For Quick Alerts
ALLOW NOTIFICATIONS  
For Daily Alerts
 

Rashid Khan: ಗುಜರಾತ್ ಟೈಟಾನ್ಸ್ ತಂಡದ ಚುಕ್ಕಾಣಿ ಹಿಡಿಯುತ್ತಾರಾ ಆಫ್ಗನ್ ಪ್ಲೇಯರ್‌?

ತಾನು ಐಪಿಎಲ್ ಗೆ ಪದಾರ್ಪಣೆ ಮಾಡಿದ್ದ ಮೊದಲ ಪ್ರಯತ್ನದಲ್ಲೇ ಅಮೋಘ ಪ್ರದರ್ಶನ ನೀಡಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದ್ದ ಗುಜರಾತ್‌ ಟೈಟಾನ್ಸ್‌, ಕಳೆದ ಬಾರಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿತ್ತು. ಹುಡುಕುತ್ತಾ ಹೋದರೆ ಇದಕ್ಕೆ ನೂರು ಕಾರಣಗಳು ಸಿಗುತ್ತವೆ. ಈ ವೇಳೆ ಎಲ್ಲರ ಕಣ್ಣಿಗೆ ಕಾಣುವ ನ್ಯೂನತೆ ಅಂದರೆ ನಾಯಕತ್ವದ ಕೊರತೆ. ಗುಜರಾತ್‌ ತಂಡಕ್ಕೆ ಚಾಂಪಿಯನ್‌ ಪಟ್ಟವನ್ನು ತೊಡಿಸಿದ್ದ ಹಾರ್ದಿಕ್‌ ಪಾಂಡ್ಯ, 2024ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡ ಬಳಿಕ, ಟೈಟಾನ್ಸ್ ತಂಡವನ್ನು ಶುಭಮನ್‌ ಗಿಲ್‌ ಮುನ್ನಡೆಸಿದರು.

2024ರಲ್ಲಿ ಶುಭಮನ್‌ ಗಿಲ್‌ ಮುಂದಾಳತ್ವದಲ್ಲಿ ಗುಜರಾತ್ ಟೈಟಾನ್ಸ್ ತಂಡ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿತ್ತು. ಹೀಗಾಗಿ ಗುಜರಾತ್‌ ಟೈಟಾನ್ಸ್ ತಂಡದಲ್ಲಿ ನಾಯಕತ್ವದ ಬದಲಾವಣೆ ಆಗುವ ಸೂಚನೆ ಕಂಡು ಬಂದಿತ್ತು. ಆದರೆ ಗುಜರಾತ್ ಸೌದಿಯಲ್ಲಿ ನಡೆದ ಮೆಗಾ ಹರಾಜಿನಲ್ಲಿ ನಾಯಕತ್ವ ಗುಣಗಳಿರುವ ಆಟಗಾರರನ್ನು ಖರೀದಿ ಮಾಡಲಿಲ್ಲ. ಹೀಗಾಗಿ ಶುಭಮನ್‌ ಗಿಲ್‌ ಅವರೇ ನಾಯಕರಾಗಿ ಮುಂದೆ ವರೆಯುತ್ತಾರೆ ಎಂಬ ಮಾತುಗಳು ಸಹ ಕೇಳಿ ಬಂದಿದ್ದವು. ಆದರೆ ಹೊಸ ವರ್ಷದಂದು ಗುಜರಾತ್‌ ಹೊಸ ಅಪ್‌ಡೇಟ್‌ ನೀಡಿದ್ದು, ನಾಯಕತ್ವದ ಬದಲಾವಣೆಯ ಸೂಚನೆ ನೀಡಿದೆ.

Rashid Khan Hinted to Take Over Gujarat Titans Captaincy for IPL 2025

ನೂತನ ನಾಯಕ ಯಾರು?

ಐಪಿಎಲ್ 2025 ರ ಮೊದಲು, ಶುಭಮನ್‌ ಗಿಲ್ ಬದಲಿಗೆ ಅಫ್ಘಾನಿಸ್ತಾನದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಅವರನ್ನು ತಂಡದ ಚುಕ್ಕಾಣಿ ಹಿಡಿಯುವ ಸಾಧ್ಯತೆ ಇದೆ. ಈ ಬಗ್ಗೆ ಗುಜರಾತ್‌ ಮ್ಯಾನೇಜ್ಮೆಂಟ್‌ ಹೊಸ ಅಪ್‌ಡೇಟ್‌ನ್ನು ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದೆ.

ಗುಜರಾತ್ ಟೈಟಾನ್ಸ್‌ ಅತಿ ಹೆಚ್ಚು ಬೆಲೆಗೆ ಉಳಿಸಿಕೊಂಡಿತ್ತು. ರಶೀದ್ ಅವರಿಗೆ 18 ಕೋಟಿ ರೂ. ನೀಡಿ ಉಳಿಸಿಕೊಂಡಿತ್ತು. ಕಳೆದ ಋತುವಿನಲ್ಲಿ ನಾಯಕರಾಗಿದ್ದ ಶುಭಮನ್ ಗಿಲ್ ಅವರನ್ನು ಟೈಟಾನ್ಸ್ 16.50 ಕೋಟಿ ರೂ.ಗೆ ನೀಡಲಾಗಿತ್ತು. ಆಗಲೇ ನಾಯಕತ್ವದ ಬದಲಾವಣೆಯ ಸೂಚನೆ ಸಿಕ್ಕಿತ್ತು.

Rashid Khan Hinted to Take Over Gujarat Titans Captaincy for IPL 2025

ವೈರಲ್‌ ಪೋಸ್ಟ್‌ ಹಿಂದಿನ ಗುಟ್ಟೇನು?

ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಗುಜರಾತ್‌ ರಾಶೀದ್ ಖಾನ್‌ ಅವರ ಫೋಟೋ ಹಾಕಿ ಹಲವು ವಿಷಯಗಳನ್ನು ಹಂಚಿಕೊಂಡಿದೆ. ಈ ಪೋಸ್ಟ್‌ನಲ್ಲಿ ಗಮನಿಸಬೇಕಾದ ವಿಷಯವೆಂದರೆ ತಂಡವು ರಶೀದ್ ಖಾನ್ ಅವರ 19 ನಂಬರ್ ಜೆರ್ಸಿಯ ಚಿತ್ರವನ್ನು ಹಂಚಿಕೊಂಡಿದೆ. ಅಂದಿನಿಂದ ರಶೀದ್ ಖಾನ್ ನಾಯಕನಾಗುವ ಚರ್ಚೆ ತೀವ್ರಗೊಂಡಿದೆ.

ಗುಜರಾತ್‌ ತಂಡವನ್ನು ಮೊದಲ ಆವೃತ್ತಿಯಲ್ಲಿ ಹಾರ್ದಿಕ್ ಪಾಂಡ್ಯ ಮುನ್ನಡೆಸಿದ್ದರು. ಕೋಚ್‌ ಆಶೀಶ್ ನೆಹ್ರಾ ಹಾಗೂ ಹಾರ್ದಿಕ್‌ ಪಾಂಡ್ಯ ಅವರ ಕಾಂಬಿನೇಷನ್‌ ವರ್ಕ್ ಆಯಿತು. ಎರಡನೇ ಆವೃತ್ತಿಯಲ್ಲಿ ಸ್ಥಿರ ಪ್ರದರ್ಶನ ನೀಡಿತು. 2023 ರಲ್ಲೂ ಗುಜರಾತ್ ಫೈನಲ್ ತಲುಪಿತು. ಈ ವೇಳೆ ಫೈನಲ್‌ನಲ್ಲಿ ಸೋಲು ಕಂಡಿತ್ತು. ಆದರೆ 2024ರಲ್ಲಿ ಶುಭಮನ್‌ ಗಿಲ್‌ ಮುಂದಾಳತ್ವದಲ್ಲಿ ತಂಡ ಪ್ಲೇ ಆಫ್‌ ಸಹ ಪ್ರವೇಶಿಸಲಿಲ್ಲ. ಹೀಗಾಗಿ ನಾಯಕತ್ವದ ಬದಲಾವಣೆಯ ಚರ್ಚೆಗಳು ಮುನ್ನೆಲೆಗೆ ಬಂದವು.

Story first published: Thursday, January 2, 2025, 7:01 [IST]
Other articles published on Jan 2, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+