For Quick Alerts
ALLOW NOTIFICATIONS  
For Daily Alerts
 

IND vs AUS 3rd Test: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಸಾಧನೆಗೈದ ಎರಡನೇ ಭಾರತೀಯ ರವೀಂದ್ರ ಜಡೇಜಾ

Ravindra Jadeja Is The 2nd Indian Cricketer To Complete 5000 Runs And 500 Wickets In International Cricket

ಇಂದೋರ್‌ನ ಹೋಳ್ಕರ್ ಸ್ಟೇಡಿಯಂನಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ 3ನೇ ಪಂದ್ಯದ ಮೊದಲ ದಿನವಾದ ಬುಧವಾರ, ಮಾರ್ಚ್ 1ರಂದು ಭಾರತದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಬೃಹತ್ ಮೈಲಿಗಲ್ಲು ಸ್ಥಾಪಿಸಿದರು.

34ರ ಹರೆಯದ ಆಲ್‌ರೌಂಡರ್ ರವೀಂದ್ರ ಜಡೇಜಾ 1983ರ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಕಪಿಲ್ ದೇವ್ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 500 ವಿಕೆಟ್‌ಗಳು ಮತ್ತು ಭಾರತದ ಪರ 5000 ರನ್ ಪೂರ್ಣಗೊಳಿಸಿದ ಎರಡನೇ ಭಾರತೀಯ ಆಟಗಾರ ಎಂಬ ದಾಖಲೆ ನಿರ್ಮಿಸಿದರು.

ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್‌ನಲ್ಲಿ ಟ್ರಾವಿಸ್ ಹೆಡ್ ವಿಕೆಟ್ ಪಡೆಯುತ್ತಿದ್ದಂತೆಯೇ ರವೀಂದ್ರ ಜಡೇಜಾ 500 ಅಂತಾರಾಷ್ಟ್ರೀಯ ವಿಕೆಟ್‌ ಪೂರ್ಣಗೊಳಿಸಿದರು.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 500 ವಿಕೆಟ್‌ಗಳ ಜೊತೆಗೆ 5000 ರನ್

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 500 ವಿಕೆಟ್‌ಗಳ ಜೊತೆಗೆ 5000 ರನ್

ರವೀಂದ್ರ ಜಡೇಜಾ ಭಾರತ ತಂಡದ ಪರ ತಮ್ಮ 63ನೇ ಟೆಸ್ಟ್ ಆಡುತ್ತಿದ್ದು, ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ತಮ್ಮ ಮೊದಲ ಓವರ್‌ನ ನಾಲ್ಕನೇ ಎಸೆತದಲ್ಲಿ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್ ಅವರನ್ನು ಔಟ್ ಮಾಡಿದರು. ಆದ್ದರಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 500 ವಿಕೆಟ್‌ಗಳ ಜೊತೆಗೆ 5000 ರನ್ ಗಳಿಸಿದ ಅವಳಿ ದಾಖಲೆ ಬರೆದರು.

ರವೀಂದ್ರ ಜಡೇಜಾ 2023ರ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಲ್‌ರೌಂಡರ್ ಪ್ರದರ್ಶನ ನೀಡಿದ್ದಾರೆ. ಮೊಣಕಾಲಿನ ಗಾಯದಿಂದ ಚೇತರಿಸಿಕೊಂಡು ಬಂದ ನಂತರ ಅತ್ಯುತ್ತಮವಾಗಿ ಪುನರಾಗಮನ ಮಾಡಿದ್ದಾರೆ.

ಟೆಸ್ಟ್‌ನಲ್ಲಿ 2623 ರನ್, ಏಕದಿನ ಪಂದ್ಯಗಳಲ್ಲಿ 2447 ರನ್

ಟೆಸ್ಟ್‌ನಲ್ಲಿ 2623 ರನ್, ಏಕದಿನ ಪಂದ್ಯಗಳಲ್ಲಿ 2447 ರನ್

ಎಡಗೈ ಆಲ್‌ರೌಂಡರ್ ರವೀಂದ್ರ ಜಡೇಜಾ ಭಾರತ ತಂಡದ ಪರ ಒಟ್ಟು 63 ಟೆಸ್ಟ್, 171 ಏಕದಿನ ಮತ್ತು 64 ಟಿ20 ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ 2623 ರನ್, ಏಕದಿನ ಪಂದ್ಯಗಳಲ್ಲಿ 2447 ರನ್ ಮತ್ತು ಟಿ20 ಕ್ರಿಕೆಟ್‌ನಲ್ಲಿ 457 ರನ್ ಬಾರಿಸಿದ್ದಾರೆ.

ಇನ್ನು ರವೀಂದ್ರ ಜಡೇಜಾ ಅವರ ಬೌಲಿಂಗ್ ಅಂಕಿಅಂಶಗಳಿಗೆ ಸಂಬಂಧಿಸಿದಂತೆ, ಟೆಸ್ಟ್ ಕ್ರಿಕೆಟ್‌ನಲ್ಲಿ 260 ವಿಕೆಟ್, ಏಕದಿನ ಪಂದ್ಯಗಳಲ್ಲಿ 189 ವಿಕೆಟ್ ಮತ್ತು ಟಿ20 ಕ್ರಿಕೆಟ್‌ನಲ್ಲಿ 51 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಭಾರತ vs ಆಸ್ಟ್ರೇಲಿಯಾ ಮೂರನೇ ಪಂದ್ಯದ ವರದಿ

ಭಾರತ vs ಆಸ್ಟ್ರೇಲಿಯಾ ಮೂರನೇ ಪಂದ್ಯದ ವರದಿ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ಆಸ್ಟ್ರೇಲಿಯಾ ಸ್ಪಿನ್ನರ್‌ಗಳಾದ ಮ್ಯಾಥ್ಯೂ ಕುಹ್ನೆಮನ್, ನಾಥನ್ ಲಿಯಾನ್ ಮತ್ತು ಟಾಡ್ ಮರ್ಫಿ ಸ್ಪಿನ್ ಬಲೆಗೆ ಸಿಲುಕಿ ಮೊದಲ ದಿನದ ಮೊದಲ ಇನ್ನಿಂಗ್ಸ್‌ನಲ್ಲಿ 33.2 ಓವರ್‌ಗಳಲ್ಲಿ 109 ರನ್‌ಗಳಿಗೆ ಅಲೌಟ್ ಆಯಿತು.

ಭಾರತ ತಂಡದ ಪರ ಬ್ಯಾಟಿಂಗ್‌ನಲ್ಲಿ ನಾಯಕ ರೋಹಿತ್ ಶರ್ಮಾ 12 ರನ್, ಶುಭ್ಮನ್ ಗಿಲ್ 21 ರನ್, ಚೇತೇಶ್ವರ ಪೂಜಾರ 1 ರನ್, 200ನೇ ಟೆಸ್ಟ್ ಪಂದ್ಯವಾಡಿದ ವಿರಾಟ್ ಕೊಹ್ಲಿ 22 ರನ್, ರವೀಂದ್ರ ಜಡೇಜಾ 4 ರನ್, ಶ್ರೇಯಸ್ ಅಯ್ಯರ್ 0, ಶ್ರೀಕರ್ ಭರತ್ 17 ರನ್, ಅಕ್ಷರ್ ಪಟೇಲ್ 12 ರನ್, ರವಿಚಂದ್ರನ್ ಅಶ್ವಿನ್ 3 ರನ್, ಉಮೇಶ್ ಯಾದವ್ 17 ರನ್ ಮತ್ತು ಮೊಹಮ್ಮದ್ ಸಿರಾಜ್ 0 ಗಳಿಸಿದರು.

ಮ್ಯಾಥ್ಯೂ ಕುಹ್ನೆಮನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಚೊಚ್ಚಲ ಐದು ವಿಕೆಟ್ ಗೊಂಚಲು

ಮ್ಯಾಥ್ಯೂ ಕುಹ್ನೆಮನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಚೊಚ್ಚಲ ಐದು ವಿಕೆಟ್ ಗೊಂಚಲು

ಇನ್ನು ಆಸ್ಟ್ರೇಲಿಯಾ ತಂಡದ ಪರ ಬೌಲಿಂಗ್‌ನಲ್ಲಿ ಸ್ಪಿನ್ನರ್ ಮ್ಯಾಥ್ಯೂ ಕುಹ್ನೆಮನ್ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ಐದು ವಿಕೆಟ್ ಗೊಂಚಲು ಸಾಧನೆ ಮಾಡಿದರು. 9 ಓವರ್ ಬೌಲಿಂಗ್‌ನಲ್ಲಿ 16 ರನ್ ನೀಡಿ 5 ವಿಕೆಟ್ ಪಡೆದು ಭಾರತದ ಬ್ಯಾಟಿಂಗ್ ಬಲವನ್ನು ಮುರಿದರು.

ಇನ್ನುಳಿದಂತೆ ಆಫ್ ಸ್ಪಿನ್ನರ್ ನಾಥನ್ ಲಿಯಾನ್ 11.2 ಓವರ್‌ಗಳಲ್ಲಿ 35 ರನ್ ನೀಡಿ 3 ವಿಕೆಟ್ ಕಿತ್ತರು. ಮತ್ತೊಬ್ಬ ಸ್ಪಿನ್ನರ್ ಟಾಡ್ ಮರ್ಫಿ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಮೊದಲ ಇನ್ನಿಂಗ್ಸ್ ಆರಂಭಿಸಿರುವ ಪ್ರವಾಸಿ ಆಸ್ಟ್ರೇಲಿಯಾ ತಂಡ 38 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 115 ರನ್ ಗಳಿಸಿದ್ದು, ಉಸ್ಮಾನ್ ಖವಾಜಾ 56 ರನ್ ಮತ್ತು ಸ್ಟೀವನ್ ಸ್ಮಿತ್ 2 ರನ್ ಗಳಿಸಿ ಆಡುತ್ತಿದ್ದಾರೆ.

Story first published: Wednesday, March 1, 2023, 16:19 [IST]
Other articles published on Mar 1, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+