ವಿರಾಟ್ ಕೊಹ್ಲಿ, ಧೋನಿ ಮತ್ತು ಬಾಬರ್ ಅಜಮ್ ಬಗ್ಗೆ ರಶೀದ್ ಖಾನ್ ಒಂದೇ ಪದದಲ್ಲಿ ವಿವರಿಸಿದ್ದು ಹೀಗೆ

ಅಫ್ಘಾನಿಸ್ತಾನದ ಸ್ಪಿನ್ ಮಾಂತ್ರಿಕ ರಶೀದ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಅಪಾರವಾದ ಅಭಿಮಾನಿ ಬಳಗವನ್ನು ಹೊಂದಿದ್ದು ಆಗಾಗ ತಮ್ಮ ಅನುಯಾಯಿಗಳ ಜೊತೆ ಪ್ರಶ್ನೋತ್ತರಗಳನ್ನು ನಡೆಸುತ್ತಿರುತ್ತಾರೆ. ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಸಕ್ರಿಯವಾಗಿರುವ ಅಫ್ಘಾನಿಸ್ತಾನದ ಉಪನಾಯಕ ರಶೀದ್ ಖಾನ್ ಇತ್ತೀಚಿಗಷ್ಟೇ ಪ್ರಶ್ನೋತ್ತರವನ್ನು ನಡೆಸಿದ್ದಾರೆ.
ಧೋನಿ ಯಶಸ್ವಿ ನಾಯಕತ್ವದ ಹಿಂದೆ ಇದೆ ಆ ಆಟಗಾರನ ನಿರಂತರ ಸಲಹೆ; ಸತ್ಯಾಂಶ ಬಿಚ್ಚಿಟ್ಟ ರುತುರಾಜ್ ಗಾಯಕ್ವಾಡ್
ಹೀಗೆ ಅನುಯಾಯಿಗಳು ಕೇಳಿದ ವಿವಿಧ ಪ್ರಶ್ನೆಗಳಲ್ಲಿ ಕೆಲ ಆಯ್ದ ಪ್ರಶ್ನೆಗಳಿಗೆ ರಶೀದ್ ಖಾನ್ ಉತ್ತರವನ್ನು ನೀಡಿದ್ದಾರೆ. ರಶೀದ್ ಖಾನ್ ಅಭಿಮಾನಿಗಳು ಬಾಲಿವುಡ್ ಚಿತ್ರದಲ್ಲಿ ನಟಿಸುತ್ತೀರಾ, ಪ್ರಸ್ತುತ ನಿಮ್ಮ ವಾಟ್ಸಾಪ್ ಡಿಪಿ ಯಾವುದು, ನಿಮ್ಮ ನೆಚ್ಚಿನ ಆಟಗಾರ ಯಾರು, ನಿಮ್ಮ ನೆಚ್ಚಿನ ತಮಿಳು ಹಾಡು ಯಾವುದು ಹಾಗೂ ಹೈದರಾಬಾದ್ ಬಗ್ಗೆ ನಿಮ್ಮ ಅನಿಸಿಕೆ ಏನು ಹೀಗೆ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದಾರೆ. ಇವುಗಳ ಜೊತೆಗೆ ವಿವಿಧ ಆಟಗಾರರ ಕುರಿತು ಅಭಿಮಾನಿಗಳು ಪ್ರಶ್ನೆ ಕೇಳಿದ್ದು ರಶೀದ್ ಖಾನ್ ಒಂದು ಪದದಲ್ಲಿ ಉತ್ತರವನ್ನು ನೀಡಿದ್ದಾರೆ. ಅಭಿಮಾನಿಗಳು ಯಾವ ಯಾವ ಆಟಗಾರರ ಕುರಿತು ಪ್ರಶ್ನೆಗಳನ್ನು ಕೇಳಿದರು ಮತ್ತು ಅದಕ್ಕೆ ರಶೀದ್ ಖಾನ್ ನೀಡಿದ ಉತ್ತರವೇನು ಎಂಬುದು ಮುಂದೆ ಇದೆ ಓದಿ..

ಎಂಎಸ್ ಧೋನಿ ಹಾಗೂ ಯುವರಾಜ್ ಸಿಂಗ್ ಬಗ್ಗೆ ರಶೀದ್ ಖಾನ್ ಹೇಳಿದ್ದು ಹೀಗೆ
ಇನ್ ಸ್ಟಾಗ್ರಾಂನಲ್ಲಿ ರಶೀದ್ ಖಾನ್ ಅಭಿಮಾನಿಗಳು ಎಂಎಸ್ ಧೋನಿ ಹಾಗೂ ಯುವರಾಜ್ ಸಿಂಗ್ ಬಗ್ಗೆ ಕೂಡ ಪ್ರಶ್ನೆಗಳನ್ನು ಕೇಳಿದ್ದಾರೆ. ಎಂಎಸ್ ಧೋನಿ ಬಗ್ಗೆ ಒಂದು ಪದದಲ್ಲಿ ಏನಾದರೂ ಹೇಳಿ ಎಂದು ಕೇಳಿದ ಅಭಿಮಾನಿಗೆ 'ಧೋನಿ ಬಗ್ಗೆ ಹೇಳಲು ಒಂದು ಪದ ಸಾಕಾಗುವುದಿಲ್ಲ' ಎಂದು ರಶೀದ್ ಖಾನ್ ಉತ್ತರಿಸಿದರು, ಅದೇ ರೀತಿ ಯುವರಾಜ್ ಸಿಂಗ್ ಕುರಿತು ಕೇಳಿದ ಅಭಿಮಾನಿಗೆ 'ಸಿಕ್ಸರ್‌ಗಳ ರಾಜ' ಎಂದು ರಶೀದ್ ಖಾನ್ ಉತ್ತರಿಸಿದರು.

ಕೊಹ್ಲಿ ಮತ್ತು ಬಾಬರ್ ಬಗ್ಗೆ ರಶೀದ್ ಖಾನ್ ಹೇಳಿದ್ದಿಷ್ಟು
ಇದೇ ರೀತಿ ವಿರಾಟ್ ಕೊಹ್ಲಿ ಬಗ್ಗೆ ಒಂದು ಪದದಲ್ಲಿ ಏನಾದರೂ ಹೇಳಿ ಎಂದು ಕೇಳಿದ ಅಭಿಮಾನಿಗೆ ಉತ್ತರಿಸಿದ ರಶೀದ್ ಖಾನ್ 'ವಿರಾಟ್ ಕೊಹ್ಲಿ ಕಿಂಗ್' ಎಂದು ಹೇಳಿದರು. ಹಾಗೆಯೇ ಬಾಬರ್ ಅಜಮ್ 'ಪ್ಯೂರ್ ಕ್ಲಾಸ್' ಎಂದು ರಶೀದ್ ಖಾನ್ ಉತ್ತರಿಸಿದರು.

ಎಬಿ ಡಿವಿಲಿಯರ್ಸ್ ಮತ್ತು ಸಚಿನ್ ಬಗ್ಗೆ ಕೂಡ ಚರ್ಚೆ
ಈ ಪ್ರಶ್ನೋತ್ತರದ ಚರ್ಚೆಯಲ್ಲಿ ರಶೀದ್ ಖಾನ್ ಎಬಿ ಡಿವಿಲಿಯರ್ಸ್ ಮತ್ತು ಸಚಿನ್ ಬಗ್ಗೆ ಕೂಡ ಉತ್ತರಿಸಿದ್ದಾರೆ. ಯಾವ ಹಿರಿಯ ಬ್ಯಾಟ್ಸ್‌ಮನ್‌ಗೆ ಬೌಲಿಂಗ್ ಮಾಡಲು ಇಚ್ಛಿಸುತ್ತೀರ ಎಂದು ಕೇಳಿದ ಅಭಿಮಾನಿಗೆ 'ಸಚಿನ್ ತೆಂಡೂಲ್ಕರ್' ಎಂದು ರಶೀದ್ ಖಾನ್ ಉತ್ತರಿಸಿದರು. ಹಾಗೆಯೇ ಎಬಿ ಡಿವಿಲಿಯರ್ಸ್ ಬಗ್ಗೆ ಒಂದು ಪದದಲ್ಲಿ ಉತ್ತರಿಸಿ ಎಂದು ಕೇಳಿದ ಅಭಿಮಾನಿಗೆ 'ಮಿಸ್ಟರ್ 360' ಎಂದು ರಶೀದ್ ಖಾನ್ ತಿಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications