ಧೋನಿ ಯಶಸ್ವಿ ನಾಯಕತ್ವದ ಹಿಂದೆ ಇದೆ ಆ ಆಟಗಾರನ ನಿರಂತರ ಸಲಹೆ; ಸತ್ಯಾಂಶ ಬಿಚ್ಚಿಟ್ಟ ರುತುರಾಜ್ ಗಾಯಕ್ವಾಡ್

IPL ನಲ್ಲಿ Dhoni ಸಲಹೆ ಪಡೆಯೋದು ಇವರಿಂದ ಮಾತ್ರ | Oneindia Kannada

ಎಂಎಸ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ ಮಾತ್ರವಲ್ಲದೆ ಟೀಮ್ ಇಂಡಿಯಾವನ್ನು ಕೂಡ ಹಲವು ವರ್ಷಗಳ ಕಾಲ ಯಶಸ್ವಿಯಾಗಿ ಮುನ್ನಡೆಸಿದ ನಾಯಕ. ಟೀಮ್ ಇಂಡಿಯಾ ಕನಸಿನ ಹಲವಾರು ಐಸಿಸಿ ಟ್ರೋಫಿಗಳನ್ನು ಧೋನಿ ನಾಯಕತ್ವದಲ್ಲಿ ಗೆದ್ದಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಷಯವೇ. ಇನ್ನು ಐಪಿಎಲ್ ವಿಚಾರಕ್ಕೆ ಬಂದರೆ ಎಂಎಸ್ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ದೊಡ್ಡ ಮಟ್ಟದ ಯಶಸ್ಸನ್ನು ಗಳಿಸಿದೆ.

ಐಪಿಎಲ್ 2022ರ ಹರಾಜಿನಲ್ಲಿ ಚೆನ್ನೈ ಉಳಿಸಿಕೊಳ್ಳಬಹುದಾದ ಆಟಗಾರರು

ಐಪಿಎಲ್ ಇತಿಹಾಸದಲ್ಲಿ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ 3 ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಐಪಿಎಲ್ ಆರಂಭವಾದಾಗಿನಿಂದಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡ ಎಂಎಸ್ ಧೋನಿ ನಾಯಕತ್ವದಲ್ಲಿಯೇ ಆಡುತ್ತಾ ಬಂದಿದೆ. ಎಂಎಸ್ ಧೋನಿ ಏಕಾಂಗಿಯಾಗಿ ಚೆನ್ನೈ ತಂಡದ ನಾಯಕತ್ವವನ್ನು ನಿಭಾಯಿಸುತ್ತಿದ್ದು ಯಾರ ಸಲಹೆಯನ್ನೂ ಸಹ ಪಡೆಯುತ್ತಿಲ್ಲ ಎಂದೇ ಹಲವಾರು ಮಂದಿ ಹೇಳಿದ್ದರು. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ರುತುರಾಜ್ ಗಾಯಕ್ವಾಡ್ ಸತ್ಯಾಂಶವನ್ನು ತೆರೆದಿಟ್ಟಿದ್ದಾರೆ.

ಐಪಿಎಲ್ 2022ರ ಹರಾಜಿನಲ್ಲಿ ಆರ್‌ಸಿಬಿ ಉಳಿಸಿಕೊಳ್ಳಬಹುದಾದ ಆಟಗಾರರು

ಹೌದು ರುತುರಾಜ್ ಗಾಯಕ್ವಾಡ್ ನೀಡಿರುವ ಈ ಹೇಳಿಕೆ ಇದೀಗ ಎಲ್ಲರನ್ನು ಆಶ್ಚರ್ಯಕ್ಕೆ ಒಳಗಾಗುವಂತೆ ಮಾಡಿದೆ. ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ ಬೇರೆ ಆಟಗಾರನಿಂದ ಸಲಹೆಯನ್ನು ಪಡೆಯುತ್ತಾರಾ ಎಂದು ಅಭಿಮಾನಿಗಳಲ್ಲಿ ಪ್ರಶ್ನೆ ಮೂಡಿದೆ. ಅಷ್ಟಕ್ಕೂ ಎಂಎಸ್ ಧೋನಿ ಸಲಹೆಗಳನ್ನು ಪಡೆದಿರುವುದು ಯಾವ ಆಟಗಾರನಿಂದ ಗೊತ್ತಾ? ರುತುರಾಜ್ ಗಾಯಕ್ವಾಡ್ ಹೇಳಿದ್ದೇನು? ಎಂಬ ಪ್ರಶ್ನೆಗಳಿಗೆ ಉತ್ತರ ಮುಂದೆ ಇದೆ ನೋಡಿ..

ಎಂಎಸ್ ಧೋನಿಗೆ ಫಾಫ್ ಡು ಪ್ಲೆಸಿಸ್ ಸಲಹೆ

ಎಂಎಸ್ ಧೋನಿಗೆ ಫಾಫ್ ಡು ಪ್ಲೆಸಿಸ್ ಸಲಹೆ

ಎಂ ಎಸ್ ಧೋನಿ ತಂಡದ ಸಹ ಆಟಗಾರನಿಂದ ಸಲಹೆಗಳನ್ನು ಪಡೆಯುತ್ತಿದ್ದರು ಎಂದು ಹೇಳಿರುವ ರುತುರಾಜ್ ಗಾಯಕ್ವಾಡ್ ಯಾವ ಆಟಗಾರನಿಂದ ಧೋನಿ ಸಲಹೆ ಪಡೆಯುತ್ತಿದ್ದರು ಎಂಬುದನ್ನು ಸಹ ಬಿಚ್ಚಿಟ್ಟಿದ್ದಾರೆ. ಹೌದು ಎಂಎಸ್ ಧೋನಿ ಚೆನ್ನೈ ತಂಡದ ಸಹ ಆಟಗಾರ ಫಾಫ್ ಡು ಪ್ಲೆಸಿಸ್ ಬಳಿ ಸಲಹೆಗಳನ್ನು ಪಡೆಯುತ್ತಿದ್ದರು ಎಂದು ರುತುರಾಜ್ ಗಾಯಕ್ವಾಡ್ ಹೇಳಿದ್ದಾರೆ.

ಗಂಟೆಗಟ್ಟಲೆ ಚರ್ಚಿಸುತ್ತಿದ್ದರು

ಗಂಟೆಗಟ್ಟಲೆ ಚರ್ಚಿಸುತ್ತಿದ್ದರು

ಎಂಎಸ್ ಧೋನಿ ಹಾಗೂ ಫಾಫ್ ಡು ಪ್ಲೆಸಿಸ್ ಕೇವಲ 5-10 ನಿಮಿಷಗಳ ಕಾಲ ಚರ್ಚಿಸಿ ಸುಮ್ಮನಾಗುತ್ತಿರಲಿಲ್ಲ, ಡ್ರೆಸ್ಸಿಂಗ್ ರೂಮಿನಲ್ಲಿ ಸುಮಾರು ಎರಡು ಗಂಟೆಗಳ ಕಾಲ ಇಬ್ಬರು ಮಾತನಾಡುತ್ತಿದ್ದರು. ಅಷ್ಟೇ ಅಲ್ಲದೆ ಅಭ್ಯಾಸದ ವೇಳೆ ಕೂಡ ಇಬ್ಬರೂ ಸಾಕಷ್ಟು ವಿಷಯಗಳನ್ನು ಚರ್ಚಿಸುತ್ತಿದ್ದರು ಎಂದು ರುತುರಾಜ್ ಗಾಯಕ್ವಾಡ್ ತಿಳಿಸಿದ್ದಾರೆ.

ಇಬ್ಬರ ನಡುವೆ ಇದೆ ಉತ್ತಮ ಸ್ನೇಹ ಬಾಂಧವ್ಯ

ಇಬ್ಬರ ನಡುವೆ ಇದೆ ಉತ್ತಮ ಸ್ನೇಹ ಬಾಂಧವ್ಯ

ಫಾಫ್ ಡು ಪ್ಲೆಸಿಸ್ 2011ರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸದಸ್ಯನಾಗಿದ್ದು ನಾಯಕ ಎಂಎಸ್ ಧೋನಿ ಜೊತೆ ಹಿಂದಿನಿಂದಲೂ ಉತ್ತಮ ಸ್ನೇಹ ಬಾಂಧವ್ಯವನ್ನು ಹೊಂದಿದ್ದಾರೆ. ಇಬ್ಬರೂ ಒಬ್ಬರನ್ನೊಬ್ಬರು ತುಂಬ ಗೌರವದಿಂದ ಕಾಣುತ್ತಾರೆ ಹಾಗೂ ಪಂದ್ಯಗಳ ಕುರಿತು ಹೆಚ್ಚಿನ ಚರ್ಚೆಗಳನ್ನು ಮಾಡುತ್ತಾರೆ ಎಂದು ರುತುರಾಜ್ ಗಾಯಕ್ವಾಡ್ ಹೇಳಿಕೊಂಡಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, June 4, 2021, 14:40 [IST]
Other articles published on Jun 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X