For Quick Alerts
ALLOW NOTIFICATIONS  
For Daily Alerts
 

ಕಪಿಲ್ ದೇವ್ ದಾಖಲೆ ಪುಡಿಗಟ್ಟಿದ ರವೀಂದ್ರ ಜಡೇಜಾ: 7ನೇ ಕ್ರಮಾಂಕದಲ್ಲಿ ಗರಿಷ್ಠ ರನ್

Ravindra jadeja

ಮೊಹಾಲಿಯಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ ದಾಖಲೆಯ ಆಟವಾಡಿದ್ದಾರೆ. ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದರೂ ಶತಕ ಸಿಡಿಸಿ ಮಿಂಚಿದ ಜಡ್ಡು ದಶಕಗಳ ದಾಖಲೆಯನ್ನ ಪುಡಿಗಟ್ಟಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡನೇ ಶತಕ ದಾಖಲಿಸಿ ಜಡೇಜಾ ತನ್ನ 160ನೇ ಎಸೆತದಲ್ಲಿ 100 ರನ್ ದಾಖಲಿಸಿದರು. ಇದಾದ ಬಳಿಕ ತಮ್ಮ ಅಮೋಘ ಇನ್ನಿಂಗ್ಸ್ ಮುಂದುವರಿಸಿದ್ದ ಎಡಗೈ ಆಲ್‌ರೌಂಡರ್ ಡಿಕ್ಲೇರ್ ಘೋಷಿಸುವ ಮೊದಲು 228 ಎಸೆತಗಳಲ್ಲಿ ಅಜೇಯ 175 ರನ್ ಕಲೆಹಾಕಿದ್ದಾರೆ. ಇವರ ಇನ್ನಿಂಗ್ಸ್‌ನಲ್ಲಿ 17 ಬೌಂಡರಿ ಮತ್ತು 3 ಅಮೋಘ ಸಿಕ್ಸರ್‌ಗಳಿದ್ದವು.

ಜಡೇಜಾ ಈ ಅಮೋಘ ಆಟದೊಂದಿಗೆ ಭಾರತ ಮಾಜಿ ನಾಯಕ ಕಪಿಲ್‌ದೇವ್‌ರ 36 ವರ್ಷಗಳ ಹಳೆಯ ದಾಖಲೆ ನುಚ್ಚು ನೂರಾಗಿದೆ.

1986 ರಲ್ಲಿ ಕಾನ್ಪುರದಲ್ಲಿ ಶ್ರೀಲಂಕಾ ವಿರುದ್ಧ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ಕಪಿಲ್ ದೇವ್ 163 ರನ್ ಗಳಿಸಿದ್ದರು. ಆದ್ರೀಗ ಜಡ್ಡು, ಕಪಿಲ್ ದೇವ್ ಅವರನ್ನು ಹಿಂದಿಕ್ಕಿ ಹೊಸ ಸಾಧನೆ ಮಾಡಿದ್ದಾರೆ.

ಟೆಸ್ಟ್‌ನಲ್ಲಿ 7 ಅಥವಾ ಅದಕ್ಕಿಂತ ಕಡಿಮೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಭಾರತೀಯ ಕ್ರಿಕೆಟಿಗರಿಲ್ಲಿ ಇದುವರೆಗೂ ಮೂವರು 150 ಅಥವಾ ಅದಕ್ಕಿಂತ ಹೆಚ್ಚಿನ ಸ್ಕೋರ್‌ಗಳನ್ನು ಮಾಡಿದ್ದಾರೆ. ಭಾರತದಲ್ಲಿ ಜಡೇಜಾ, ಕಪಿಲ್ ಮತ್ತು ರಿಷಬ್ ಪಂತ್ ಈ ಸಾಧನೆ ಮಾಡಿದ್ದಾರೆ.

ಮೊದಲನೇ ದಿನದಾಟದಲ್ಲಿ ಏಳನೇ ವಿಕೆಟ್‌ಗೆ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಜೊತೆಯಾಗಿ ನಿಂತು ದಿನದಾಟದಂತ್ಯಕ್ಕೆ ಜಡೇಜಾ ಅಜೇಯ 45 ರನ್ ಕಲೆಹಾಕಿದ್ದರು. ಈ ಇನ್ನಿಂಗ್ಸ್‌ ಅನ್ನು ಮುಂದುವರಿಸಿದ ಜಡೇಜಾ ಇಂದು ಮೂರಂಕಿ ಗಡಿ ದಾಟಿದ್ರು.

ಭಾರತ ಮೊದಲ ಇನ್ನಿಂಗ್ಸ್ 8 ವಿಕೆಟ್ ನಷ್ಟಕ್ಕೆ 574 ರನ್‌ಗಳಿಗೆ ಡಿಕ್ಲೇರ್‌ ಮಾಡಿಕೊಂಡಿದೆ. ಶ್ರೀಲಂಕಾ 100 ರನ್‌ಗಳೊಳಗೆ ನಾಲ್ಕು ವಿಕೆಟ್ ಕಳೆದುಕೊಂಡಿದೆ.

Story first published: Saturday, March 5, 2022, 17:48 [IST]
Other articles published on Mar 5, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+