Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಶ್ರೀಲಂಕಾ ವಿರುದ್ಧ ಶತಕ ಸಿಡಿಸಿ ಮಿಂಚಿದ ರವೀಂದ್ರ ಜಡೇಜಾ: 450ರ ಗಡಿ ದಾಟಿದ ಭಾರತ

Ravindra jadeja

ಮೊಹಾಲಿಯಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಲ್‌ರೌಂಡರ್ ರವೀಂದ್ರ ಜಡೇಜಾ ಶತಕ ದಾಖಲಿಸುವ ಮೂಲಕ ಟೀಂ ಇಂಡಿಯಾದ ಬೃಹತ್‌ ಮೊತ್ತಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡನೇ ಶತಕ ದಾಖಲಿಸಿದ್ದ ಜಡ್ಡು 160ನೇ ಎಸೆತದಲ್ಲಿ 100 ರನ್ ದಾಖಲಿಸಿದರು. ಈಗಾಗಲೇ ಟೆಸ್ಟ್ ಕ್ರಿಕೆಟ್‌ನಲ್ಲಿ 17 ಅರ್ಧಶತಕ ದಾಖಲಿಸಿರುವ ಜಡೇಜಾ ಎರಡನೇ ಶತಕ ದಾಖಲಿಸುವ ಮೂಲಕ ಮಿಂಚಿನ ಆಟವಾಡಿದರು.

ಮೊದಲನೇ ದಿನದಾಟದಲ್ಲಿ ಏಳನೇ ವಿಕೆಟ್‌ಗೆ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಜೊತೆಯಾಗಿ ನಿಂತು ದಿನದಾಟದಂತ್ಯಕ್ಕೆ ಜಡೇಜಾ ಅಜೇಯ 45 ರನ್ ಕಲೆಹಾಕಿದ್ದರು. ಈ ಇನ್ನಿಂಗ್ಸ್‌ ಅನ್ನು ಮುಂದುವರಿಸಿದ ಜಡೇಜಾ ಮೂರಂಕಿ ಗಡಿ ದಾಟಿದ್ದಾರೆ. ಊಟದ ವಿರಾಮದ ಹೊತ್ತಿಗೆ ಜಡೇಜಾ ಅಜೇಯ 102 ರನ್ ಕಲೆಹಾಕಿದ್ದಾರೆ. ಇವರ ಇನ್ನಿಂಗ್ಸ್‌ನಲ್ಲಿ 10 ಬೌಂಡರಿಗಳಿವೆ.

ಇನ್ನು ಏಳನೇ ವಿಕೆಟ್‌ಗೆ ಈ ಜೋಡಿ 130 ರನ್‌ಗಳ ಅಮೂಲ್ಯ ಜೊತೆಯಾಟದ ಮೂಲಕ ತಂಡದ ಸ್ಕೋರನ್ನು 500ರ ಗಡಿಯತ್ತ ತಲುಪಿಸಿದ್ದಾರೆ. ಊಟದ ವಿರಾಮಕ್ಕೆ ಕೆಲ ಸಮಯದ ಹಿಂದೆ ಅರ್ಧಶತಕ ದಾಖಲಿಸಿ ಉತ್ತಮವಾಗಿ ಆಡುತ್ತಿದ್ದ ರವಿಚಂದ್ರನ್ ಅಶ್ವಿನ್ 82 ಎಸೆತಗಳಲ್ಲಿ 61 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದ್ರು. ಸುರಂಗ ಲಕ್ಮಲ್ ಬೌಲಿಂಗ್‌ನಲ್ಲಿ ಅಶ್ವಿನ್ ಡಿಕ್ವೆಲ್ಲಾಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡ್ರು.

ಊಟದ ವಿರಾಮದ ಹೊತ್ತಿಗೆ ಭಾರತ 7 ವಿಕೆಟ್ ನಷ್ಟಕ್ಕೆ 468 ರನ್ ಕಲೆಹಾಕಿದೆ. ಜಡೇಜಾ ಅಜೇಯ 102, ಜಯಂತ್ ಯಾದವ್ ಅಜೇಯ 2 ರನ್ ಕಲೆಹಾಕಿದ್ದಾರೆ.

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ,ಮ್ಯಾಜಿಕ್‌ ಸ್ಪಿನ್ನರ್ ಶೇನ್ ವಾರ್ನ್ ನಿಧನ | Oneindia Kannada

Story first published: Saturday, March 5, 2022, 14:03 [IST]
Other articles published on Mar 5, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+