For Quick Alerts
ALLOW NOTIFICATIONS  
For Daily Alerts
 

ಸಚಿನ್ ಶತಕಗಳ ಶತಕವನ್ನು ಹಿಂದಿಕ್ಕಲಿದ್ದಾರೆ ವಿರಾಟ್ ಕೊಹ್ಲಿ: ರವಿ ಶಾಸ್ತ್ರಿ ಭವಿಷ್ಯ

ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ 50ನೇ ಶತಕ ಬಾರಿಸಿದ್ದು ಸಚಿನ್ ತೆಂಡೂಲ್ಕರ್ ಅವರ ಏಕದಿನ ಶತಕಗಳ ಸಾಧನೆ ಹಿಂದಿಕ್ಕಿದ್ದಾರೆ. ಈ ಸಾಧನೆಯ ಬಳಿಕ ಟೀಮ್ ಇಂಡಿಯಾದ ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿರುವ ಶತಕಗಳ ಶತಕದ ದಾಖಲೆ ಹಿಂದಿಕ್ಕಲಿದ್ದಾರೆ ಎಂದು ರವಿ ಶಾಸ್ತ್ರಿ ಭವಿಷ್ಯ ನುಡಿದಿದ್ದಾರೆ.

ವಿರಾಟ್ ಕೊಹ್ಲಿ 291 ಪಂದ್ಯಗಳಲ್ಲಿ 50ನೇ ಏಕದಿನ ಶತಕವನ್ನು ಗಳಿಸಿ ಜಗತ್ತನ್ನು ಬೆರಗುಗೊಳಿಸಿದ್ದಾರೆ. ವಾಂಖೆಡೆ ಸ್ಟೇಡಿಯಂನಲ್ಲಿ ಸೆಮಿಫೈನಲ್ ಪಂದ್ಯವನ್ನು ವೀಕ್ಷಿಸುತ್ತಿದ್ದ ಸಚಿನ್ ತೆಂಡೂಲ್ಕರ್ ಅವರಿಗೆ ಕೊಹ್ಲಿ ತಲೆ ಬಾಗಿ ನಮಸ್ಕರಿಸಿದ್ದಾರೆ. ಈ ಮೂಲಕ ಮೊದಲ ಬಾರಿಗೆ ವಿಶ್ವಕಪ್ ನಾಕೌಟ್ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದರು ಕೊಹ್ಲಿ.

Ravi Shastri said Virat Kohli can equal Sachin Tendulkars tally of 100 Centuries

ವಿರಾಟ್ ಕೊಹ್ಲಿ ಸಚಿನ್ ತೆಂಡೂಲ್ಕರ್ ಅವರ 49 ಶತಕಗಳ ಸಾಧನೆಯನ್ನು 174 ಇನ್ನಿಂಗ್ಸ್‌ಳಿಗಿಂತಲೂ ಮುನ್ನವೇ ದಾಖಲೆ ಸರಿಗಟ್ಟಿದ್ದರು. ಇನ್ನು ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ (673) ಸಚಿನ್ ತೆಂಡೂಲ್ಕರ್ ಅವರ ರನ್‌ಗಳಿಗೆ ದಾಖಲೆಯನ್ನು ಕೊಹ್ಲಿ ಮುರಿದಿದ್ದಾದ್ದು 10 ಪಂದ್ಯಗಳಲ್ಲಿ 711 ರನ್ ಗಳಿಸಿದ್ದಾರೆ. ಈ ವಿಶ್ವಕಪ್‌ನಲ್ಲಿ ಕೊಹ್ಲಿ ಬ್ಯಾಟ್‌ನಿಂದ 3 ಶತಕ ಮತ್ತು 5 ಅರ್ಧ ಶತಕ ದಾಖಳಾಗಿದೆ.

"ಸಚಿನ್ ತೆಂಡೂಲ್ಕರ್ 100 ಶತಕಗಳನ್ನು ಗಳಿಸಿದ ಬಳಿಕ ಅವರ ಈ ದಾಖಲೆಯ ಹತ್ತಿರಕ್ಕೆ ಯಾರಾದರೂ ಬರುತ್ತಾರೆ ಎಂದು ಯಾರು ನಿರೀಕ್ಷಿಸಿದ್ದರು. ವಿರಾಟ್ 80 ಶತಕಗಳನ್ನು ಬಾರಿಸಿದ್ದಾರೆ. 80 ಅಂತಾರಾಷ್ಟ್ರೀಯ ಶತಕಗಳು. ಅದರಲ್ಲಿ 50 ಶತಕಗಳು ಏಕದಿನ ಕ್ರಿಕೆಟ್‌ನಲ್ಲಿಯೇ ಬಂದಿದೆ. ಇದು ನಿಜಕ್ಕೂ ಊಹೆಗೂ ನೀರಿದ್ದು" ಎಂದಿದ್ದಾರೆ ರವಿ ಶಾಸ್ತ್ರಿ.

"ಯಾವುದೂ ಕೂಡ ಅಸಾಧ್ಯವಲ್ಲ. ಯಾಕೆಂದರೆ ಇಂಥಾ ಆಟಗಾರರು ಶತಕಗಳನ್ನು ಬಾರಿಸುತ್ತಾ ಸಾಗಿದರೆ ವೇಗವಾಗಿ ಸಾಗುತ್ತಾರೆ. ಅವರ ಮುಂದಿನ ಹತ್ತು ಇನ್ನಿಂಗ್ಸ್‌ಗಳಲ್ಲಿ ಬಹುಶಃ ಮತ್ತೆ ಐದು ಶತಕಗಳನ್ನು ಬಾರಿಸಬಹುದು. ಮೂರು ಮಾದರಿಯ ಆಟಗಾರರು ಇವೆ. ಆತ ಎಲ್ಲಾ ಮಾದರಿಯಲ್ಲಿಯೂ ಆಡುವ ಆಟಗಾರ" ಎಂದಿದ್ದಾರೆ ರವಿ ಶಾಸ್ತ್ರಿ.

Story first published: Thursday, November 16, 2023, 16:45 [IST]
Other articles published on Nov 16, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+