿದ ರಾಶೀದ್ 2 ವಿಕೆಟ್ ಕಬಳಿಸಿದರು. ಈ ಮೂಲಕ ವೆಸ್ಟ್ ಇಂಡೀಸ್‌ನ ಸ್ಟಾರ್ ಆಟಗಾರ ಡ್ವೇನ್ ಗ್ರಾವೋ ಅವರ ದಾಖಲೆಯನ್ನು ಅಳಿಸಿ ಹಾಕಿದರು.

ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಕೀರ್ತಿ ವೆಸ್ಟ್ ಇಂಡೀಸ್ ತಂಡದ ಡ್ವೇನ್ ಬ್ರಾವೊ ಹೆಸರಿನಲ್ಲಿ ಇತ್ತು. ಇವರು 631 ವಿಕೆಟ್ ಪಡೆದು ಇತಿಹಾಸ ನಿರ್ಮಿಸಿದ್ದರು. ಈಗ ರಶೀದ್ ಖಾನ್ ಈ ದಾಖಲೆಯನ್ನು ಅಳಿಸಿ ಹಾಕಿದರು. ಅಫ್ಘಾನಿಸ್ತಾನ ಸ್ಪಿನ್ ಬೌಲರ್ ರಾಶೀದ್ 461 ಏಕದಿನ ಪಂದ್ಯಗಳಲ್ಲಿ 633 ವಿಕೆಟ್ ಪಡೆದು ಬೀಗಿದ್ದಾರೆ. ಬ್ರಾವೋ ಅವರಿಗೆ ಇದೇ ಸಾಧನೆ ಮಾಡಲು 582 ಪಂದ್ಯಗಳನ್ನು ಆಡಿದ್ದಾರೆ.
ರಶೀದ್ ಖಾನ್ 2015ರಲ್ಲಿ ಚುಟುಕು ಫಾರ್ಮೆಟ್‌ಗೆ ಪದಾರ್ಪಣೆ ಮಾಡಿದರು. ಇವರು ತಮ್ಮ ಬಿಗುವಿನ ದಾಳಿ ಹಾಗೂ ವೇರಿಯೇಷನ್‌ಗಳಿಂದಲೇ ಹೆಸರುವಾಸಿ. ಇವರು ವಿಶ್ವದಲ್ಲಿ ನಡೆಯುವ ನಾನಾ ಲೀಗ್‌ಗಳಲ್ಲಿ ಭಾಗವಹಿಸಿದ್ದಾರೆ. ಐಪಿಎಲ್, ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್, ಬಿಗ್ ಬ್ಯಾಷ್ ಲೀಗ್, ಪಾಕಿಸ್ತಾನ್ ಸೂಪರ್ ಲೀಗ್, ಕೆರಿಬಿಯನ್ ಪ್ರೀಮಿಯರ್ ಲೀಗ್, ಇಂಗ್ಲೆಂಡ್‌ನಲ್ಲಿ ನಡೆಯುವ ದಿ ಹಂಡ್ರೆಡ್ ಟೂರ್ನಿಗಳಲ್ಲಿ ಆಡಿ ಸೈ ಎನಿಸಿಕೊಂಡಿದ್ದಾರೆ.
ಈ ಸಾಧನೆ ಬಗ್ಗೆ ಮಾತನಾಡಿರುವ ರಶೀದ್ ಖಾನ್, ಇದು ನಿಜಕ್ಕೂ ಹೆಮ್ಮೆಯ ಸಂಗತಿ. ಅಫ್ಘಾನಿಸ್ತಾನ ತಂಡವನ್ನು ಪ್ರತನಿಧಿಸಿ, ಈ ಸಾಧನೆ ಮಾಡಿದ್ದು ನಿಜಕ್ಕೂ ಖುಷಿ ನೀಡಿದೆ. ಡ್ವೆನ್ ಬ್ರಾವೊ ನಿಶ್ಚಿತವಾಗಿ ಟಿ20 ಕ್ರಿಕೆಟ್ ಇತಿಹಾಸದ ಕ್ಲಾಸ್ ಬೌಲರ್‌ಗಳಲ್ಲಿ ಒಬ್ಬರು ಎಂದು ತಿಳಿಸಿದ್ದಾರೆ. ಸದ್ಯ ರಶೀದ್ ಖಾನ್ ಅವರನ್ನು ಗುಜರಾತ್ ಟೈಟಾನ್ಸ್ 15 ಕೋಟಿ ರೂಪಾಯಿ ನೀಡಿ ತನ್ನ ತಂಡದಲ್ಲೇ ಉಳಿಸಿಕೊಂಡಿದೆ.

ರಶೀದ್ ಖಾನ್ (ಅಫ್ಘಾನಿಸ್ತಾನ) - 633 ವಿಕೆಟ್
ಡ್ವೇನ್ ಬ್ರಾವೋ (ವೆಸ್ಟ್ ಇಂಡೀಸ್) - 631 ವಿಕೆಟ್
ಸುನಿಲ್ ನರೈನ್ (ವೆಸ್ಟ್ ಇಂಡೀಸ್) - 573 ವಿಕೆಟ್
ಇಮ್ರಾನ್ ತಾಹಿರ್ (ದಕ್ಷಿಣ ಆಫ್ರಿಕಾ) - 531 ವಿಕೆಟ್
ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ) - 492 ವಿಕೆಟ್