unsung hero: ಗುಜರಾತ್ ಜಯದಲ್ಲಿ ಮಿಂಚಿದ ಸ್ಪಿನ್ ಬೌಲರ್
ಲಕ್ನೋ ಸೂಪರ್ ಜೈಂಟ್ಸ್ ತಂಡ ಭರ್ಜರಿ ಪ್ರದರ್ಶನ ನೀಡಿ ಜಯ ದಾಖಲಿಸಿದೆ. ಐಪಿಎಲ್‌ನಲ್ಲಿ ಮಿಂಚಿ ಹೆಸರು ಮಾಡುವ ಆಸೆ ಹಲವು ಆಟಗಾರರಿಗೆ ಇರುತ್ತಿದೆ. ಈ ಸಾಲಿನಲ್ಲಿ ಹಲವು ಆಟಗಾರರು ತಮ್ಮ ಪ್ರಯತ್ನ ಮಾಡುತ್ತಾರೆ. ಎಲ್‌ಎಸ್‌ಜಿ ತಂಡ ಸಹ ಗುಜರಾತ್ ಟೈಟಾನ್ಸ್ ತಂಡದ ಗೆಲುವಿನಲ್ಲಿ ನಿಕೋಲಸ್ ಪೂರನ್ ಹಾಗೂ ಎಡೇನ್ ಮಾರ್ಕ್ರಮ್ ಮಿಂಚಿದರು. ಆದರೆ ಈ ಪಂದ್ಯದಲ್ಲಿ ಎಲೆ ಮರೆಯ ಕಾಯಿಯಂತೆ ಮಿಂಚಿದ ಆಟಗಾರ ಎಲ್‌ಎಸ್‌ಜಿ ಜಯದಲ್ಲಿ ಮಿಂಚಿದರು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟನ್ಸ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 180 ರನ್ ರನ್ ಸೇರಿಸಿದರು. ಗುರಿಯನ್ನು ಬೆನ್ನಟ್ಟಿ ಲಕ್ನೋ ಸೂಪರ್ ಜೈಂಟ್ಸ್ ತಂಡ 19.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 186 ರನ್ ಬಾರಿಸಿ ಗೆಲುವಿನ ಓಟವನ್ನು ಮುಂದುವರೆಸಿತು. ಈ ಜಯದಲ್ಲಿ ಮಿಂಚಿದ್ದು ಲಕ್ನೋ ತಂಡದ ಸ್ಪಿನ್ ಬೌಲರ್.

ಲಕ್ನೋ ತಂಡದ ಪರ ದಿಗ್ವೇಶ್ ಠಾಠಿ 7.50ರ ಸರಾಸರಿಯಲ್ಲಿ ರನ್ ನೀಡಿ ಒಂದು ವಿಕೆಟ್ ಪಡೆದರು. ಆದರೆ ಗುಜರಾತ್ ಟೈಟನ್ಸ್ ತಂಡಕ್ಕೆ ಕಂಠವಾಗಿದ್ದು ಕಾಡಿದ್ದು, ಲೆಗ್ ಸ್ಪಿನ್ ಬೌಲರ್ ರವಿ ಬಿಷ್ಣೋಯಿ. ಇವರು ಅಮೋಘ ಬೌಲಿಂಗ್ ಪ್ರದರ್ಶನ ನೀಡಿ 2 ವಿಕೆಟ್ ಪಡೆದರು. ಇವರು ವಿಕೆಟ್ ಪಡೆದಿದ್ದು ಈ ಲೀಗ್ನಲ್ಲಿ ಸೂಪರ್ ಫಾರ್ಮ್‌ನಲ್ಲಿರುವ ಸಾಯಿ ಸುದರ್ಶನ್ ಹಾಗೂ ವಾಶಿಂಗ್ಟನ್ ಸುಂದರ್ ವಿಕೆಟ್ ಪಡೆದು ಅಬ್ಬರಿಸಿದರು. ಇವರು 36 ರನ್ ನೀಡಿ 2 ವಿಕೆಟ್ ಪಡೆದರು.
ಸುದರ್ಶನ್ ಆಟಕ್ಕೆ ಬ್ರೇಕ್
ಲೀಗ್‌ನಲ್ಲಿ ಅಮೋಘ ಫಾರ್ಮ್‌ನಲ್ಲಿರುವ ಸಾಯಿ ಸುದರ್ಶನ್ ಅವರಿಗೆ ರವಿ ಬಿಷ್ಣೋಯಿ ಬ್ರೇಕ್ ಹಾಕಿದರು. ಸುದರ್ಶನ್ ಅವರಿಗೆ ಹಾಕಿದ ಚೆಂಡು ಸ್ಕಿಡ್ ಆಗಿದ್ದು ಇದನ್ನು ಕವರ್ ಮೇಲಿನಿಂದ ಬಿಗ್ ಹಿಟ್ ಬಾರಿಸಲು ಹೋಗಿ ನಿಕೋಲಸ್ ಪೂರನ್‌ಗೆ ಕ್ಯಾಚ್ ನೀಡಿದರು.
ಎಲ್‌ಎಸ್‌ಜಿ ವಿರುದ್ಧದ ಪಂದ್ಯದಲ್ಲಿ ಆಡುವ ಅವಕಾಶವನ್ನು ಪಡೆದ ವಾಶಿಂಗ್ಟನ್ ಸುಂದರ್ ಅವರ ಆಟಕ್ಕೆ ರವಿ ಬಿಷ್ಣೋಯಿ ಬ್ರೇಕ್ ಹಾಕಿದರು. ಈ ವೇಳೆ ರವಿ ಹಾಕಿದ ಚೆಂಡನ್ನು ಆಡಲು ಹೋದ ವಾಶಿಂಗ್ಟನ್ ಸುಂದರ್ ಅವರ ಬ್ಯಾಟ್‌ಗೆ ತಾಗಿದ ಚೆಂಡು ಸ್ಟಂಪ್‌ಗೆ ಬಡಿಯಿತು. ಈ ಎರಡೂ ವಿಕೆಟ್‌ಗಳು ನಿಜಕ್ಕೂ ಗುಜರಾತ್ ತಂಡದ ರನ್ ವೇಗಕ್ಕೆ ಕಡಿವಾಣ ಹಾಕಿತು. ಪರಿಣಾಮ ಎಲ್‌ಎಸ್‌ಜಿ ಸ್ಪರ್ಧಾತ್ಮಕ ಮೊತ್ತಕ್ಕೆ ಕಲೆ ಹಾಕುವಲ್ಲಿ ಸಫಲವಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications