For Quick Alerts
ALLOW NOTIFICATIONS  
For Daily Alerts
 

ವೃದ್ದಿಮಾನ್ ಸಾಹಾಗೆ ಪತ್ರಕರ್ತನಿಂದ ಬೆದರಿಕೆ: BCCI ತುರ್ತಾಗಿ ತನಿಖೆ ನಡೆಸಬೇಕು ಎಂದ ರವಿಶಾಸ್ತ್ರಿ

Ravi shastri

ಇತ್ತೀಚಿಗೆ ಟೀಂ ಇಂಡಿಯಾ ಆಟಗಾರ ವೃದ್ದಿಮಾನ್ ಸಾಹಾಗೆ ಪತ್ರಕರ್ತನೊಬ್ಬನ ಬೆದರಿಕೆಯ ಕುರಿತು ಭಾರತ ಕ್ರಿಕೆಟ್‌ನ ಮಾಜಿ ಕೋಚ್ ರವಿಶಾಸ್ತ್ರಿ ಅಚ್ಚರಿ ವ್ಯಕ್ತಪಡಿಸಿದ್ದು, ಕೂಡಲೇ ಈ ಕುರಿತು ಬಿಸಿಸಿಐ ವಿಚಾರಣೆ ನಡೆಸಬೇಕಿದೆ ಎಂದು ಆಗ್ರಹಿಸಿದ್ದಾರೆ.

ಅನುಭವಿ ವಿಕೆಟ್ ಕೀಪರ್ ವೃದ್ದಿಮಾನ್ ಸಾಹಾ ಹಾಗೂ ಪತ್ರಕರ್ತರೊಂದಿಗಿನ ಸಂಭಾಷಣೆಯ ಸ್ಕ್ರೀನ್‌ಶಾಟ್‌ ಅನ್ನು ಸಾಹಾ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಈಗಾಗಲೇ ಆಯ್ಕೆದಾರರು ಮುಂಬರುವ ಶ್ರೀಲಂಕಾ ವಿರುದ್ಧದ ಟೆಸ್ಟ್‌ ಸರಣಿಯಿಂದ ಅವರನ್ನ ಕೈ ಬಿಡಲಾಗಿದೆ. ಹೀಗಾಗಿ ಬೇಸರಗೊಂಡಿರುವ ಸಾಹಾ ರಣಜಿ ಕ್ರಿಕೆಟ್‌ನಿಂದಲೂ ಹೊರಗುಳಿದಿದ್ದಾರೆ.

ಆದ್ರೆ ಈ ಬಳಿಕ ಪತ್ರಕರ್ತನ ಬೆದರಿಕೆಯಿಂದ ಬೇಸರಗೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ರು, ಈ ಕುರಿತಾಗಿ ತುರ್ತಾಗಿ ಬಸಿಸಿಐ ತನಿಖೆ ಮಾಡಬೇಕೆಂದು ರವಿಶಾಸ್ತ್ರಿ ಹೇಳಿದ್ದಾರೆ. ಇದು ಈಗಾಗಲೇ ಹಲವಾರು ಬಾರಿ ಸಂಭವಿಸಿದ್ದು, ಇಂತಹ ರೀತಿಯ ಬೆದರಿಕೆಗಳಿಂದ ಆಟಗಾರರನ್ನು ರಕ್ಷಿಸಲು ಬಿಸಿಸಿಐ ಹೆಜ್ಜೆ ಹಾಕುವ ಸಮಯ ಬಂದಿದೆ ಎಂದಿದ್ದಾರೆ.

ಚೇತನ್ ಶರ್ಮಾ ನೇತೃತ್ವದ ಆಟಗಾರರ ಆಯ್ಕೆ ಸಮಿತಿಯು ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ ಮತ್ತು ಇಶಾಂತ್ ಶರ್ಮಾ ಅವರೊಂದಿಗೆ ಮುಂಬರುವ ಶ್ರೀಲಂಕಾ ವಿರುದ್ಧದ ತವರಿನ ಸರಣಿಗೆ ಸಾಹಾ ಅವರನ್ನು ಪರಿಗಣಿಸಲಾಗಿಲ್ಲ.

ಸಾಹಾ ಅವರ ಪೋಸ್ಟ್‌ಗೆ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಕೂಡ ಬೆಂಬಲ ವ್ಯಕ್ತಪಡಿಸಿದ್ರು. ಪತ್ರಕರ್ತನ ಪದ ಪ್ರಯೋಗದ ಬಗ್ಗೆ ಸಾಕಷ್ಟು ಕಠಿಣವಾಗಿ ಮಾತನಾಡಿದ್ದರು. ಇದರ ಜೊತೆಗೆ ಭಾರತದ ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಷ್ಟೇ ಅಲ್ಲದೆ, ಆ ಪತ್ರಕರ್ತನನ್ನು ಬಹಿರಂಗಪಡಿಸಿ ಮತ್ತು ಬಿಸಿಸಿಐ ಸಾಹಾಗೆ ರಕ್ಷಣೆ ನೀಡಲಿ ಎಂದು ಕೇಳಿಕೊಂಡಿದ್ದಾರೆ.

ವೃದ್ದಿಮಾನ್ ಸಾಹಾ ಭಾರತದ ಪರ 40 ಟೆಸ್ಟ್‌ಗಳನ್ನು ಆಡಿದ್ದಾರೆ ಮತ್ತು 29.4 ರ ಸರಾಸರಿಯಲ್ಲಿ 1,353 ರನ್ ಗಳಿಸಿದ್ದಾರೆ. ಟೆಕ್ನಿಕಲಿ ಭಾರತ ಕಂಡಉತ್ತಮ ವಿಕೆಟ್‌ಕೀಪರ್‌ಗಳಲ್ಲಿ ಇವರು ಒಬ್ಬರಾಗಿದ್ದಾರೆ.

Story first published: Monday, February 21, 2022, 9:59 [IST]
Other articles published on Feb 21, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+