'ಫ್ಲೈ ಟು ಫಿಟ್' ಸರ್ಟಿಫಿಕೇಟ್‌ಗೆ ಕಾಯುತ್ತಿದ್ದಾರೆ ರವಿ ಶಾಸ್ತ್ರಿ, ಅರುಣ್, ಶ್ರೀಧರ್

ಲಂಡನ್: ಟೀಮ್ ಇಂಡಿಯಾದ ಮುಖ್ಯ ಕೋಚ್ ರವಿ ಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್ ಮತ್ತು ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಕೋವಿಡ್-19ನಿಂದ ಚೇತರಿಸಿಕೊಂಡಿದ್ದಾರೆ. ಇನ್ಮುಂದೆ ಅವರು ಫಿಟ್ ಟು ಫ್ಲೈ ಪ್ರಮಾಣ ಪತ್ರ ಪಡೆಯಬೇಕಿದೆ. ಪ್ರಮಾಣ ಪತ್ರ ದೊರೆತ ಬಳಿಕ ಮೂವರೂ ಭಾರತಕ್ಕೆ ವಾಪಸ್ಸಾಗಬಹುದಾಗಿದೆ.
ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್‌ಗೆ ಪ್ರವಾಸ ಹೋಗಿದ್ದಾಗ ಕೋಚಿಂಗ್ ಮತ್ತು ಸಿಬ್ಬಂದಿ ಬಳಗದಲ್ಲಿ ರವಿ ಶಾಸ್ತ್ರಿ, ಭರತ್ ಅರುಣ್ ಮತ್ತು ಆರ್ ಶ್ರೀಧರ್ ತೆರಳಿದ್ದರು.
ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನಾಲ್ಕನೇ ಟೆಸ್ಟ್ ಸರಣಿ ವೇಳೆ ಶಾಸ್ತ್ರಿ, ಭರತ್, ಶ್ರೀಧರ್ ಅಲ್ಲದೆ ಭಾರತದ ಇಬ್ಬರು ಫಿಸಿಯೋಗಳೂ ಕೂಡ ಕೋವಿಡ್ ಸೋಂಕಿಗೆ ತುತ್ತಾಗಿದ್ದರು. ಹೀಗಾಗಿ ನಾಲ್ಕನೇ ಟೆಸ್ಟ್ ವೇಳೆ ಈ ಮೂವರ ಸಹಾಯ ಭಾರತಕ್ಕೆ ದೊರೆತಿರಲಿಲ್ಲ. ಅಷ್ಟೇ ಅಲ್ಲ, ಐದನೇ ಟೆಸ್ಟ್ ಪಂದ್ಯದ ವೇಳೆ ಇಬ್ಬರು ಫಿಸಿಯೋಗಳೂ ಪಾಸಿಟಿವ್ ಬಂದಿದ್ದರಿಂದ ಐದನೇ ಟೆಸ್ಟ್ ಪಂದ್ಯವೇ ರದ್ದಾಗಿತ್ತು.
"ಶಾಸ್ತ್ರಿ, ಅರುಣ್, ಶ್ರೀಧರ್ ಮೂವರೂ ದೈಹಿಕವಾಗಿ ಕೋವಿಡ್-19ನಿಂದ ಚೇತರಿಸಿಕೊಂಡಿದ್ದಾರೆ. ಈಗವರು ಐಸೊಲೇಶನ್‌ನಿಂದ ಹೊರಗಿದ್ದಾರೆ," ಎಂದು ಬಿಸಿಸಿಐ ಮೂಲ ಮಾಹಿತಿ ನೀಡಿದೆ. ಐದನೇ ಟೆಸ್ಟ್ ಪಂದ್ಯ ರದ್ದಾದ ಮರು ದಿನವೇ ಭಾರತೀಯ ಎಲ್ಲಾ ಆಟಗಾರರು ಐಪಿಎಲ್ ಸಂಬಂಧ ಯುಎಇಗೆ ಬಂದಿದ್ದರು. ಶಾಸ್ತ್ರಿ, ಅರುಣ್, ಶ್ರೀಧರ್ ಇಂಗ್ಲೆಂಡ್‌ನಲ್ಲಿ ಉಳಿದುಕೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications