ರವೀಂದ್ರ ಜಡೇಜಾಗೆ ಬಿಸಿಸಿಐ A+ ಗ್ರೇಡ್ ಕಾಂಟ್ರ್ಯಾಕ್ಟ್ ನೀಡಬೇಕು: ವಾಸಿಂ ಜಾಫರ್

ಟೀಂ ಇಂಡಿಯಾಕ್ಕೆ ಕಂಬ್ಯಾಕ್ ಮಾಡಿದ ಟೆಸ್ಟ್ ಸರಣಿಯಲ್ಲೇ ಅದ್ಭುತ ಪ್ರದರ್ಶನ ನೀಡುತ್ತಿರುವ ಆಲ್‌ರೌಂಡರ ರವೀಂದ್ರ ಜಡೇಜಾ ಪ್ರದರ್ಶನದ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅಬ್ಬರಿಸಿದ ಜಡ್ಡುಗೆ ಪ್ರಶಂಸೆಯ ಸುರಿಮಳೆ ವ್ಯಕ್ತವಾಗಿದೆ.
ಮೊಹಾಲಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಇನ್ನಿಂಗ್ಸ್ ಸೇರಿದಂತೆ ಬರೋಬ್ಬರಿ 222ರನ್‌ಗಳ ಭಾರೀ ಜಯ ಸಾಧಿಸಿತು. ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೆಸ್ಟ್ ಫಾರ್ಮೆಟ್‌ನಲ್ಲಿ ಮೊದಲ ಬಾರಿಗೆ ಮುನ್ನಡೆಯುತ್ತಿರುವ ಭಾರತ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ರೋಹಿತ್ ಶರ್ಮಾ ಪೂರ್ಣ ಪ್ರಮಾಣದ ನಾಯಕತ್ವ ವಹಿಸಿಕೊಂಡ ಬಳಿಕ ಮೂರು ಫಾರ್ಮೆಟ್‌ನಲ್ಲಿ ಒಟ್ಟು 13 ಪಂದ್ಯಗಳಲ್ಲಿ ಭಾರತ ತಂಡವನ್ನ ಮುನ್ನಡೆಸಿದ್ದಾರೆ. ಪ್ರತಿ ಪಂದ್ಯದಲ್ಲೂ ಭಾರತವನ್ನ ಗೆಲ್ಲಿಸಿದ ಕೀರ್ತಿ ಇವರಿಗಿದೆ.

ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ವಾಸಿಂ ಜಾಫರ್
ಟೀಂ ಇಂಡಿಯಾ ಮಾಜಿ ಆಟಗಾರ ವಾಸಿಂ ಜಾಫರ್, ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ತುಂಬಾನೆ ಮೆಚ್ಚುಗೆಯ ಮಾತನಾಡಿದ್ದಾರೆ. ರೋಹಿತ್ ನಾಯಕತ್ವದ ಕೌಶಲ್ಯಗಳ ಕುರಿತು ಮಾತನಾಡಿರುವ ರೋಹಿತ್ ಉತ್ತಮ ನಾಯಕ ಎಂದಿದ್ದಾರೆ.
''ಅವರು ದೀರ್ಘಕಾಲದವರೆಗೆ ಸಣ್ಣ ಸ್ವರೂಪಗಳಲ್ಲಿ ನಾಯಕತ್ವವನ್ನು ಮಾಡುತ್ತಿದ್ದಾರೆ ಮತ್ತು ಅವರು ಆರಾಮದಾಯಕವಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಬಹಳಷ್ಟು ಆಟಗಾರರು ಖುಷಿಯಾಗಿದ್ದಾರೆ. ಏಕೆಂದರೆ ಅವರು ಆಟಗಾರರಿಗೆ ಸಾಕಷ್ಟು ಸ್ವಾತಂತ್ರ್ಯವನ್ನು ನೀಡುತ್ತಾರೆ. ಅವರು ತಮ್ಮ ಫೀಲ್ಡ್ ಪ್ಲೇಸ್‌ಮೆಂಟ್ ಮತ್ತು ಬೌಲಿಂಗ್ ಬದಲಾವಣೆಗಳನ್ನು ಸಂಪೂರ್ಣವಾಗಿ ಸ್ಪಾಟ್ ಆನ್ ಆಗಿ ಮಾಡುತ್ತಾರೆ. ವಿಹಾರಿಯನ್ನ ಪ್ಲೇಯಿಂಗ್ 11ನಲ್ಲಿ ಆಡಿಸುವುದರಲ್ಲೂ ಅವರು ಗಮನ ಸೆಳೆದಿದ್ದರು. ನಾನು ಅದನ್ನು ಇಷ್ಟಪಟ್ಟೆ, "ಎಂದು ಜಾಫರ್ ಇಎಸ್‌ಪಿಎನ್ ಕ್ರಿಕ್‌ಇನ್‌ಫೋದಲ್ಲಿ ನಡೆದ ಚರ್ಚೆಯಲ್ಲಿ ಹೇಳಿದರು.

ರೋಹಿತ್ ಶರ್ಮಾ ನಾಯಕತ್ವವು ಪಾಸಿಟಿವ್ ಆಗಿದೆ
ಹಿಟ್‌ಮ್ಯಾನ್ ರೋಹಿತ್ ಶರ್ಮಾ ನಾಯಕತ್ವವು ಸರಿಯಾದ ದಾರಿಯಲ್ಲಿ ನಡೆದುಕೊಂಡು ಸಾಗಿದೆ. ಫಾಲೋ-ಆನ್ ಜಾರಿಗೊಳಿಸಲು ರೋಹಿತ್ ಅವರ ನಿರ್ಧಾರವು ಹೆಚ್ಚು ಸಕಾರಾತ್ಮಕವಾಗಿದೆ ಎಂದು ಜಾಫರ್ ಹೇಳಿದರು.
"ರೋಹಿತ್ ಫಾಲೋ-ಆನ್ ಜಾರಿಗೊಳಿಸಿದರು ಮತ್ತು ಟೆಸ್ಟ್ ಅನ್ನು ನಾಲ್ಕು ಮತ್ತು ಐದನೇ ದಿನಕ್ಕೆ ಎಳೆಯಲಿಲ್ಲ. ಇದು ತಂಡವನ್ನ ಮುನ್ನಡೆಸುವ ಅತ್ಯಂತ ಸಕಾರಾತ್ಮಕ ಮಾರ್ಗವಾಗಿದೆ. ಭಾರತೀಯ ಶಿಬಿರದಲ್ಲಿ ನೀವು ನಗುತ್ತಿರುವ ಮುಖಗಳನ್ನು ನೋಡಬಹುದು ಮತ್ತು ಅದು ನೋಡಲು ಸಂತೋಷವಾಗಿದೆ, "ಎಂದು ಅವರು ಹೇಳಿದರು.
RCB Captain IPL 2022: ಕೊನೆಗೂ ನೂತನ ನಾಯಕನ ಘೋಷಣೆಯ ದಿನಾಂಕ ಪ್ರಕಟಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು

ರವೀಂದ್ರ ಜಡೇಜಾಗೆ ಬಿಸಿಸಿಐ ಉನ್ನತ ಗ್ರೇಡ್ ನೀಡಬೇಕು
ಟೀಂ ಇಂಡಿಯಾ ಆಲ್‌ರೌಂಡರ್ ರವೀಂದ್ರ ಜಡೇಜಾ ಅಜೇಯ 175 ರನ್‌ಗಳನ್ನ ಕಲೆಹಾಕುವ ಮೂಲಕ ಮಿಂಚಿನ ಆಟವಾಡಿದ್ರು. ಬ್ಯಾಟಿಂಗ್ ಅಷ್ಟೇ ಅಲ್ಲದೆ ಬೌಲಿಂಗ್‌ನಲ್ಲಿ ಒಟ್ಟು 9 ವಿಕೆಟ್‌ಗಳನ್ನ ಕಬಳಿಸಿದ ಜಡ್ಡು ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದು ಮಿಂಚಿದ್ರು. ಆದ್ರೆ ಜಡ್ಡು ಎ ಗ್ರೇಡ್ ಗುತ್ತಿಗೆ ಪಡೆದಿದ್ದು, ಇನ್ನೂ ಉನ್ನತ ಸ್ಥಾನ ಪಡೆಯಲು ಅರ್ಹರು ಎಂದಿದ್ದಾರೆ.
'' ಜಡೇಜಾ ತಮ್ಮ ಪ್ರದರ್ಶನದ ಮೂಲಕ A+ ಕೇಂದ್ರೀಯ ಗುತ್ತಿಗೆ ಪಡೆಯುವ ಅರ್ಹತೆಯುಳ್ಳವರು ಎಂದು ತೋರಿಸಿಕೊಟ್ಟಿದ್ದಾರೆ. ಆದ್ರೆ ಅವರಿಗೆ ಆ ಸ್ಥಾನವನ್ನ ನೀಡಿಲ್ಲ. ನನ್ನ ಪ್ರಕಾರ ಆತನ ಪ್ರದರ್ಶನ ಮತ್ತು ಕೌಶಲ್ಯತೆ ಜೊತೆಗೆ ಬ್ಯಾಟಿಂಗ್ ಬೌಲಿಂಗ್‌ನಲ್ಲಿ ಭಾರತದ ಪರ ಅತ್ಯಂತ ವಿಶೇಷವಾದ ಆಟಗಾರನಾಗಿದ್ದಾನೆ'' ಎಂದು ವಾಸಿಂ ಜಾಫರ್ ಹೇಳಿದ್ದಾರೆ.
DC IPL 2022 Schedule : ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

2022ರ ಆಟಗಾರರ ಕಾಂಟ್ರಾಕ್ಟ್ ಲಿಸ್ಟ್
ಗ್ರೇಡ್ A+ (7 ಕೋಟಿ ರೂ.): ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ
ಗ್ರೇಡ್ A (5 ಕೋಟಿ ರೂ.): ರವೀಂದ್ರ ಜಡೇಜಾ, ಕೆಎಲ್ ರಾಹುಲ್, ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್, ರಿಷಬ್ ಪಂತ್ , ಮೊಹಮ್ಮದ್ ಸಿರಾಜ್
ಗ್ರೇಡ್ B (3 ಕೋಟಿ ರೂ.): ಉಮೇಶ್ ಯಾದವ್, ಭುವನೇಶ್ವರ್ ಕುಮಾರ್, ವೃದ್ಧಿಮಾನ್ ಸಹಾ, ಶಾರ್ದೂಲ್ ಠಾಕೂರ್, ಇಶಾಂತ್ ಶರ್ಮಾ, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ
ಗ್ರೇಡ್ C (1 ಕೋಟಿ ರೂ.): ಮಯಾಂಕ್ ಅಗರ್ವಾಲ್, ಯುಜವೇಂದ್ರ ಚಹಾಲ್, ದೀಪಕ್ ಚಾಹರ್, ಶುಭಮನ್ ಗಿಲ್, ಹನುಮ ವಿಹಾರಿ, ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ಸೂರ್ಯಕುಮಾರ್ ಯಾದವ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications