For Quick Alerts
ALLOW NOTIFICATIONS  
For Daily Alerts
 

ಭಾರತ ಟೆಸ್ಟ್ ತಂಡದ ನಾಯಕನಾಗಿ ಆರ್ ಅಶ್ವಿನ್?; ಸ್ಪಿನ್ನರ್‌ಗೆ ಬೆಂಬಲಿಸಿದ ಪಾಕ್ ಕ್ರಿಕೆಟಿಗ

Ravichandran Ashwin To Captain of India Test Team?; Former Pak Cricketer Danish Kaneria Backs Indias Spinner

ಕ್ರಿಕೆಟ್‌ನ ಮೂರು ಸ್ವರೂಪಗಳಲ್ಲಿ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಯ ಭಾರತ ತಂಡದ ನಾಯಕತ್ವ ಅವಧಿಯು ಕೊನೆಗೊಂಡಾಗಿನಿಂದ, ಹಲವು ಆಟಗಾರರು ತಂಡವನ್ನು ಮುನ್ನಡೆಸಿರುವುದನ್ನು ಕಾಣಬಹುದು.

ರೋಹಿತ್ ಶರ್ಮಾ ಎಲ್ಲಾ ಮೂರು ಸ್ವರೂಪಗಳಲ್ಲಿ ನಿಯೋಜಿತ ನಾಯಕರಾಗಿದ್ದರೂ, ಶಿಖರ್ ಧವನ್, ಕೆಎಲ್ ರಾಹುಲ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ ಮತ್ತು ಜಸ್ಪ್ರೀತ್ ಬುಮ್ರಾ ಕೂಡ ವಿಭಿನ್ನ ಸ್ವರೂಪಗಳಲ್ಲಿ ಹಂಗಾಮಿ ನಾಯಕತ್ವ ಪಾತ್ರವನ್ನು ವಹಿಸಿಕೊಂಡಿದ್ದಾರೆ.

ಅನುಭವವಿದ್ದರೂ ನಾಯಕತ್ವ ಪಾತ್ರವನ್ನು ನಿಭಾಯಿಸದ ಒಬ್ಬ ಆಟಗಾರನೆಂದರೆ ರವಿಚಂದ್ರನ್ ಅಶ್ವಿನ್. ವಿಶೇಷವಾಗಿ ಅವರು ಇಲ್ಲಿಯವರೆಗೆ ಹೊಂದಿರುವ ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ಇದೀಗ ಪಾಕಿಸ್ತಾನದ ಮಾಜಿ ಸ್ಪಿನ್ನರ್ ಡ್ಯಾನಿಶ್ ಕನೇರಿಯಾ ಅವರು ರವಿಚಂದ್ರನ್ ಅಶ್ವಿನ್ ಟೆಸ್ಟ್ ತಂಡದ ನಾಯಕತ್ವ ಅಭ್ಯರ್ಥಿಗಳಲ್ಲಿ ಒಬ್ಬರಾಗಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

Ravichandran Ashwin To Captain of India Test Team?; Former Pak Cricketer Danish Kaneria Backs Indias Spinner

ಕ್ರಿಕೆಟ್‌ನ ಟೆಸ್ಟ್ ಸ್ವರೂಪದಲ್ಲಿ ಅತ್ಯುತ್ತಮ ಭಾರತೀಯ ಕ್ರಿಕೆಟಿಗರಲ್ಲಿ ಆರ್ ಅಶ್ವಿನ್ ಕೂಡ ಒಬ್ಬರು. ಅಶ್ವಿನ್ ನಿಜವಾಗಿಯೂ ಭಾರತೀಯ ಟೆಸ್ಟ್ ತಂಡದಲ್ಲಿ ಲಿಂಚ್ಪಿನ್ ಆಗಿದ್ದಾರೆ. ಕೇವಲ ಚೆಂಡಿನೊಂದಿಗೆ ಮಾತ್ರವಲ್ಲದೆ, ಕೆಲವೊಮ್ಮೆ ತಮ್ಮ ಬ್ಯಾಟ್‌ನಿಂದ ಭಾರತ ತಂಡವನ್ನು ಕಠಿಣ ಪರಿಸ್ಥಿತಿಗಳಿಂದ ಪಾರು ಮಾಡಿ ಗೆಲ್ಲಿಸಿದ್ದಾರೆ.

ಆದ್ದರಿಂದ, ಈ ಅಪತ್ಬಾಂಧವ ರವಿಚಂದ್ರನ್ ಅಶ್ವಿನ್ ಭಾರತ ಟೆಸ್ಟ್ ತಂಡದ ನಾಯಕತ್ವದ ಅಭ್ಯರ್ಥಿಗಳಲ್ಲಿ ಒಬ್ಬರಾಗಿರಬೇಕು ಎಂದು ಮಾಜಿ ಪಾಕಿಸ್ತಾನ ತಂಡದ ಸ್ಪಿನ್ನರ್ ಡ್ಯಾನಿಶ್ ಕನೇರಿಯಾ ತಿಳಿಸಿದ್ದಾರೆ.

"ರವಿಚಂದ್ರನ್ ಅಶ್ವಿನ್ ಅವರು ಭಾರತದ ಟೆಸ್ಟ್ ನಾಯಕತ್ವದ ಅಭ್ಯರ್ಥಿಗಳಲ್ಲಿ ಒಬ್ಬರಾಗಿರಬೇಕು. ಅವರಲ್ಲಿ ಇನ್ನೂ ಸಾಕಷ್ಟು ಕ್ರಿಕೆಟ್ ಉಳಿದಿದೆ. ಅವರು ತಮ್ಮ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ತುಂಬಾ ಸ್ಮಾರ್ಟ್ ಮತ್ತು ಬುದ್ಧಿವಂತ ಆಟಗಾರರಾಗಿದ್ದಾರೆ. ಅವರು ತಂಡದಲ್ಲಿರುವಾಗ ಅವರು ನಿರಂತರವಾಗಿ ತಂಡಕ್ಕಾಗಿ ಯೋಚಿಸುತ್ತಿರುವಂತೆ ತೋರುತ್ತದೆ," ಡ್ಯಾನಿಶ್ ಕನೇರಿಯಾ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ವೀಡಿಯೊದಲ್ಲಿ ಹೇಳಿದರು.

Ravichandran Ashwin To Captain of India Test Team?; Former Pak Cricketer Danish Kaneria Backs Indias Spinner

ಬಾಂಗ್ಲಾದೇಶದ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಬಗ್ಗೆ ಮಾತನಾಡುತ್ತಾ, ಆರ್ ಅಶ್ವಿನ್ 4ನೇ ದಿನದಂದು ಬ್ಯಾಟ್‌ನೊಂದಿಗೆ ಹೀರೋ ಆಗಿ ಹೊರಹೊಮ್ಮಿದರು, ಅಜೇಯ 42 ರನ್ ಗಳಿಸಿ ಸಂಕಷ್ಟದಲ್ಲಿದ್ದ ಭಾರತ ತಂಡವನ್ನು 3 ವಿಕೆಟ್‌ಗಳಿಂದ ಗೆಲ್ಲಲು ನೆರವಾದರು.

"ಭಾರತ ತಂಡವು ಭಾರಿ ಒತ್ತಡಕ್ಕೆ ಸಿಲುಕಿತ್ತು. ರವಿಚಂದ್ರನ್ ಅಶ್ವಿನ್ ಆ ಪರಿಸ್ಥಿತಿಯಲ್ಲಿ ಶಾಂತವಾಗಿದ್ದರು ಮತ್ತು ತಮ್ಮ ತಂಡದ ಗೆಲುವಿಗಾಗಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅವರು ತಮ್ಮ ಬ್ಯಾಟಿಂಗ್ ಕೊಡುಗೆಗಳಿಂದ ಹಲವಾರು ಸಂದರ್ಭಗಳಲ್ಲಿ ಭಾರತವನ್ನು ಗೆಲ್ಲಿಸಿದ್ದಾರೆ," ಎಂದು ಡ್ಯಾನಿಶ್ ಕನೇರಿಯಾ ತಿಳಿಸಿದರು.

2ನೇ ಟೆಸ್ಟ್‌ ಪಂದ್ಯದಲ್ಲಿ ಆಲ್‌ರೌಂಡರ್ ಕೊಡುಗೆಗಾಗಿ ರವಿಚಂದ್ರನ್ ಅಶ್ವಿನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

Story first published: Tuesday, December 27, 2022, 21:13 [IST]
Other articles published on Dec 27, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+