For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾ ವಿರುದ್ಧ ಅಫ್ಘಾನ್‌ಗೆ ಐತಿಹಾಸಿಕ ಜಯ, ರಶೀದ್ ಅಪರೂಪದ ದಾಖಲೆ

AFG vs BAN test 2019 : ರಶೀದ್ ಅಪರೂಪದ ದಾಖಲೆ | Oneindia Kannada
Rashid Khan creates unique Test record in Afghanistan’s historic win over Bangladesh

ಧಾಕಾ, ಸೆಪ್ಟೆಂಬರ್ 9: ಅಫ್ಘಾನಿಸ್ತಾನ ತಂಡಕ್ಕೆ ನಾಯಕನಾಗಿ ಆಯ್ಕೆಯಾಗಿ ಮೊದಲ ಪಂದ್ಯದಲ್ಲೇ ರಶೀದ್ ಖಾನ್ ಆಲ್ ರೌಂಡರ್ ಆಟ ಪ್ರದರ್ಶಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ತಂಡವನ್ನು ಮುನ್ನಡೆಸಿದ ಅತೀ ಕಿರಿಯ ನಾಯಕ ಎಂಬ ದಾಖಲೆಗೂ 20ರ ಹರೆಯದ ರಶೀದ್ ಕಾರಣರಾಗಿದ್ದಾರೆ.

ಬಾಂಗ್ಲಾದ ಚತ್ತಗ್ರಾಮ್‌ನಲ್ಲಿ ನಡೆದ ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ತಂಡಗಳ ನಡುವಣ ಏಕಮಾತ್ರ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ರಶೀದ್ 61 ಎಸೆತಗಳಿಗೆ 51 ರನ್ ಬಾರಿಸಿದರು. ಇದೇ ಇನ್ನಿಂಗ್ಸ್‌ನಲ್ಲಿ ಖಾನ್ 55 ರನ್‌ಗೆ 5 ವಿಕೆಟ್‌ ಕೂಡ ಮುರಿದಿದ್ದಾರೆ.

ಅಫ್ಘಾನ್ ಮೊದಲ ಇನ್ನಿಂಗ್ಸ್‌ನಲ್ಲಿ ರಹಮತ್ ಷಾ 102, ಅಸ್ಘರ್ ಅಫ್ಘಾನ್ 92, ಅಫ್ಸರ್ ಝಝಾಯ್ 41, ರಶೀದ್ ಖಾನ್ 51 ರನ್‌ನೊಂದಿಗೆ 117 ಓವರ್‌ಗೆ 342 ರನ್ ಮಾಡಿತು. ಈ ವೇಳೆ ಬಾಂಗ್ಲಾದ ತೈಜುಲ್ ಇಸ್ಲಾಮ್ 4, ನಾಯಕ ಶಕೀಬ್ ಅಲ್ ಹಸನ್ 2, ನಯೀಮ್ ಹಸನ್ 2 ವಿಕೆಟ್ ಪಡೆದರು.

ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್‌ನಲ್ಲಿ ಲಿಟನ್ ದಾಸ್ 33, ಮೊಮಿನುಲ್ ಹಕ್ 52, ಮೊಸದ್ದೇಕ್ ಹೊಸೈನ್ 48 ರನ್‌ನೊಂದಿಗೆ 70.5 ಓವರ್‌ಗೆ 205 ರನ್ ಮಾಡಿತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅಫ್ಘಾನ್‌ ಇಬ್ರಾಹಿಂ ಝದ್ರನ್ 87, ಅಸ್ಘರ್ ಅಫ್ಘಾನ್ 50, ಅಫ್ಸರ್ ಝಝಾಯ್ 48 ರನ್‌ನೊಂದಿಗೆ 260 ರನ್ ಮಾಡಿತು.

ಬಾಂಗ್ಲಾದೇಶ ಶದ್ಮಾನ್ ಇಸ್ಲಾಮ್ 41, ಶಕೀಬ್ ಅಲ್ ಹಸನ್ 44 ರನ್‌ನೊಂದಿಗೆ 61.4 ಓವರ್‌ಗೆ 173 ರನ್ ಗಳಿಸಿ 244 ರನ್‌ನಿಂದ ಶರಣಾಯಿತು. ಬಾಂಗ್ಲಾ ದ್ವಿತೀಯ ಇನ್ನಿಂಗ್ಸ್‌ನಲ್ಲಿ ರಶೀದ್ 49ಕ್ಕೆ 6, ಝಹೀರ್ ಖಾನ್ 3 ವಿಕೆಟ್ ಪಡೆದರು. ರಶೀದ್ ಖಾನ್ ಪಂದ್ಯಶ್ರೇಷ್ಠರೆನಿಸಿದರು.

Story first published: Monday, September 9, 2019, 20:50 [IST]
Other articles published on Sep 9, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+