For Quick Alerts
ALLOW NOTIFICATIONS  
For Daily Alerts
 

ಮರಳಿ ಸಿಎಸ್‌ಕೆ ಪರ ಆಡಲು ಅಶ್ವಿನ್‌ಗೆ ಆಸೆ; ರಾಜಸ್ಥಾನ್ ರಾಯಲ್ಸ್‌ಗೆ ಗುಡ್‌ಬೈ?

2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಾವಳಿಯ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಮಾರ್ಚ್ 22ರಂದು ಚಾಲನೆ ದೊರೆಯುವ ಸಾಧ್ಯತೆ ಇದೆ.

ಇದೇ ವೇಳೆ ರವಿಚಂದ್ರನ್ ಅಶ್ವಿನ್ ಅವರು ಯಾವಾಗ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡಕ್ಕೆ ಮರಳುತ್ತಾರೆ ಎಂದು ಅಭಿಮಾನಿಯೊಬ್ಬರು ಪ್ರಶ್ನಿಸಿದರು. ಇದಕ್ಕೆ ಸಿಎಸ್‌ಕೆ ನಾಯಕ ಎಂಎಸ್ ಧೋನಿ ಮಾತ್ರ ಆ ಪ್ರಶ್ನೆಗೆ ಉತ್ತರಿಸಬಹುದು ಎಂದು ಸ್ಟಾರ್ ಸ್ಪಿನ್ನರ್ ಉತ್ತರಿಸಿದರು.

Ravichandran Ashwin Wants To Play For CSK Again; Is Goodbye to Rajasthan Royals?

ಸಿಎಸ್‌ಕೆ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ ಅವರು 2022ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಆಡುತ್ತಿದ್ದಾರೆ.

ಈ ಹಿಂದೆ ಭಾರತ ತಂಡದ ಸಹ ಆಟಗಾರರಲ್ಲದೆ, ರವಿಚಂದ್ರನ್ ಅಶ್ವಿನ್ ಮತ್ತು ಎಂಎಸ್ ಧೋನಿ ಐಪಿಎಲ್‌ನಲ್ಲಿ ಹಲವು ಬಾರಿ ಒಟ್ಟಿಗೆ ಆಡಿದ್ದಾರೆ. 2008ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕಾಗಿ ಆಡುವ ಮೂಲಕ ಪಂದ್ಯಾವಳಿಗೆ ರವಿಚಂದ್ರನ್ ಅಶ್ವಿನ್ ಪದಾರ್ಪಣೆ ಮಾಡಿದರು.

ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು 2015ರವರೆಗೆ ಸಿಎಸ್‌ಕೆ ತಂಡಕ್ಕಾಗಿ ಆಡಿದರು. ಮುಂದಿನ ಆವೃತ್ತಿಯಲ್ಲಿ ಇದೀಗ ನಿಷ್ಕ್ರಿಯವಾಗಿರುವ ರೈಸಿಂಗ್ ಪುಣೆ ಸೂಪರ್‌ಜೈಂಟ್‌ ತಂಡಕ್ಕಾಗಿ ಅಶ್ವಿನ್-ಧೋನಿ ಜೊತೆಯಾಟ ಮುಂದುವರೆಯಿತು.

Ravichandran Ashwin Wants To Play For CSK Again; Is Goodbye to Rajasthan Royals?

ನಂತರ ರವಿಚಂದ್ರನ್ ಅಶ್ವಿನ್ ಗಾಯದ ಕಾರಣದಿಂದಾಗಿ 2017ರ ಐಪಿಎಲ್ ಆವೃತ್ತಿಯನ್ನು ಕಳೆದುಕೊಂಡರು. ಆ ಬಳಿಕ ಎಂಎಸ್ ಧೋನಿ ಎರಡು ವರ್ಷಗಳ ನಿಷೇಧವನ್ನು ಅನುಭವಿಸಿದ ನಂತರ, ತಂಡವು ಸಕ್ರಿಯವಾಗಿದ್ದರಿಂದ ಸಿಎಸ್‌ಕೆ ತಂಡಕ್ಕೆ ಮರಳಿದರು.

ಆದರೆ, ರವಿಚಂದ್ರನ್ ಅಶ್ವಿನ್ ಅವರಿಗೆ ಸಿಎಸ್‌ಕೆ ತಂಡಕ್ಕೆ ಮರಳಲು ಸಾಧ್ಯವಾಗಲಿಲ್ಲ. ಪಂಜಾಬ್ ಕಿಂಗ್ಸ್ (ಆಗಿನ ಕಿಂಗ್ಸ್ XI ಪಂಜಾಬ್), ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್‌ನಂತಹ ತಂಡಗಳಿಗೆ ಆಡಿದರು. ಮತ್ತೊಂದೆಡೆ, ಎಂಎಸ್ ಧೋನಿ ಸಿಎಸ್‌ಕೆ ತಂಡದ ನಾಯಕನಾಗಿ ಮುಂದುವರೆದಿದ್ದಾರೆ.

ಭಾರತ ತಂಡದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 197 ಐಪಿಎಲ್ ಪಂದ್ಯಗಳನ್ನು ಆಡಿದ್ದು, 171 ವಿಕೆಟ್ ಕಬಳಿಸಿದ್ದಾರೆ. ಅವರ ಎಕಾನಮಿ ದರ 7.01 ಆಗಿದ್ದು, ಅವರು 714 ರನ್ ಗಳಿಸಿದ್ದಾರೆ.

ಇದೇ ವೇಳೆ, ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶ್ರೇಷ್ಠ ಸಕ್ರಿಯ ಆಟಗಾರರಲ್ಲಿ ಒಬ್ಬರಾಗಿದ್ದಾರೆ. 95 ಟೆಸ್ಟ್ ಪಂದ್ಯಗಳಲ್ಲಿ 490 ವಿಕೆಟ್‌ಗಳೊಂದಿಗೆ, ಆಸ್ಟ್ರೇಲಿಯಾದ ನಾಥನ್ ಲಿಯಾನ್ (509 ವಿಕೆಟ್) ನಂತರ ಸಕ್ರಿಯ ಸ್ಪಿನ್ನರ್‌ಗಳಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.

ಇದೇ ಜನವರಿ ತಿಂಗಳಾಂತ್ಯದಲ್ಲಿ ಆರಂಭವಾಗಲಿರುವ ಐದು ಪಂದ್ಯಗಳ ಸರಣಿಯಲ್ಲಿ ಭಾರತ ತಂಡ ಇಂಗ್ಲೆಂಡ್ ತಂಡವನ್ನು ಎದುರಿಸಲಿದ್ದು, ನಾಥನ್ ಲಿಯಾನ್ ಅವರನ್ನು ಹಿಂದಿಕ್ಕಲು ರವಿಚಂದ್ರನ್‌ ಅಶ್ವಿನ್‌ಗೆ ಉತ್ತಮ ಅವಕಾಶವಿದೆ.

ಅನಿಲ್ ಕುಂಬ್ಳೆ ನಂತರ 500 ಅಥವಾ ಅದಕ್ಕಿಂತ ಹೆಚ್ಚು ಟೆಸ್ಟ್ ವಿಕೆಟ್‌ಗಳನ್ನು ಪಡೆದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಅಶ್ವಿನ್‌ಗೆ ಕೇವಲ 10 ವಿಕೆಟ್‌ಗಳ ಅಗತ್ಯವಿದೆ.

Story first published: Thursday, January 11, 2024, 17:55 [IST]
Other articles published on Jan 11, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+