ಏಷ್ಯಾ ಕಪ್‌ಗೆ ಭಾರತ ತಂಡವನ್ನು ಆಯ್ಕೆ ಮಾಡಿದ ತಜ್ಞರ ಸಮಿತಿ; ರಾಹುಲ್, ಅಯ್ಯರ್ ಹೊರಗೆ
2023ರ ಏಕದಿನ ವಿಶ್ವಕಪ್ ಪಂದ್ಯಾವಳಿ ಆರಂಭಕ್ಕೆ ಕೇವಲ ಒಂದು ತಿಂಗಳು ಮಾತ್ರ ಉಳಿದಿದೆ. ಭಾಗವಹಿಸುವ ಎಲ್ಲಾ ಹತ್ತು ತಂಡಗಳು ಐಸಿಸಿ ಟೂರ್ನಿಗಾಗಿ ತಮ್ಮ ತಂಡವನ್ನು ಅಂತಿಮಗೊಳಿಸುತ್ತಿವೆ.
ಕೆಲವು ತಂಡಗಳ ಆಟಗಾರರು ಇನ್ನೂ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಕ್ರಿಕೆಟ್ ಆಡಲು ಮೈದಾನಕ್ಕೆ ಹಿಂದಿರುಗುವ ಬಗ್ಗೆ ಕೆಲವು ಅನಿಶ್ಚಿತತೆ ಇದೆ. ಇನ್ನು ಭಾರತವು ತಮ್ಮ ತಂಡವನ್ನು ಪ್ರತಿಷ್ಠಿತ ಪಂದ್ಯಾವಳಿಗೆ ಅಂತಿಮಗೊಳಿಸುವ ಬಗ್ಗೆ ಸಾಕಷ್ಟು ಚಿಂತನೆ ನಡೆಸುತ್ತಿದೆ.

ಏಕದಿನ ವಿಶ್ವಕಪ್‌ಗೆ ಭಾರತದ ಅತ್ಯುತ್ತಮ ತಂಡದ ಬಗ್ಗೆ ವ್ಯಾಪಕ ಚರ್ಚೆಗಳ ನಡುವೆಯೇ, ಸ್ಟಾರ್ ಸ್ಪೋರ್ಟ್ಸ್ ತಜ್ಞರ ಸಮಿತಿಯು ಆಗಸ್ಟ್ 30ರಿಂದ ಪ್ರಾರಂಭವಾಗುವ 2023ರ ಏಷ್ಯಾ ಕಪ್ ಪಂದ್ಯಾವಳಿಗಾಗಿ 15 ಸದಸ್ಯರ ತಮ್ಮ ತಂಡವನ್ನು ಆಯ್ಕೆ ಮಾಡಿದೆ.
ಭಾರತ ತಂಡದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಅವರನ್ನೊಳಗೊಂಡ ತಜ್ಞರ ಸಮಿತಿಯು ತಿಲಕ್ ವರ್ಮಾ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಿದೆ. ಗಮನಾರ್ಹವಾಗಿ, ತಿಲಕ್ ವರ್ಮಾ ಇತ್ತೀಚೆಗೆ ಮುಕ್ತಾಯಗೊಂಡ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಪದಾರ್ಪಣೆ ಮಾಡಿದರು. ಆದರೆ, ಇನ್ನೂ ಅವರು ಚೊಚ್ಚಲ ಏಕದಿನ ಪಂದ್ಯವನ್ನು ಆಡಿಲ್ಲ.
ತಿಲಕ್ ವರ್ಮಾ ಹೊರತುಪಡಿಸಿ, ತಂಡದಲ್ಲಿ ನಾಲ್ವರು ಸ್ಪಿನ್ನರ್‌ಗಳಾದ ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ಆಯ್ಕೆಯಾಗಿದ್ದರೆ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್ ಮತ್ತು ಹಾರ್ದಿಕ್ ಪಾಂಡ್ಯ ವೇಗದ ಬೌಲಿಂಗ್ ವಿಭಾಗದಲ್ಲಿದ್ದಾರೆ.

ಇದೇ ವೇಳೆ ಶುಭ್ಮನ್ ಗಿಲ್, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಬ್ಯಾಟಿಂಗ್ ವಿಭಾಗದಲ್ಲಿದ್ದಾರೆ. ತಿಲಕ್ ವರ್ಮಾ ಮತ್ತು ಇಶಾನ್ ಕಿಶನ್ ವಿಕೆಟ್ ಕೀಪಿಂಗ್ ಆಯ್ಕೆಯಾಗಿದ್ದಾರೆ.
ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಸ್ಟಾರ್ ಆಟಗಾರರಾದ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಏಷ್ಯಾ ಕಪ್‌ನ ಸಮಯದಲ್ಲಿ ಸಂಪೂರ್ಣ ಫಿಟ್‌ನೆಸ್ ಪಡೆಯಲು ವಿಫಲವಾದ ಕಾರಣ ಅವರನ್ನು ಹೊರಗಿಟ್ಟು, ಈ ತಂಡವನ್ನು ಆಯ್ಕೆ ಮಾಡಲಾಗಿದೆ.
ಗಮನಾರ್ಹವಾಗಿ, ಇಬ್ಬರೂ ಬ್ಯಾಟರ್‌ಗಳು ತಮ್ಮ ಫಿಟ್‌ನೆಸ್ ಅನ್ನು ಸಾಬೀತುಪಡಿಸಲು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ 50 ಓವರ್‌ಗಳ ಅಭ್ಯಾಸ ಪಂದ್ಯಗಳನ್ನು ಆಡುತ್ತಿದ್ದಾರೆ. ಬ್ಯಾಟಿಂಗ್‌ನ ಹೊರತಾಗಿ, 50 ಓವರ್‌ಗಳ ಸಂಪೂರ್ಣ ಪಂದ್ಯದ ಒತ್ತಡವನ್ನು ತಡೆದುಕೊಳ್ಳಲು ಇಬ್ಬರೂ ತಮ್ಮ ಫೀಲ್ಡಿಂಗ್ ಫಿಟ್‌ನೆಸ್ ಅನ್ನು ಕಾಯ್ದುಕೊಳ್ಳಬೇಕಾಗುತ್ತದೆ.
ಫಿಟ್‌ನೆಸ್ ಮರಳಿ ಪಡೆಯುವ ಯತ್ನದಲ್ಲಿ ರಾಹುಲ್, ಅಯ್ಯರ್
ಮತ್ತೊಂದೆಡೆ, ಕೆಲವು ತಿಂಗಳ ಹಿಂದೆ ಶಸ್ತ್ರಚಿಕಿತ್ಸೆಗೆ ಒಳಗಾದ ಕೆಎಲ್ ರಾಹುಲ್ ಸಂಪೂರ್ಣ 50 ಓವರ್‌ಗಳಿಗೆ ವಿಕೆಟ್‌ಕೀಪರ್‌ನ ಕೆಲಸವನ್ನು ಮಾಡಲು ಸಾಕಷ್ಟು ಫಿಟ್ ಆಗಿದ್ದಾರೆ ಎಂದು ಸಾಬೀತುಪಡಿಸಬೇಕಿದೆ.
ಪ್ರಮುಖವಾಗಿ, ಆಗಸ್ಟ್ 30ರಿಂದ ಏಷ್ಯಾ ಕಪ್ ಟೂರ್ನಿ ಪ್ರಾರಂಭವಾಗಲಿದ್ದು, ಭಾರತೀಯ ಆಯ್ಕೆ ಸಮಿತಿಯು ತಂಡವನ್ನು ಕೆಲವೇ ದಿನಗಳಲ್ಲಿ ಘೋಷಿಸಲಿದೆ. ಹೀಗಾಗಿ, ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಇಬ್ಬರೂ ತಮ್ಮ ಪಂದ್ಯದ ಫಿಟ್‌ನೆಸ್ ಅನ್ನು ಮರಳಿ ಪಡೆಯಲು ಇನ್ನೂ ಸ್ವಲ್ಪ ಸಮಯವಿದೆ. ಇಲ್ಲವಾದರೆ ಭಾರತ ತಂಡವು ಆ ಇಬ್ಬರ ಖಾಲಿ ಸ್ಥಾನಗಳನ್ನು ತುಂಬಲು ತಲೆ ಕೆಡಿಸಿಕೊಳ್ಳಕಾಗುತ್ತದೆ.
2023ರ ಏಷ್ಯಾ ಕಪ್‌ಗಾಗಿ ತಜ್ಞರ ಸಮಿತಿ ಆಯ್ಕೆಯ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications