Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs BAN: ಅಪಾಯದಲ್ಲಿ ಮುರಳೀಧರನ್- ಶೇನ್ ವಾರ್ನ್ ಶ್ರೇಷ್ಠ ಟೆಸ್ಟ್ ದಾಖಲೆ; ಬ್ರೇಕ್ ಮಾಡ್ತಾರಾ ಅಶ್ವಿನ್?

ಆಗಸ್ಟ್ 17 ಶನಿಭಾರ, ಶ್ರೀಲಂಕಾದ ದಂತಕಥೆ ಮುತ್ತಯ್ಯ ಮುರಳೀಧರನ್ ಮತ್ತು ಆಸ್ಟ್ರೇಲಿಯಾದ ಶೇನ್ ವಾರ್ನ್ ಟೆಸ್ಟ್ ಕ್ರಿಕೆಟ್‌ನ ಶ್ರೇಷ್ಠ ಬೌಲರ್‌ಗಳ ಪಟ್ಟಿಯಲ್ಲಿದ್ದಾರೆ. ಈ ಇಬ್ಬರು ದಿಗ್ಗಜರು ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಸ್ಪಿನ್ ಬೌಲಿಂಗ್ ಮೂಲಕ ಹಲವು ದಾಖಲೆಗಳನ್ನು ಸೃಷ್ಟಿಸಿದ್ದು, ಇದುವರೆಗೂ ಯಾರೂ ಮುರಿಯಲು ಸಾಧ್ಯವಾಗಿಲ್ಲ.

ಆದರೆ ಇದೀಗ ಈ ಇಬ್ಬರು ದಿಗ್ಗಜರ ದಾಖಲೆಯನ್ನು ಮುರಿಯಲು ಭಾರತದ ಸ್ಟಾರ್ ಲೆಗ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಸಿದ್ಧರಾಗಿದ್ದಾರೆ. ಈ ದಾಖಲೆಗಳನ್ನು ಮುರಿಯುವುದರಿಂದ ಅಶ್ವಿನ್ ದೂರವಿಲ್ಲ. ಮುಂಬರುವ ಬಾಂಗ್ಲಾದೇಶ ಮತ್ತು ಭಾರತ ನಡುವಿನ ಟೆಸ್ಟ್ ಸರಣಿಯಲ್ಲಿ ಅಶ್ವಿನ್ ಈ ಸಾಧನೆಯನ್ನು ಮಾಡುವ ಸಾಧ್ಯತೆಯಿದೆ.

Ravichandran Ashwin to break Muttiah Muralitharan- Shane Warne record in Test cricket

ಮುತ್ತಯ್ಯ ಮುರಳೀಧರನ್ ದಾಖಲೆ

ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ 800 ವಿಕೆಟ್‌ಗಳನ್ನು ಪಡೆದಿರುವ ಮುತ್ತಯ್ಯ ಮುರಳೀಧರನ್ ಅವರ ದೊಡ್ಡ ದಾಖಲೆಯೊಂದನ್ನು ಮುರಿಯುವ ಹೊಸ್ತಿಲಲ್ಲಿದ್ದಾರೆ. ಮುರಳೀಧರನ್ ಅವರು ಟೆಸ್ಟ್‌ನಲ್ಲಿ ಅತಿ ಹೆಚ್ಚು ಬಾರಿ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿಗಳನ್ನು ಗೆದ್ದು, ವಿಶ್ವ ದಾಖಲೆಯನ್ನು ಹೊಂದಿದ್ದಾರೆ. ಮುರಳೀಧರನ್ 11 ಬಾರಿ ಈ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಈ ದಾಖಲೆಯಿಂದ ಅಶ್ವಿನ್ ಕೇವಲ 2 ಹೆಜ್ಜೆ ದೂರ ಹಿಂದೆ ಇದ್ದಾರೆ. ಅಶ್ವಿನ್ ಇದುವರೆಗಿನ ಟೆಸ್ಟ್ ವೃತ್ತಿಜೀವನದಲ್ಲಿ 10 ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಮತ್ತೊಮ್ಮೆ ಎರಡು ಬಾರಿ ಈ ಪ್ರಶಸ್ತಿಯನ್ನು ಅಶ್ವಿನ್ ಗೆದ್ದರೆ ಮುರಳೀಧರನ್ ಅವರನ್ನು ಹಿಂದಿಕ್ಕಲಿದ್ದಾರೆ. ಇದರೊಂದಿಗೆ ಅವರು ಟೆಸ್ಟ್‌ನಲ್ಲಿ ಅತಿ ಹೆಚ್ಚು ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದ ಮೊದಲ ಆಟಗಾರನಾಗಲಿದ್ದಾರೆ.

ಅಪಾಯದಲ್ಲಿ ಶೇನ್ ವಾರ್ನ ರೆಕಾರ್ಡ್

ಅಶ್ವಿನ್ ಗುರಿಯಲ್ಲಿ ಕೇವಲ ಮುರಳೀಧರನ್ ದಾಖಲೆ ಮೇಲೆ ಇಲ್ಲ. ಆಸ್ಟ್ರೇಲಿಯಾದ ದಂತಕಥೆ ಶೇನ್ ವಾರ್ನ್ ಅವರ ರೆಕಾರ್ಡ್ ಬ್ರೇಕ್ ಮಾಡಲು ತಯಾರಾಗಿದ್ದಾರೆ. ವಾರ್ನ್ ಅತಿ ಹೆಚ್ಚು ಟೆಸ್ಟ್ ವಿಕೆಟ್‌ಗಳನ್ನು ಪಡೆದ ವಿಶ್ವದ ಮೂರನೇ ಬೌಲರ್. ಅವರು ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 116 ಬ್ಯಾಟರ್‌ಗಳನ್ನು ಬೌಲ್ಡ್ ಮಾಡಿದ್ದಾರೆ.

ಈ ವಿಚಾರದಲ್ಲಿ ಅಶ್ವಿನ್ ಅವರನ್ನು ಮೀರಿಸುವ ಅವಕಾಶವನ್ನು ಹೊಂದಿದ್ದಾರೆ. ಅಶ್ವಿನ್ ಟೆಸ್ಟ್‌ನಲ್ಲಿ ಇದುವರೆಗೆ 105 ಬ್ಯಾಟರ್‌ಗಳನ್ನು ಬೌಲ್ಡ್ ಮಾಡಿದ್ದಾರೆ. ಮುಂಬರುವ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಅಶ್ವಿನ್ 12 ಬ್ಯಾಟರ್‌ಗಳನ್ನು ಬೌಲ್ಡ್ ಮಾಡುವಲ್ಲಿ ಯಶಸ್ವಿಯಾದರೆ, ವಾರ್ನ್ ದಾಖಲೆಯನ್ನು ಪುಡಿ ಪುಡಿ ಮಾಡಲಿದ್ದಾರೆ.

ಇದರೊಂದಿಗೆ ಅಶ್ವಿನ್ ಅತಿ ಹೆಚ್ಚು ಬಾರಿ ಟೆಸ್ಟ್‌ನಲ್ಲಿ ಬೌಲ್ಡ್ ಪಡೆದ ವಿಶ್ವದ ಮೂರನೇ ಬೌಲರ್ ಆಗಲಿದ್ದಾರೆ. 167 ವಿಕೆಟ್ ಕಬಳಿಸಿರುವ ಮುರಳೀಧರನ್ ಮೊದಲ ಸ್ಥಾನದಲ್ಲಿದ್ದಾರೆ.

Story first published: Saturday, August 17, 2024, 22:58 [IST]
Other articles published on Aug 17, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+