ಜಿಂಬಾಬ್ವೆ ವಿರುದ್ಧದ ಆರಂಭಿಕ ಟೆಸ್ಟ್‌ಗೆ ರಶೀದ್ ಖಾನ್ ಮಿಸ್?

ಕಾಬೂಲ್: ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಸ್ಟಾರ್ ಆಲ್ ರೌಂಡರ್ ರಶೀದ್ ಖಾನ್ ಜಿಂಬಾಬ್ವೆ ವಿರುದ್ಧದ ಮೊದಲನೇ ಟೆಸ್ಟ್ ಅನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. ಅಫ್ಘಾನಿಸ್ತಾನ್ vs ಜಿಂಬಾಬ್ವೆ ಆರಂಭಿಕ ಟೆಸ್ಟ್ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಬುಧಾಬಿಯಲ್ಲಿರುವ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ಮಂಗಳವಾರ (ಮಾರ್ಚ್ 2) ಆರಂಭಗೊಳ್ಳಲಿದೆ.
ಇಎಸ್‌ಪಿಎನ್ ಕ್ರಿಕ್ ಇನ್ಫೋ ವರದಿಯ ಪ್ರಕಾರ, ಕೈ ಬೆರಳಿಗೆ ಗಾಯ ಮಾಡಿಕೊಂಡಿರುವ ರಶೀದ್ ಖಾನ್ ಆರಂಭಿಕ ಟೆಸ್ಟ್‌ನಲ್ಲಿ ಆಡುವ ಸಾಧ್ಯತೆ ಕಡಿಮೆ. ಆದರೆ ಈ ಬಗ್ಗೆ ಅಫ್ಘಾನಿಸ್ತಾನ ಕ್ರಿಕೆಟ್ ತಂಡ ಅಂತಿಮ ನಿರ್ಧಾರ ಪ್ರಕಟಿಸಿಲ್ಲ.
'ರಶೀದ್ ಖಾನ್ ಯುಎಇಯ ಸಂಬಂಧಿತ ಆರೋಗ್ಯ ಅಧಿಕಾರಿಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಫೆಬ್ರವರಿ 28ರಂದು ಅವರ ಗಾಯದ ಮರುಮೌಲ್ಯಮಾಪನದ ನಂತರ ಮೊದಲ ಟೆಸ್ಟ್‌ನಲ್ಲಿ ಅವರನ್ನು ಸೇರ್ಪಡೆಗೊಳಿಸುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು,' ಎಂದು ಅಫ್ಘಾನ್ ಈ ಹಿಂದೆ ಹೇಳಿಕೆ ನೀಡಿತ್ತು.
ಜಿಂಬಾಬ್ವೆ ವಿರುದ್ಧದ ಮೊದಲನೇ ಟೆಸ್ಟ್‌ಗೆ ಅಫ್ಘಾನ್ ತಂಡ
ಅಸ್ಗರ್ ಅಫಘಾನ್ (ಸಿ), ಇಬ್ರಾಹಿಂ ಖದ್ರಾನ್, ರಹಮತ್ ಶಾ, ಜಾವೇದ್ ಅಹ್ಮದಿ, ಹಶ್ಮತುಲ್ಲಾ ಶಾಹಿದಿ, ಅಫ್ಸರ್ ಝಝಾಯ್, ನಾಸಿರ್ ಜಮಾಲ್, ಅಬ್ದುಲ್ ಮಲಿಕ್, ಮುನೀರ್ ಅಹ್ಮದ್ ಕಾಕರ್, ಶಾಹಿದುಲ್ಲಾ ಕಮಲ್, ಬಹೀರ್ ಶಾ ಮೊಹಬೂಬ್, ರಶೀದ್ ಖಾನ್, ಅಮೀರ್ ಹಮ್‌ಝಾ, ಫಝಲ್ ಹಕ್ ಫಾರೂಕ್, ಸಾಯೆದ್ ಅಹ್ಮದ್ ಶಿರ್ಜಾದ್, ಸಲೀಮ್ ಸಫಿ, ವಫಾದರ್ ಮೊಮಂಡ್, ಜಿಯಾ ಉರ್ ರಹಮಾನ್ ಅಕ್ಬರ್, ಯಾಮಿನ್ ಅಹ್ಮದ್ಜೈ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications