For Quick Alerts
ALLOW NOTIFICATIONS  
For Daily Alerts
 

ಕುಲ್‌ದೀಪ್ ಪ್ರಸ್ತುತ ಭಾರತದ ಬೆಸ್ಟ್ ವ್ರಿಸ್ಟ್‌ ಸ್ಪಿನ್ನರ್‌: ಆರ್‌. ಅಶ್ವಿನ್

R Ashwin

ರವಿಶಾಸ್ತ್ರಿ ಒಮ್ಮೆ ಕುಲದೀಪ್ ಯಾದವ್ ಅವರನ್ನು ವಿದೇಶಿ ನೆಲದಲ್ಲಿ ಭಾರತದ ಅತ್ಯುತ್ತಮ ಸ್ಪಿನ್ನರ್‌ಗಳಲ್ಲಿ ಒಬ್ಬರು ಎಂದು ಗುರುತಿಸಿದ್ದರು. ಆದರೆ ಕುಲ್‌ದೀಪ್ ಅಂತರರಾಷ್ಟ್ರೀಯ ವೃತ್ತಿಜೀವನದ ಮೊದಲ ಎರಡು ವರ್ಷಗಳ ನಂತರ ಹಾಗೆಯೇ ಕುಸಿದು ಹೋಯಿತು. ಕಾರಣಾಂತರಗಳಿಂದ ಅವರನ್ನು ತಂಡದಿಂದ ಕೈಬಿಡಬೇಕಾಯಿತು, ಐಪಿಎಲ್‌ನಲ್ಲೂ ಕೋಲ್ಕತ್ತಾ ನೈಟ್ ರೈಡರ್ಸ್ ಅವರನ್ನು ಹೆಚ್ಚಿನ ಸಮಯ ಮೈದಾನದಿಂದ ಹೊರಗಿಟ್ಟಿತ್ತು.

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರು ನಿಧಾನವಾಗಿ ವೈಟ್‌ ಬಾಲ್ ಕ್ರಿಕೆಟ್‌ಗೆ ಮರಳುತ್ತಿದ್ದರೂ, ಅವರು ಇನ್ನೂ ರೆಡ್‌ ಬಾಲ್‌ ಕ್ರಿಕೆಟ್‌ನಿಂದ ದೂರವಿದ್ದಾರೆ. ಟೆಸ್ಟ್ ಕ್ರಿಕೆಟ್‌ನ ಆಧಾರ ಸ್ತಂಭಗಳಲ್ಲಿ ಒಬ್ಬರಾದ, ಭಾರತ ತಂಡವನ್ನು ದೀರ್ಘಕಾಲ ನೆಚ್ಚಿಕೊಂಡಿರುವ ರವಿಚಂದ್ರನ್ ಅಶ್ವಿನ್, ಕುಲ್‌ದೀಪ್ ಅವರ ಭವಿಷ್ಯದ ಬಗ್ಗೆ ಆಶಾವಾದಿಯಾಗಿದ್ದು, ಭಾರತೀಯ ಸ್ಪಿನ್ನರ್ ಅನ್ನು ಹೊಗಳಿದ್ದಾರೆ.

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿನ ವೀಡಿಯೊದಲ್ಲಿ, ಅಶ್ವಿನ್ ಯಾವಾಗಲೂ ಕುಲದೀಪ್ ಯಾದವ್‌ಗೆ ವ್ರಿಸ್ಟ್‌ ಸ್ಪಿನ್ನರ್ ಆಗಿ ಹೆಚ್ಚಿನ ಸ್ಥಾನವನ್ನು ನೀಡಿದ್ದೇನೆ ಎಂದು ಹೇಳಿದ್ದಾರೆ. ಒಂದೇ ಲೆಂಥ್‌ ಬೌಲಿಂಗ್ ಮಾಡುವ ಕುಲದೀಪ್ ಸಾಮರ್ಥ್ಯ ಅಶ್ವಿನ್ ಅವರನ್ನು ಮೆಚ್ಚಿಸಿದೆ.

"ದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ಪುನರಾವರ್ತಿತ ಲೆಂಥ್‌ಗಳನ್ನ ಬೌಲ್ ಮಾಡುವ ಸಾಮರ್ಥ್ಯ ಬಹಳ ಮುಖ್ಯ, ದೀರ್ಘ ಸ್ವರೂಪದ ಕ್ರಿಕೆಟ್‌ನಲ್ಲಿ ಯಶಸ್ವಿಯಾಗುವುದು ಅವಶ್ಯಕ. ಅವರು ನಿರ್ದಿಷ್ಟ ಸ್ಥಳದಲ್ಲಿ ಬಾಲ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಮಣಿಕಟ್ಟಿನ ಸ್ಪಿನ್ನರ್‌ಗೆ ಅದು ಉತ್ತಮ ಕೌಶಲ್ಯದ ವಿಷಯವಾಗಿದೆ." ಎಂದು ಅಶ್ವಿನ್ ಹೊಗಳಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡದ ಪರ ಅದ್ಭುತ ಪ್ರದರ್ಶನ ನೀಡಿದ್ದರು. ಮೂರನೇ ಏಕದಿನ ಪಂದ್ಯದಲ್ಲಿ ಅವರು ಏಕಾಂಗಿಯಾಗಿ ನಾಲ್ಕು ವಿಕೆಟ್‌ಗಳನ್ನು ಪಡೆದರು ಮತ್ತು ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಪಡೆದರು.

ಮೂರು ಪಂದ್ಯಗಳ ಈ ಸರಣಿಯಲ್ಲಿ ಅವರು ಒಟ್ಟು ಆರು ವಿಕೆಟ್ ಪಡೆದರು. ಆಸ್ಟ್ರೇಲಿಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಇಲ್ಲದಿದ್ದರೂ ಮುಂದಿನ ವರ್ಷ ದೇಶದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಇನ್ನಿಲ್ಲದ ಪ್ರಯತ್ನ ನಡೆಸುವುದು ನಿಶ್ಚಿತ. ಚೈನಾಮನ್ ಎಲ್ಲಾ ಮೂರು ಸ್ವರೂಪಗಳಲ್ಲಿ ಭಾರತೀಯ ತಂಡದ ಪ್ರಮುಖ ಭಾಗವಾಗಲು ಬಯಸಿದ್ದಾರೆ.

Story first published: Wednesday, October 12, 2022, 22:42 [IST]
Other articles published on Oct 12, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+