Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕಪಿಲ್ ದೇವ್ ದಾಖಲೆ ಮುರಿದ ಆರ್ ಅಶ್ವಿನ್

ಪುಣೆ, ಫೆಬ್ರವರಿ 24: ಟೀಂ ಇಂಡಿಯಾದ ಪ್ರಮುಖ ಆಫ್ ಸ್ಪಿನ್ನರ್ ಬೌಲರ್ ರವಿಚಂದ್ರನ್ ಅಶ್ಚಿನ್ ಅವರು ಮತ್ತೊಂದು ದಾಖಲೆ ಬರೆದಿದ್ದಾರೆ. ಅಸ್ಟ್ರೇಲಿಯಾ ವಿರುದ್ಧ ನಡೆದಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಮಿಚೆಲ್ ಸ್ಟಾಕ್ ವಿಕೆಟ್ ಕೀಳುತ್ತಿದ್ದಂತೆ, ಮಾಜಿ ನಾಯಕ ಕಪಿಲ್ ದೇವ್ ಅವರ ದಾಖಲೆಯನ್ನು ಮುರಿದರು.

ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಮೊದಲ ಟೆಸ್ಟ್ ಪದ್ಯದ ಎರಡನೇ ದಿನವಾರ ಶುಕ್ರವಾರ (ಫೆಬ್ರವರಿ 24) ಎರಡು ತಂಡಗಳ ವಿಕೆಟ್ ಗಳು ತರೆಗೆಲೆಗಳಂತೆ ಉದುರಿದವು. ಆಸ್ಟ್ರೇಲಿಯಾ 260ಕ್ಕೆ ಆಲೌಟ್ ಅಗಿದೆ. ಭಾರತ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 105ಕ್ಕೆ ಸರ್ವಪತನ ಕಂಡಿದೆ.

Ravichandran Ashwin surpasses Kapil Dev to become highest wicket-taker in a home season


ಆರ್ ಅಶ್ವಿನ್ ಅವರು 3 ವಿಕೆಟ್ ಪಡೆದಿದ್ದು, ಈ ಮೂಲಕ ಕಪಿಲ್ ದೇವ್ ಅವರು ತವರಿನ ಟೆಸ್ಟ್ ಸರಣಿಯಲ್ಲಿ ಅತ್ಯಧಿಕ ವಿಕೆಟ್ ಪಡೆದ ದಾಖಲೆಯನ್ನು ಅಶ್ವಿನ್ ಅವರು ಮುರಿದರು.

31 ವರ್ಷ ವಯಸ್ಸಿನ ತಮಿಳುನಾಡು ಮೂಲದ ಆಲ್ ರೌಂಡರ್ ಅಶ್ವಿನ್ ಅವರು ಈ ಬಾರಿಯ ಟೆಸ್ಟ್ ಋತುವಿನಲ್ಲಿ ಒಟ್ಟು 64 ವಿಕೆಟ್ ಕಿತ್ತಿದ್ದಾರೆ. ಕಪಿಲ್ ಅವರು 1979-80ರ ಟೆಸ್ಟ್ ಋತುವಿನಲ್ಲಿ 63 ವಿಕೆಟ್ ಕಿತ್ತಿದ್ದರು.

ಈ ಪಂದ್ಯಕ್ಕೂ ಮುನ್ನ 24.55 ಸರಾಸರಿಯಂತೆ ಅಶ್ವಿನ್ ಅವರು 61 ವಿಕೆಟ್ ಪಡೆದಿದ್ದರು. ಬಾಂಗ್ಲಾದೇಶ ಸರಣಿಯಲ್ಲಿ 250 ವಿಕೆಟ್ ಕಳಿಸುವ ಮೂಲಕ ಆಸ್ಟ್ರೇಲಿಯಾದ ದಿಗ್ಗಜ ಡೆನ್ನಿಸ್ ಲಿಲ್ಲಿ ಅವರ ದಾಖಲೆಯನ್ನು ಅಶ್ವಿನ್ ಮುರಿದಿದ್ದರು. 37 ಟೆಸ್ಟ್ ಪಂದ್ಯಗಳಲ್ಲಿ 200 ಟೆಸ್ಟ್ ವಿಕೆಟ್ ಗಳಿಸಿ ಪಾಕಿಸ್ತಾನದ ವಾಖರ್ ಯೂನಿಸ್ ದಾಖಲೆ (38 ಪಂದ್ಯ)ಯನ್ನು ಮುರಿದಿದ್ದರು.(ಒನ್ಇಂಡಿಯಾ ಸುದ್ದಿ)

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+