For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನ್ ಸೂಪರ್‌ ಲೀಗ್‌: ರಶೀದ್ ಖಾನ್ ಜೊತೆ ಕನ್ನಡ ಹಾಡಿಗೆ ಹೆಜ್ಜೆ ಹಾಕಿದ ಪಾಕ್ ಕ್ರಿಕೆಟಿಗ

Rashid Khan imitates Allu Arjun Pushpa movies famous dance step

ದಕ್ಷಿಣ ಭಾರತ ಚಿತ್ರರಂಗದ ಚಿತ್ರಗಳ ಹಾಡುಗಳು ಹಾಗೂ ಸಂಭಾಷಣೆಗಳು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ಈ ಕ್ರೇಜ್ ಕೇವಲ ದಕ್ಷಿಣ ಭಾರತಕ್ಕೆ ಮಾತ್ರ ಸೀಮಿತವಾಗಿರದೇ ದೇಶದ ಗಡಿಯನ್ನೂ ದಾಟಿ ವಿಶ್ವದಾದ್ಯಂತ ವ್ಯಾಪಿಸುತ್ತಿದೆ. ಅದರಲ್ಲಿಯೂ ಇತ್ತೀಚೆಗಷ್ಟೇ ತೆರೆಕಂಡ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪಾ ಚಿತ್ರದ ಹಾಡುಗಳು ವಿಶ್ವದಾದ್ಯಂತ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ಚಿತ್ರದಲ್ಲಿನ ಅಲ್ಲು ಅರ್ಜುನ್ ಹಾಡಿನ ಹೆಜ್ಜೆಗಳು ಹಾಗೂ ಕೆಲ ಸಂಭಾಷಣೆಗಳಿಗೆ ವಿಡಿಯೋಗಳನ್ನು ಹಲವಾರು ಸೆಲೆಬ್ರಿಟಿಗಳು ಹಾಗೂ ಕ್ರಿಕೆಟಿಗರು ಹೆಚ್ಚಿನ ಪ್ರಮಾಣದಲ್ಲಿ ಮಾಡುತ್ತಿದ್ದಾರೆ.

ಮೊದಲಿಗೆ ತೆಲುಗು ಚಿತ್ರಗಳ ಸಂಭಾಷಣೆ ಹಾಗೂ ಹಾಡುಗಳಿಗೆ ವಿಡಿಯೋಗಳನ್ನು ಮಾಡುತ್ತಿದ್ದ ಡೇವಿಡ್ ವಾರ್ನರ್ ತೆಲುಗು ನಟ ಅಲ್ಲು ಅರ್ಜುನ್ ಅಭಿನಯದ ಅಲಾ ವೈಕುಂಠಪುರಮುಲೋ ಚಿತ್ರದ ಬುಟ್ಟ ಬೊಮ್ಮ ಹಾಡಿಗೆ ತನ್ನ ಪತ್ನಿ ಜತೆ ನೃತ್ಯವನ್ನು ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದರು. ಹೀಗೆ ಡೇವಿಡ್ ವಾರ್ನರ್ ಮಾಡಿದ್ದ ಈ ವಿಡಿಯೋಗೆ ಭಾರತ ಕ್ರಿಕೆಟ್ ಪ್ರೇಕ್ಷಕರು ಹಾಗೂ ನೆಟ್ಟಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗತೊಡಗಿದ ನಂತರ ಡೇವಿಡ್ ವಾರ್ನರ್ ಮತ್ತಷ್ಟು ತೆಲುಗು ಚಿತ್ರಗಳ ಹಾಡು ಮತ್ತು ದೃಶ್ಯಗಳಿಗೆ ವಿಡಿಯೋ ಮಾಡಲು ಆರಂಭಿಸಿದರು.

ಹೀಗೆ ಡೇವಿಡ್ ವಾರ್ನರ್ ರೀತಿಯ ವಿಶ್ವದ ಹಲವಾರು ಕ್ರಿಕೆಟಿಗರು ಇದೀಗ ಪುಷ್ಪಾ ಚಿತ್ರದ ದೃಶ್ಯಗಳು ಹಾಗೂ ಹಾಡುಗಳಿಗೆ ವಿಡಿಯೋಗಳನ್ನು ಮಾಡುತ್ತಿದ್ದಾರೆ. ಶಿಖರ್ ಧವನ್, ಡ್ವೇನ್ ಬ್ರಾವೊ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಸೇರಿದಂತೆ ವಿಶ್ವದ ಹಲವಾರು ಕ್ರಿಕೆಟಿಗರು ಈಗಾಗಲೇ ಆ ವಿಡಿಯೋಗಳಿಗೆ ಹೆಜ್ಜೆಗಳನ್ನು ಹಾಕಿದ್ದಾರೆ. ಇನ್ನು ಪುಷ್ಪ ಚಿತ್ರದ ದೃಶ್ಯಗಳ ಅನುಕರಣೆಗಳು ಸದ್ಯ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಬಾಂಗ್ಲಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ಕೂಡ ಕಂಡುಬಂದವು.

ಇದಾದ ಬೆನ್ನಲ್ಲೇ ಇದೀಗ ಸದ್ಯ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಎಂಟನೇ ಆವೃತ್ತಿಯ ಪಾಕಿಸ್ತಾನ್ ಸೂಪರ್ ಲೀಗ್ ಟೂರ್ನಿಯಲ್ಲಿಯೂ ಕೂಡ ಪುಷ್ಟ ಡಾನ್ಸ್ ಕ್ರೇಜ್ ಮುಂದುವರಿದಿದೆ. ಲಾಹೋರ್ ಕ್ವಾಲಾಂಡರ್ಸ್ ತಂಡದ ಆಟಗಾರನಾದ ಲೆಗ್ ಸ್ಪಿನ್ನರ್ ರಶೀದ್ ಖಾನ್ ತಂಡದ ಮತ್ತೋರ್ವ ಆಟಗಾರನಾದ ಹ್ಯಾರಿಸ್ ರೌಫ್ ಜತೆಗೆ ಪುಷ್ಪ ಚಿತ್ರದ ಶ್ರೀವಲ್ಲಿ ಹಾಡಿಗೆ ಹೆಜ್ಜೆ ಹಾಕಿದ್ದು, ಆ ವಿಡಿಯೋವನ್ನು ತಮ್ಮ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಾಗೂ ಇತ್ತೀಚೆಗಷ್ಟೇ ಹಾರ್ದಿಕ್ ಪಾಂಡ್ಯ ಕೂಡ ತಮ್ಮ ಅಜ್ಜಿ ಜೊತೆ ಇದೇ ಹಾಡಿಗೆ ಹೆಜ್ಜೆಯನ್ನು ಹಾಕುವುದರ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದರು.

ಇನ್ನು ರಶೀದ್ ಖಾನ್ ಮತ್ತು ಹ್ಯಾರಿಸ್ ರೌಫ್ ಪುಷ್ಪಾ ಚಿತ್ರದ ಕನ್ನಡ ಅವತರಣಿಕೆಯ ಹಾಡಿಗೆ ಹೆಜ್ಜೆ ಹಾಕಿರುವುದು ವಿಶೇಷವಾಗಿದೆ.

Story first published: Tuesday, February 1, 2022, 9:48 [IST]
Other articles published on Feb 1, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+