Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಡೆಲ್ಲಿ vs ಹೈದರಾಬಾದ್ ಪಂದ್ಯಕ್ಕೂ ಮೊದಲಿನ ರಿಷಬ್-ರಶೀದ್ ಸಂಭಾಷಣೆ ಸೆರೆ!

Rashid Khan tickles Rishabh Pant, camaraderie leaves Twitter in splits

ನವದೆಹಲಿ, ಏಪ್ರಿಲ್ 5: ನವದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಸನ್ ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ 5 ವಿಕೆಟ್ ಸೋಲನುಭವಿಸಿತ್ತು. ಇತ್ತಂಡಗಳ ಈ ಪಂದ್ಯಕ್ಕೂ ಮುನ್ನ ರಿಷಬ್ ಪಂತ್ ಮತ್ತು ರಶೀದ್ ಖಾನ್ ಮಾತನಾಡುತ್ತಿರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.

ಗುರುವಾರ (ಏಪ್ರಿಲ್ 5) ನಡೆದ ಐಪಿಎಲ್ 16ನೇ ಪಂದ್ಯ ಆರಂಭಕ್ಕೂ ಮುನ್ನ ಡೆಲ್ಲಿ ಬ್ಯಾಟ್ಸ್ಮನ್ ಕಮ್ ವಿಕೆಟ್ ಕೀಪರ್ ಪಂತ್ ಮತ್ತು ಹೈದರಾಬಾದ್ ಸ್ಪಿನ್ನರ್ ರಶೀದ್ ಖಾನ್ ತರ್ಲೆ-ತಮಾಷೆಯಲ್ಲಿ ತೊಡಗಿದ್ದ ವಿಡಿಯೋ ಸೆರೆಯಾಗಿತ್ತು. ಇದನ್ನು ಇಂಡಿಯನ್ ಪ್ರೀಮಿಯರ್ ಲೀಗ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದೆ.

ಎದುರಾಳಿಗಳಾಗಿ ಮೈದಾನಕ್ಕಿಳಿದಿದ್ದ ಆಟಗಾರರು ತಮಾಷೆಯಲ್ಲಿ ತೊಡಗಿದ್ದಾಗ ಅವರ ನಡುವಿನ ಆತ್ಮೀಯ ಭಾವಕ್ಕೆ ಕ್ರಿಕೆಟ್ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂದ್ಹಾಗೆ ಐಪಿಎಲ್ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋದೊಂದಿಗೆ 'ಈ ಸಂಭಾಷಣೆಯನ್ನು ನೀವು ಏನೆಂದು ಪರಿಗಣಿಸುತ್ತೀರಿ?' ಎಂಬ ಸಾಲನ್ನೂ ಸೇರಿಸಲಾಗಿದೆ.

Story first published: Friday, April 5, 2019, 18:41 [IST]
Other articles published on Apr 5, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+