ವಿರಾಟ್ ಕೊಹ್ಲಿ-ಧೋನಿ ನಡುವಿನ ವ್ಯತ್ಯಾಸ: ನಾಯಕತ್ವದ ಗುಣಗಳ ಬಗ್ಗೆ ರವಿಶಾಸ್ತ್ರಿ ಅಭಿಪ್ರಾಯ

ಭಾರತದ ಮಾಜಿ ನಾಯಕ ಎಂ.ಎಸ್.ಧೋನಿ ಅವರು ಭಾರತೀಯ ಕ್ರಿಕೆಟ್ ತಂಡವನ್ನು ಮುನ್ನಡೆಸಿದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು. ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದ ಏಕೈಕ ನಾಯಕ ಅವರಾಗಿದ್ದಾರೆ.
2007 ಟಿ 20 ವಿಶ್ವಕಪ್, 2011 ಏಕದಿನ ವಿಶ್ವಕಪ್ ಮತ್ತು 2013 ಚಾಂಪಿಯನ್ಸ್ ಟ್ರೋಫಿ. ಇಷ್ಟಲ್ಲದೆ ಐಸಿಸಿ (ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್) ಟೆಸ್ಟ್ ಶ್ರೇಯಾಂಕದಲ್ಲಿ ಎಂಎಸ್ ಧೋನಿ ಟೀಮ್ ಇಂಡಿಯಾವನ್ನು ನಂ .1 ಸ್ಥಾನಕ್ಕೆ ಕೊಂಡೊಯ್ದ ಕೀರ್ತಿ ಹೊಂದಿದ್ದಾರೆ.

ಧೋನಿ ನಡೆದ ಹಾದಿಯಲ್ಲಿ ಕೊಹ್ಲಿ
ಮತ್ತೊಂದೆಡೆ ಹಾಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಕೂಡ ರಾಷ್ಟ್ರೀಯ ತಂಡದ ನಾಯಕತ್ವ ವಹಿಸುವಾಗ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಕೊಹ್ಲಿ ಇನ್ನೂ ಯಾವುದೇ ಐಸಿಸಿ ಟ್ರೋಫಿಯನ್ನು ಗೆದ್ದಿಲ್ಲ, ಆದರೆ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾದಲ್ಲಿ ನಡೆದ ಏಕದಿನ ಅಂತಾರಾಷ್ಟ್ರೀಯ ಸರಣಿಯನ್ನು ಮೊಟ್ಟ ಮೊದಲ ಬಾರಿಗೆ ಗೆಲ್ಲಿಸಿಕೊಟ್ಟ ಹೆಗ್ಗಳಿಕೆ ಇವರದ್ದಾಗಿದೆ.
ಏಕದಿನ ಸರಣಿ ಅಷ್ಟೇ ಅಲ್ಲದೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದ ಏಕೈಕ ಏಷ್ಯಾದ ನಾಯಕನಾಗಿ ದಾಖಲೆ ಬೆರದಿದ್ದಾರೆ.

ವಿರಾಟ್ ಮತ್ತು ಧೋನಿ ಇಬ್ಬರೂ ವಿರುದ್ಧ ಸ್ವಭಾವದವರು
ಹೌದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿರುದ್ಧ ಸ್ವಭಾವದವರು. ಎಂಎಸ್ ಕ್ರಿಕೆಟ್ ಮೈದಾನದಲ್ಲಿದ್ದಾಗ ಒತ್ತಡದ ಸಂದರ್ಭಗಳಲ್ಲಿಯೂ ಸಹ ಕೂಲ್ ಆಗಿರುತ್ತಾರೆ ಮತ್ತು ತಮ್ಮ ಭಾವನೆಗಳನ್ನು ಹೊರಹಾಕದೆ ಹಿಡಿತವನ್ನು ಉಳಿಸಿಕೊಳ್ಳುತ್ತಾರೆ.
ಮತ್ತೊಂದೆಡೆ ಕೊಹ್ಲಿ ಪಿಚ್‌ನಲ್ಲಿ ತನ್ನ ಆಕ್ರಮಣಾಕಾರಿ ಸ್ವಭಾವವನ್ನು ತೋರಿಸಲು ಇಷ್ಟಪಡುತ್ತಾರೆ. ಅವರೊಬ್ಬ ಆಕ್ರಮಣಕಾರಿ ನಾಯಕರಾಗಿದ್ದು, ತಮ್ಮ ಎದುರಾಳಿಗಳಿಗೆ ತಿರುಗೇಟು ನೀಡುವುದರಲ್ಲಿ ನಂಬಿಕೆ ಇಟ್ಟುಕೊಂಡಿದ್ದು ತಂಡದಿಂದ ನಿರ್ದಯತೆಯ ಪ್ರದರ್ಶನ ನಿರೀಕ್ಷಿಸುತ್ತಾರೆ.

ಟೀಮ್ ಇಂಡಿಯಾ ಕೋಚ್ ರವಿಶಾಸ್ತ್ರಿ ಅಭಿಪ್ರಾಯ
ಇತ್ತೀಚೆಗೆ, ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ಇಬ್ಬರು ಕ್ರಿಕೆಟಿಗರ ನಾಯಕತ್ವವನ್ನು ವಿಭಿನ್ನತೆಯನ್ನು ತಿಳಿಸಿದ್ದಾರೆ. ಟೈಮ್ಸ್ ನೌ ಜೊತೆ ಮಾತನಾಡಿದ ಮಾಜಿ ಭಾರತೀಯ ಕ್ರಿಕೆಟಿಗ ಇಬ್ಬರೂ ನಾಯಕರು ಯಶಸ್ವಿ ಎಂದು ಶ್ಲಾಘಿಸಿದರು ಮತ್ತು ಅವರ ಸ್ವಭಾವ ಮತ್ತು ವಿಧಾನದಲ್ಲಿ ವ್ಯತ್ಯಾಸಗಳನ್ನು ತಿಳಿಸಿದರು.
" ಒಬ್ಬ ಶಾಂತ ಮತ್ತು ಸಂಯೋಜಿತ, ಮತ್ತೊಬ್ಬರು ವಿರುದ್ಧ. ಧೋನಿ ಶಾಂತ ಕ್ರಿಕೆಟಿಗನಾದ್ರೆ, ವಿರಾಟ್ ಸ್ವಾಭಾವಿಕವಾಗಿ ಆಕ್ರಮಣಕಾರಿ. ಇಬ್ಬರೂ ಬಹಳ ಯಶಸ್ವಿಯಾಗಿದ್ದಾರೆ'' ಎಂದು ಶಾಸ್ತ್ರಿ ಹೇಳಿದರು.

10 ವರ್ಷಗಳಲ್ಲಿ ಮೊದಲ ಬಾರಿಗೆ ಲೀಗ್‌ನಲ್ಲೇ ಸಿಎಸ್‌ಕೆ ಔಟ್
ಪ್ರಸ್ತುತ, ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಯಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ 13 ನೇ ಆವೃತ್ತಿಯಲ್ಲಿ ಆಡುತ್ತಿದ್ದಾರೆ.
ಕೊಹ್ಲಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಅರ್ಹತೆ ಪಡೆಯುವ ಹಾದಿಯಲ್ಲಿದೆ ಮತ್ತು 12 ಪಂದ್ಯಗಳಲ್ಲಿ 14 ಅಂಕಗಳೊಂದಿಗೆ ಪಾಯಿಂಟ್ ಟೇಬಲ್‌ನಲ್ಲಿ ಎರಡನೇ ಸ್ಥಾನದಲ್ಲಿದೆ. ಆದರೆ ಎಂಎಸ್ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮೊದಲ ಬಾರಿಗೆ ಅರ್ಹತೆ ಪಡೆಯಲು ವಿಫಲವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications